ಆಧುನಿಕ ಜೈವಿಕ ಮತ್ತು ಮಾಹಿತಿ ತಂತ್ರಜ್ಞಾನ ಅಳವಡಿಸಿ ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸದೇ ಇರವುದು ಯಾವುದೂ ಇಲ್ಲ, ಆದರೇ ಮತಾಂಧತೆ ಅಥವ ಭಯೋತ್ಪಾದನೆ ಕಾಯಿಲೆಗೆ ಸಧ್ಯದ ಮಟ್ಟಿಗೆ ಯಾವುದೇ ಔಷಧಿ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇಂತಹ ಮಹಾ ಮಾರಿಗೆ 2001 ನೆ ಇಸವಿ ಸೆಪ್ಟೆಂಬರ ತಿಂಗಳಲ್ಲಿ ಅಮೇರಿಕದ ಅವಳಿ ಗೋಪುರಗಳಿಗೆ ಭಯೋತ್ಪಾದಕರು ಅಪಹರಿಸಿದ್ದ ವಿಮಾನಗಳನ್ನು ವೇಗವಾಗಿ ಗುದ್ದಿಸಿ ಗೋಪುರವನ್ನು ನೆಲಗೆಡಿವಿದರು.
ಸಾವಿರಾರು ಅಮಾಯಕರು ಬಲಿ ಆದರು. ಅಮೇರಿಕನ್ನರು ಸಡಾಂ ಹುಸೇನ್ ನನ್ನು ಅನುಮಾನಿಸಿದರು. ಇರಾಕ್ ಮೇಲೆ ದಾಳಿ ಮಾಡಿದರು. ದಾಳಿಯಲ್ಲಿ ಸಾರ್ವಭೌಮಿ ಸಡಾಂ ಹುಸೇನ್ ನನ್ನು ಕೊಂದು ಆ ದೇಶದ ನಾಗರಿಕರ ಮಾರಣಹೋಮ ನಡೆಸಿದರು. ಗೆಲ್ಲಲಾಗದ ಅಮೇರಿಕ ಪ್ರಪಂಚಾದ್ಯಂತ ಬಹು ರಾಷ್ಟ್ರಗಳಿಂದ ಅಪಹಾಸ್ಯಕ್ಕೆ ಒಳಗಾಗಿದ್ದು ಇತಿಹಾಸ. ಇಲ್ಲಿಂದ ಶುರುವಾಯಿತು ಅನಿವಾಸಿ ಏಷ್ಯನ್ನರ ಮೇಲೆ ಅಮೇರಿಕನ್ನರ ಕೋಪ. ಅಲ್ಲಿಯ ಅನಿವಾಸಿ ಏಷ್ಯ ಹೆಂಗೆಳೆಯರು ಬಿಂದಿ ಅಥವ ಕುಂಕುಮ ಹಣೆ ಮೇಲೆ ಯಾರು ಧರಿಸಿರುತ್ತಾರೂ ಅವರನ್ನು ಗುರುತಿಸಿ ದಾಳಿ ಮಾಡುತ್ತಿದ್ದರು. ಈ ತರಹದ ದಾಳಿಯನ್ನು ಅಮೇರಿಕ ಪೋಲಿಸ್ ತಡೆಯುವದರಲ್ಲಿ ಯಶಸ್ವಿ ಆದರೂ ಅನಿವಾಸಿ ಏಷಿಯಾದ ಅದರಲ್ಲೂ ಭಾರತ ಮೂಲದ ಪಂಜಾಬ್ ನಾರಿಯರಿಗೆ ಸಮಸ್ಯೆ ಆಗಿತ್ತು. ಪಾಪ ಅಮೆರಿಕನ್ನರಿಗೆ ಏನು ತಿಳಿದೀತು ಬಿಂದಿ ಅಥವ ಕುಂಕುಮದ ಬೆಲೆ.
