ಟಿ.ನರಸೀಪುರ : ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ,ನ್ಯಾಯಾಂಗ ಹಾಗೂ ಪತ್ರಿಕಾ ರಂಗಗಳಿದ್ದು ಈ ನಾಲ್ಕು ಅಂಗಗಳು ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಸಂವಿಧಾನ ನೀಡಿದ ಮಹನೀಯರ ಆಶೋತ್ತರಗಳನ್ನು ಈಡೇರಿಸಬಹುದೆಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಜಿ.ಹೆಚ್.ಹನುಮಂತುರವರು ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಹೊರ ಆವರಣದಲ್ಲಿ ನ್ಯಾಯಾಧೀಶರು ಧ್ವಜ ವಂದನೆ ಸ್ವೀಕರಿಸಿದ ನಂತಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ 1930 ರಲ್ಲಿ ಪೂರ್ಣ ಸ್ವರಾಜ್ ಎಂದು ಘೋಷಣೆಯಾಗುತ್ತದೆ. ಅದರ ಒಂದು ಸ್ಮರಣಿಕೆಯ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ.ನಮ್ಮ ದೇಶಕ್ಕೆ ಇಂದು ಸಂವಿಧಾನ ಜಾರಿಯಾದ ದಿನ. ಬ್ರಿಟೀಷರ ಆಳ್ವಿಕೆಯಲ್ಲಿ ಮೂರು ಪ್ರೆಸಿಡೆನ್ಸಿಗಳಿದ್ದವು ಅದರಲ್ಲಿ ಮದ್ರಾಸ್,ಬಾಂಬೆ,ಕಲ್ಕತ್ತಾ ಇವುಗಳೆಲ್ಲವನ್ನೂ ಒಗ್ಗೂಡಿಸಿ ಒಕ್ಕೂಟ ಮಾಡಿ ಗಣರಾಜ್ಯೋತ್ಸವ ಮಾಡಲಾಯಿತೆಂದರು.

ಶಾಸಕಾಂಗ, ಕಾರ್ಯಾಂಗ ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಿಲ್ಲವೆಂದಾಗ ಅಂತಿಮವಾಗಿ ನ್ಯಾಯಾಂಗದ ಬಳಿ ಬರುವವರಿಗೆ ಸೂಕ್ತ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ನ್ಯಾಯಾಂಗ ಇಲಾಖೆಯಲ್ಲಿನ ನಾವೆಲ್ಲರೂ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು.
ಜಿ.ಹೆಚ್.ಹನುಮಂತು
ಹಿರಿಯ ಶ್ರೇಣಿ ನ್ಯಾಯಾಧೀಶರು
ಟಿ.ನರಸೀಪುರ.

ಪಟ್ಟಣದಲ್ಲಿ ಅತ್ಯಂತ ಸಡಗರ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ. ಪೊಲೀಸ್ ಇಲಾಖೆ ವತಿಯಿಂದ ಧ್ವಜವಂದನೆ…ಪುರಸಭೆ, ತಾಲ್ಲೂಕು ಆಡಳಿತ ಸೇರಿದಂತೆ ಹಲವು ಸರ್ಕಾರಿ ಇಲಾಖೆಗಳಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಧೀಶರಾದ ಹೆಚ್.ಆರ್.ಸಚಿನ್,ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಿವೇದಿತ,ಆರಕ್ಷಕ ನಿರೀಕ್ಷಕರಾದ ಧನಂಜಯ್,ಜಗದೀಶ್ ಧೂಳ್ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷರಾದ ತೊಟ್ಟವಾಡಿ ಮಹದೇವಸ್ವಾಮಿ,ಕಾರ್ಯದರ್ಶಿ ಸೋಮಣ್ಣ,ಖಜಾಂಚಿ,ಮಹದೇವಸ್ವಾಮಿ, ಮಹದೇವಸ್ವಾಮಿ,ಮಾದಪ್ರ ,ಶಿವಣ್ಣ,ಜಯದೇವಣ್ಣ, ಪಾಲಾಕ್ಷ,ಉಮೇಶ, ಶಂಭುಲಿಂಗಸ್ವಾಮಿ ,ಸಿದ್ದರಾಜು,ರಂಗಯ್ಯ ಸೇರಿದಂತೆ ಇತರರಿದ್ದರು.
ಎಂ. ನಾಗೇಂದ್ರ ಕುಮಾರ್
