ಟಿ.ನರಸೀಪುರ : ಜನವರಿ 26 ಸಂವಿಧಾನ ಜಾರಿಯಾದ ದಿನ.ಬಾಬಾಸಾಹೇಬ್ ಅಂಬೇಡ್ಕರ್ ರವರು ಭಾರತ ರಾಷ್ಟ್ರಕ್ಕೆ ಮಹಾಗ್ರಂಥ ಸಂವಿಧಾನವನ್ನು ಸಮರ್ಪಣೆ ಮಾಡಿದ ಪವಿತ್ರ ದಿನವಾಗಿದ್ದು ನಾವು ಈ ದಿನವನ್ನು ಸಂವಿಧಾನ ಸಮರ್ಪಣಾ ದಿನದ ಹಬ್ಬವನ್ನಾಗಿ ಮಾಡುತ್ತಿದ್ದೇವೆಂದು ಕರ್ನಾಟಕ ಪ್ರದೇಶ ದಲಿತ ಜಾಗೃತಿ ಸಮಿತಿಯು ಜಿಲ್ಲಾಧ್ಯಕ್ಷ ತುಂಬಲ ಮಂಜುನಾಥ್ ತಿಳಿಸಿದರು.
ಪಟ್ಟಣದ ಖಾಸಗಿ ನಿಲ್ದಾಣದ ಬಳಿ ಡಿಜೆಎಸ್ ಆಟೋ ಮಾಲೀಕರು ಹಾಗೂ ಚಾಲಕರ ಶಾಖೆ ಹಾಗೂ ನಾಮಫಲಕವನ್ನು ಅನಾವರಣಗೊಳಿಸಿ,ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಸಂಘದ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ,ಸಂಘದ ಆವರಣದಲ್ಲಿ ನೂತನ ವರ್ಷದ ಕ್ಯಾಲೆಂಡರ್ ನನ್ನು ಬಿಡುಗಡೆಗೊಳಿಸಿ ಮಾತನಾಡಿ, ಅಂಬೇಡ್ಕರ್ ರವರು ಈ ದೇಶದ ಸಮಸ್ತ ಭಾರತೀಯರಿಗೆ ಸಂವಿಧಾನದಲ್ಲಿ ಸಮಾನ ಅವಕಾಶ ಕಲ್ಪಿಸಿದ್ದಾರೆ.ಜೊತೆಗೆ ಶೋಷಿತ ಸಮುದಾಯಗಳನ್ನು ಇತರೆ ಸಮುದಾಯಗಳ ಜೊತೆ ಸಮನಾಂತರವಾಗಿ ಬಾಳ್ವೆ ನಡೆಸಲು ಕಾನೂನಾತ್ಮಕವಾಗಿ ಅವಕಾಶ ಕಲ್ಪಿಸಿದ್ದು,ಅದರ ಪ್ರತಿಫಲವೇ ಇಂದು ಭಾರತ ದೇಶದಲ್ಲಿ ಶೋಷಿತರು ಶೈಕ್ಷಣಿಕ,ರಾಜಕೀಯ ಹಾಗೂ ಆರ್ಥಿಕವಾಗಿ ಸಬಲರಾಗಿ ಬದುಕಲು ಸಹಕಾರಿಯಾಗಿದೆ.ಕೇವಲ ದಲಿತರು ಮಾತ್ರ ಮೀಸಲಾತಿ ಪಡೆಯುತ್ತಿಲ್ಲ.ಎಲ್ಲಾ ವರ್ಗದವರೂ ಮೀಸಲಾತಿ ಪಡೆದು ಎಲ್ಲಾ ರಂಗಗಳಲ್ಲೂ ಅವಕಾಶ ಪಡೆಯಲು ಸಾಧ್ಯವಾಗಿದೆ ಎಂದರು.

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಡಿಜೆಎಸ್ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಸಂಘದ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ಡಿಜೆಎಸ್ ಪದಾಧಿಕಾರಿಗಳಾದ ತಾಯೂರು ಮಧು,ಹಸುವಟ್ಟಿ ಸಂಭ್ರಮ್,ಆಟೋ ಸಂಘದ ಅಧ್ಯಕ್ಷ ಸ್ವಾಮಿ,ತುಂಬಲ ಸೋಮಣ್ಣ,ಕೆಬ್ಬೆ ಹುಂಡಿ ಬೀರೇಶ್,ಬನ್ನೂರು ತಿಮ್ಮೆಗೌಡ,ಕುಪ್ಪೆಗಾಲ ಮಂಜುನಾಥ್,ಮಾಡ್ರಳ್ಳಿ ರಂಗಸ್ವಾಮಿ, ಯಡದೊರೆ ಚಿರಂಜೀವಿ, ಬೆಟ್ಟಹಳ್ಳಿ ಗುರುಸ್ವಾಮಿ,ಆನಂದ,ಕೆಂಪಯ್ಯನಹುಂಡಿ ಮಾಧು,ಚೌಹಳ್ಳಿ ರಾಚಯ್ಯ,ಸೋಮನಾಥಪುರ ಮಹದೇವಣ್ಞ, ಕಾಂತರಾಜು ಸೇರಿದಂತೆ ಇತರರಿದ್ದರು.
ವರದಿ : ಎಂ ನಾಗೇಂದ್ರ ಕುಮಾರ್