ಬಿಂದಿ ಅಥವ ಕುಂಕುಮದ ಮಹಿಮೆಯನ್ನು ವೈಜ್ಞಾನಿಕ ರೂಪ ರೇಖೆಗೆಳ ಆಧಾರದ ವಿವರಣೆ ನೀಡುವ ಪ್ರಯತ್ನ ಮಾಡುವುದೇ ನನ್ನ ಈ ಲೇಖನದ ಉದ್ದೇಶ. ನಾವು ಬಿಂದಿ, ಕುಂಕುಮ ಅಥವ ವಿಭೂತಿ ಮೂಗಿನ ಮೇಲೆ ಮತ್ತು ಕಣ್ಣುಬ್ಬುಗಳ ನಡುವೆ ಇರುವ ಹಣೆಯ ಭಾಗದಲ್ಲಿ ಇಡುವುದು ಹಿಂದೂಗಳ ಸಂಪ್ರದಾಯ. ಈ ಸ್ಥಳವನ್ನು “ಗ್ಲಾಬೆಲ್ಲಾ” ಎಂದು ಇಂಗ್ಲಿಷ್ನಲ್ಲಿ ಕರೆಯುತ್ತಾರೆ. “ಮ್ಯಾಗ್ನಟಿಕ್ ರೆಸೋನೆನ್ಸ ಇಮೇಂಜಿಗ್” ಅಥವ “ಕ್ಯಾಟ್ ಸ್ಕ್ಯಾನ್” ಅಳವಡಿಸಿ ಈ ಗ್ಲಾಬೆಲ್ಲಾ ಕೇಂದ್ರವನ್ನು (ಕುಂಕುಮ ಇಡುವ ಜಾಗ) ಅಡ್ಡವಾಗಿ (ಟ್ರಾನ್ಸವರ್ಸ್) ಅಥವ ಉದ್ದಾವಾಗಿ (ಸ್ಯಾಜಿಟಲ್) ಇಭ್ಭಾಗ ಮಾಡಿದಾಗ ನಮಗೆ ಮೂರು ಮುಖ್ಯವಾದ ಶಾರೀರಿಕ ರಚನೆಗಳನ್ನು ನೋಡಲು ಸಿಗುವದು. ಮೊದಲನೆಯದು ಮೂಗಿನ ಛಾವಣಿ, ಎರಡನೆಯದು ಪಿಟುಟರಿ ಗ್ರಂಥಿ ಮತ್ತು ಕೊನೆಯದು ಬ್ರಹ್ಮ ರಂದ್ರ (ಫೋರೆಮನಾ ಮ್ಯಾಗ್ನಮ್). ಈ ಮೂರು ಶರೀರ ರಚನೆಗಳು ನಮ್ಮಲ್ಲಿ ಇರುವ ಉದ್ವೇಗಗಳನ್ನು ಹೇಗೆ ಶಮನ ಮಾಡುತ್ತವೆನ್ನುವದರ ಬಗ್ಗೆ ವಿವರಣೆ ಕೊಡುವ ಪ್ರಯತ್ನ ನನ್ನದು.
ಮನೋವಿಜ್ಞಾನದಲ್ಲಿ ಉದ್ವೇಗ ಮತ್ತು ಅದರಿಂದ ಆಗುವ ಅಡ್ಡ ಪರಿಣಾಮಗಳನ್ನು ಅನೇಕ ಪುಸ್ತಕಗಳಿಂದ ಓದಿ ತಿಳಿದುಕೊಳ್ಳಬಹುದು ಅಥವ ಗೂಗಲ್ ಸರ್ಚ ಮಾಡಬಹುದು. ಸಂಕ್ಷಿಪ್ತವಾಗಿ ಸುಸ್ತು, ಮೈಕೈ ಉರಿ, ಗಾಬರಿ, ಮೇಲುಸಿರು, ತಲೆ ಭಾರ ಹಿಗೆ ಹತ್ತು ಹಲವಾರು ಲಕ್ಷಣ ಉದ್ವೇಗದಿಂದ ಕಂಡುಬರುವ ಪರಿಣಾಮಗಳು. ಇದರಿಂದ ರಕ್ತ ಒತ್ತಡ, ಮಧು ಮೇಹ ಮತ್ತು ಥೈರಾಯಿಡ್ ಸಮಸ್ಯೆಯಿಂದ ಶರೀರದ ಮೇಲೆ ಅಡ್ಡ ಪರಿಣಾಮಗಳನ್ನು ಬರಸಬಹುದು. ಈ ಮೂರು ಅಂಗ ರಚನೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಉದ್ವೇಗದಿಂದ ಆಗುವ ಹಲವಾರು ಸಮಸ್ಯೆಗಳನ್ನು ಸರಿ ಪಡಿಸಿಕೊಳ್ಳಬಹುದಾ ಅಥವ ಸಾಧ್ಯವೇ?
