ಕೊರಟಗೆರೆ : ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಫೆಬ್ರವರಿ 8 ಮತ್ತು 9, 2026 ರಂದು 8ನೇ ವರ್ಷದ ವಾಲ್ಮೀಕಿ ಜಾತ್ರಾಯ ಯಶಸ್ಸಿಗೆ ಜನ ಸಹಭಾಗಿತ್ವ ಹೆಚ್ಚಿಸಲು ತಾಲ್ಲೂಕಿನ ವಾಲ್ಮೀಕಿ ಸಮುದಾಯ ಮುಖಂಡರು ಹಾಗೂ ಹರಪ್ಪನಹಳ್ಳಿಯ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಮಠದ ಪ್ರತಿನಿಧಿ ಹನುಮಂತರಾಜು ನೇತೃತ್ವದಲ್ಲಿ ಜಾತ್ರೆಯ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.
ಶತಮಾನಗಳಿಂದ ಶೋಷಣೆ ದೌರ್ಜನಕ್ಕೆ ಒಳಗಾದ ಸಮುದಾಯಗಳ ಜಾಗೃತಿಗಾಗಿ ವಾಲ್ಮೀಕಿ ಜಾತ್ರೆ ಸಾಕ್ಷಿಯಾಗುತ್ತದೆ ಎಂದು ತಾಲೂಕಿನ ಮಠದ ಪ್ರತಿನಿಧಿ ಹನುಮಂತರಾಜು ಮಾತನಾಡಿ ಹರಿಹರದಲ್ಲಿ ಫೇ 8&9 ರಂದು ನಡೆಯುವ ಎಂಟನೇ ವರ್ಷದ ವಾಲ್ಮೀಕಿ ಜಾತ್ರೆಯು ಸಾಂಪ್ರದಾಯಿಕವಾಗಿರದೆ ಜನಜಾಗೃತಿ ಮೂಡಿಸುವ ಜೊತೆಗೆ ವೈಚಾರಿಕ ಜಾತ್ರೆ ಇದಾಗಿದೆ. ಮಠದ 27ನೇ ವರ್ಷದ ವಾರ್ಷಿಕೋತ್ಸವ ಮತ್ತು ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿಗಳ 17ನೇ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ವೈಚಾರಿಕ ಆಶಯಗಳನ್ನು ಜನರಿಗೆ ತಿಳಿಸುವುದರ ಜೊತೆ ತಾಲೂಕಿನ ಹೋಬಳಿ ಮಟ್ಟದ ನಮ್ಮ ಸಮುದಾಯದವರನ್ನು ಜಾತ್ರೆಗೆ ಕರೆ ತರುವುದು ಈ ಸಮಯ ಉದ್ದೇಶ ಎಂದರು.

ಸಂದರ್ಭದಲ್ಲಿ ತಾಲ್ಲೂಕಿನ ಹಿರಿಯ ಸಮುದಾಯ ಮುಖಂಡರು ಕೋಟೆ ಸಿದ್ದಪ್ಪ. ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕರಾದ ರಂಗರಾಜು. ಪಟ್ಟಣ ಪಂಚಾಯತಿಯ ಮಾಜಿ ಸದಸ್ಯರು ಓಬಳರಾಜು. ಮಾಜಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಕೆ ವಿ. ಮಂಜುನಾಥ್. ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್. ಲಕ್ಷ್ಮಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು. ತಾ.ಮಹಿಳಾ ಮುಖಂಡರು ಕವಿತಾ. ಕಾಟಣ್ಣ ಪಾತಗಾನಹಳ್ಳಿ ಪಂಚಾಯಿತಿ ಅಧ್ಯಕ್ಷರು. ಕೃಷ್ಣಮೂರ್ತಿ ಗಿರೀಶ್ ನಾಗರಾಜ್ ಜಯರಾಮ್ ಮಧು ಮಠದ ಪ್ರತಿನಿಧಿ ಹನುಮಂತರಾಜು. ಭರತ್ ಸಾಮಾಜಿಕ ಕಾರ್ಯಕರ್ತ ಮುಂತಾದವರು ಉಪಸ್ಥಿತರಿದ್ದರು.
ವರದಿ : ನರಸಿಂಹಯ್ಯ ಹೊಸಕೋಟೆ