ಮಾನವನ ಅಂಗರಚನೆಯಲ್ಲಿ ಯಾವುದಾದರು ಒಂದು ಅಂಗ ವೈಫಲ್ಯ ಅನುಭವಿಸಿದರೆ ಜೀವಿಸುವುದು ಕಷ್ಟಕರ. ಅತಿ ಮುಖ್ಯವಾದ ಅಂಗರಚನೆ ಮೂಗು. ಈ ಮೂಗಿನ ಛಾವಣಿಯು ಮೆದುಳನ್ನು “ಕ್ರಿಬ್ರಿಫಾರ್ಮ್ ಫೊಸ್ಸಾ” ಎಂಬ ತೆಳುವಾದ ಮೂಳೆಯಿಂದ ಬೇರ್ಪಟ್ಟಿರುತ್ತೆ. ಬಹುತೇಕ ತಲೆ ಪೆಟ್ಟುಗಳಲ್ಲಿ ಈ ಮೂಳೆ ಒಡೆದು “ಸೆರಿಬ್ರೋ ಸ್ಪೈನಲ್” ಧ್ರವವು ಮೂಗಿನಿಂದ ಸುರಿಯುತ್ತದೆ. ಇದರಿಂದ ಬೇಗ ಮೆದುಳಿನಲ್ಲಿ ನಂಜು ಆಗಬಹುದು. ಇದರಿಂದಲೇ ಎರಡು ಚಕ್ರ ವಾಹನಗಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕೆನ್ನುವುದು. ನಮ್ಮ ಶ್ವಾಸಕೋಶಗಳು ಮೂಗಿನಿಂದ ಕೆಟ್ಟ ಗಾಳಿಯನ್ನು ಹೊರ ಬಿಟ್ಟು ಒಳ್ಳೆಯ ಗಾಳಿ ತೆಗೆದುಕೊಳ್ಳುತ್ತೇವೆ. ಇದು ನಮಗೆ ಅರಿವಾಗದೇ ಆಗುವ ಪ್ರಕ್ರಿಯೆ. ಉದ್ವೇಗದಿಂದ ಉಸಿರಾಟವು ನಮ್ಮ ಅರಿವಿಗೆ ಬಂದು ಬಾಯಿಂದ ಗಾಳಿಯನ್ನು ತೆಗೆದುಕೊಳ್ಳುತ್ತೇವೆ. ಈ ಪ್ರಕ್ರಿಯೆಯನ್ನು “ಹೈಪರ್ ವೆಂಟಿಲೇಶನ್” ಎಂದು ಕರೆಯುತ್ತೇವೆ. ಇದರಿಂದ ಶರೀರದಲ್ಲಿ ಆಮ್ಲವು ಕಮ್ಮಿ ಆಗಿ ಕ್ಷಾರ ಜಾಸ್ತಿ ಆಗಿ ಕೈ ಕಾಲು ಸೆಟದುಕೊಳ್ಳುವದು (ಟಿಟಾನಿ). ಈ ತೊಂದರೆಯಿಂದ ಹೊರ ಬರಬೇಕಾದರೆ ನಿಧಾನಗತಿಯಿಂದ ಉಸಿರಾಡಬೇಕು. ಈ ಕ್ರಿಯೆಯನ್ನು ಮಹಾ ಋಷಿ ಪತಂಜಲಿ “ಪ್ರಾಣಯಾಮ” ಎಂದು ಕರೆದಿದ್ದರು. ಈ ಕಾರಣದಿಂದ ಈ ಅಂಗಾಗವನ್ನು ನಾವು ದಿವಸವೂ ನೆನಸುವುದಲ್ಲದೆ ನಮ್ಮ ಉಸಿರಾಟದ ಮೇಲೆ ನಿಯಂತ್ರಣ ಇಡಬೇಕು ಎನ್ನುವುದು.
ಎರಡನೆಯದು “ಪಿಟುಟರಿ” ಗ್ರಂಥಿ. ಈ ಗ್ರಂಥಿ ಮೂಗಿನ ಛಾವಿಣಿಯ ಹಿಂದೆ ಕಂಡುಬರುವ ಗ್ರಂಥಿ. ಇದರಿಂದ ಹಲವಾರು ರಸ (ಹಾರ್ಮೋನ್) ಉತ್ಪತ್ತಿಯಾಗುತ್ತದೆ. ಈ ಗ್ರಂಥಿಯು ಮತ್ತೆರೆಡು ಗ್ರಂಥಿಗಳ ಜೊತೆ ಸೇರಿ ನಮ್ಮಲ್ಲಿ ಆಗುವ ಅನೇಕ ಬದಲಾವಣೆಗಳನ್ನು ನಿಯಂತ್ರಣ ಮಾಡಿ ನಮ್ಮ “ಹೋಮಿಯೋಸ್ಟಾಟಿಸ (ಸಮತೋಲನ)” ನ್ನು ಕಾಪಾಡುತ್ತದೆ. ಈ ಸಂಬಂಧದ ದಾರ (ಆಕ್ಸಿಸ್) ವನ್ನು “ಹೈಪೋಥಾಲಮಸ್ ಪಿಟುಟರಿ ಅಡ್ರಿನಲ್ ಆಕ್ಸಿಸ್” ಎಂದು ಕರೆಯುತ್ತೇವೆ. ಯಾರು ಉದ್ವೇಗದಿಂದ ಬಳಳುತ್ತಾರೋ ಅವರಿಗೆ ರಸೋತ್ಪತ್ತಿ ಏರುಪೇರು ಕಂಡು ಅನೇಕ ಶಾರೀರಿಕ ಸಮಸ್ಯೆಗಳು ದ್ವಿಗುಣವಾಗುವತ್ತವೆ. ಥೈರಾಯಿಡ್, ಪಿ ಒ ಸಿ ಡಿ, ಹಿರುಟಿಸಂ (ಹೆಂಗಸರ ಗಡ್ಡದಲ್ಲಿ ಕೂದಲು), ಬಂಜೆತನ, ಎರಕ್ಟೈಲ್ ಡಿಸ್ ಫಂಕ್ಷನ್ (ನಿಮಿರುವಿಕೆಯ ಸಮಸ್ಯೆ), ಒಬೇಸಿಟಿ, ಇತ್ಯಾದಿ ಕಾಯಿಲೆಗಳು ಬರುತ್ತವೆ. ಇದರಿಂದಲೇ ನಾವು ನಮ್ಮ ಉದ್ವೇಗವನ್ನು ನಿಯಂತ್ರಣದಲ್ಲಿ ಇಡ ಬೇಕೆನ್ನುವುದು.
ಮೂರನೆ ಅಂಗರಚನೆ “ಬ್ರಹ್ಮರಂಧ್ರ”. ಈ ಅಂಗಾಗವು ಪಿಟುಟರಿ ಗ್ರಂಥಿಯ ಹಿಂಭಾಗ ಬರುತ್ತದೆ. ಈ ವಲಯವನ್ನು ನಾನು “ಸೂಪರ್ ಹೈವೇ” ಎಂದು ಕರೆಯುತ್ತೇನೆ. ನಾವೆಲ್ಲರೂ ಇರುವೆ, ಮೀನು, ಮಂಗನಿಂದ ಎನ್ನುವುದಾದರೆ ಈ ಬ್ರಹ್ಮರಂಧ್ರ ಅತಿ ಮುಖ್ಯವಾದದ್ದು. ನಮ್ಮ ಪೂರ್ವಜರಾದ ಅಕಶೇರುಕಗಳಿಗೆ (ಇನ್ವರ್ಟಿಬ್ರೇಟ್ಸ) ಬೆನ್ನುಹುರಿಯೇ ಪ್ರಧಾನ. ಆದರೆ ನಮಗೆ ಬ್ರಹ್ಮರಂಧ್ರ ಮೇಲೆ ಇರುವ ವಿಕಸತೆ ಇಂದ ಹೊಮ್ಮಿರುವ ಮೆದುಳು ಪ್ರಧಾನ. ಇದರ ಮೂಲಕವೇ ಅಸಂಖ್ಯಾತ (ಟ್ರಿಲಿಯನ್) ಸಂಕೇತಗಳು ಮೆದುಳಿನಿಂದ ಮತ್ತು ಬೆನ್ನುಹುರಿಯಿಂದ ಬೆರೆಸುವ ವಲಯ(ಕೇಂದ್ರ)ವೇ ಬ್ರಹ್ಮರಂಧ್ರ. ಈ ಜಾಗವೇ ಮಾನವನ ಇಂದ್ರಿಯಗಳನ್ನು ಅಳತೆ ಮಾಡಿ ತೂಗಿ ಮಾನವನ ಮಾನವೀಯತೆಯನ್ನು ಕಾಪಾಡುವುದು. ಬೆನ್ನುಹುರಿಯಿಂದ ಅಮಾನವೀಯ ಸಂಕೇತಗಳನ್ನು ಮೆದುಳಿಗೆ ರವಾನೆ ಮಾಡಿ, ಅಲ್ಲಿರುವ ಅಸಂಖ್ಯ ಕೇಂದ್ರ ಬಿಂದು, ಪುಂಜ ವ್ಯೂಹ ಮತ್ತು ನರ ರಸಾಯನಿಕ ವಸ್ತುಗಳಿಂದ ಸಂಸ್ಕರಣೆ ಆಗುತ್ತದೆ. ಇದರಿಂದ ಮಾನವ ಮೃಗ ಸ್ವಭಾವದಿಂದ ಮನುಷ್ಯ ಸ್ವಭಾವಕ್ಕೆ ಪರಿವರ್ತಕನಾಗುತ್ತಾನೆ.
ಆದುದರಿಂದ ನಾವು ಹಣೆ ಮೇಲೆ ಕುಂಕುಮ ಇಡುವ ಜಾಗ ಹಿಂದೂ ಧರ್ಮದಲ್ಲಿ ಅತಿ ಪವಿತ್ರವಾದ ಸ್ಥಳ. ಇಂದು ಭಾರತ ದೇಶದಲ್ಲಿ ಹೆಣ್ಣಿನ ಮಹತ್ವ ಬಹು ದೊಡ್ಡ ಕಾಣಿಕೆ. ಆದಕ್ಕೆ ಹೆಣ್ಣಿನ ಹಣೆಯಲ್ಲಿ ಕುಂಕುಮ ಧಾರಣೆ ತುಂಬ ಮಹತ್ವ ಪಡೆದಿದೆ. ಬಿಂದಿ ಧಾರಣೆ ಆದಿ ಕಾಲದಿಂದಲೂ ಒಂದು ಸಂಕೇತವಾಗಿ ಬಂದಿದೆ. ಇಂದು ಗಂಡಸರು ಸಹ ಇಡುತ್ತಾರೆ. ಕುಂಕುಮ ಇಡುವ ಸಮಯದಲ್ಲಿ ಈ ಮೂರು ಅಂಗರಚನೆಗಳನ್ನು ನೆನೆಯೋಣ. ನನಗೆ ಅರ್ಥವಾಗದೇ ಇರುವುದು ರಾಜಕೀಯದವರು ಮತ್ತು ರೌಡಿ ಎಲಿಮೆಂಟ್ಸ್ ಯಾಕೆ ಕುಂಕುಮ ಇಡುತ್ತಾರೆ ಎಂಬುದು…..
Many argue that in this plane lie a mysterious, non understandable, mythological and also a hypothetical pineal gland, which is said to be absorbing all the knowledge possessed in the environment and in turn this gland emits intuitive thoughts. This gland is also called the third eye. This hypothesis does not give any substantial scientific understanding. It remains mythological as Shiva’s third eye..Thrayambaka…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

