ಪ್ರಾಚೀನ ಮತ್ತು ಮಧ್ಯ ಯುಗದಲ್ಲಿ ಮನೋ ಕಾಯಿಲೆಗಳನ್ನು ದೆವ್ವ ಅಥವ ಭೂತ ಎಂದು ಭಾವಿಸಿ ರೋಗಿಗಳನ್ನು ಬಂಧಿಖಾನೆಯಲ್ಲಿ ಬಂಧಿಸಿ ಹಿಂಸೆ ನೀಡುತ್ತಿದ್ದರು. ಕಾಲ ಕ್ರಮೇಣ ಮಾನವರು ವಿಕಾಸದತ್ತ ಹೆಜ್ಜೆ ಇಟ್ಟು ಹಾಗು ವಿಜ್ಞಾನದ ಕಡೇ ವಾಲಿ ಇಂತಹ ಹಿಂಸೆಗಳು ಅಮಾನವೀಯ ಎಂದು ತಿಳಿದು ಮಾನಸಿಕ ಕಾಯಿಲೆಗಳನ್ನು ಮಾನವತಾ ದೃಷ್ಟಿಯಲ್ಲಿ ನೋಡತೊಡಗಿದರು. ಆ ಸಮಯದಲ್ಲಿ ದೇವರ ಮೊರೆ, ಮಾಂತ್ರಿಕ ವೈದ್ಯ ಪದ್ಧತಿ, ದೆವ್ವ ಭೂತ ಬಿಡಿಸುವುದು, ಹೀಗೆ ಅನೇಕ ತರಹದ ಚಿಕಿತ್ಸಾ ವಿಧಾನಗಳು ಕಂಡು ಬರುತ್ತಿದ್ದವು. ಇಂದಿಗೂ ಈ ಹೀನ ಪದ್ಧತಿಗಳು ಹೋಗಿಲ್ಲ. ಆದರೂ ಮಾನಸಿಕ ಕಾಯಿಲೆಯ ಶುಶ್ರೂಷೆ ಮತ್ತು ಚಿಕಿತ್ಸೆಗಳು ಸುಧಾರಿಸುತ್ತಾ ಸಾಗುತ್ತಿದೆ. ಅರಿವು, ಮಾಧ್ಯಮ, ವಿಜ್ಞಾನ ಹಾಗು ಚಿಕಿತ್ಸಾ ವಿಧಾನಗಳು ಈ ಸುಧಾರಣೆಗೆ ಕಾರಣಗಳು ಆಗಿದೆ.
19 ನೇ ಶತಮಾನದಲ್ಲಿ “ಫ್ರಾನ್ಸ್ ಮೆಸ್ಮರ್” ಮನೋ ಕಾಯಿಲೆಗಳಿಗೆ “ಸಂಹ್ಮೋಹನ” ಚಿಕಿತ್ಸಾ ವಿಧಾನವನ್ನು ಪ್ರಪಂಚಕ್ಕೆ ಪರಿಚಯಿಸಿದ. ಜನರು ‘ಮೆಸ್ಮರಿಸಮ್’, ಎಂದು ಅವರ ಹೆಸರಿನ ಮೇಲೆ ಈ ಚಿಕಿತ್ಸಾ ಪದ್ದತಿಯನ್ನು ಈಗಲೂ ಗುರುತಿಸುತ್ತಾರೆ. ಇದೇ ಸಮಯದಲ್ಲಿ ಮನೋ ವಿಜ್ಞಾನದ ಪಿತಾಮಹ ಸಿಗ್ಮಂಡ್ ಫ್ರಾಯ್ಡ ತಮ್ಮ “ಸೈಕೋ ಅನಿಲಿಸಿಸ್” ಮೂಲಕ ಮಾನಸಿಕ ಚಂಚಲತೆಗೆ ಈ ಚಿಕಿತ್ಸಾ ಪದ್ದತಿಯನ್ನು ನೀಡುತ್ತಿದ್ದರು. ಆದರೆ ಸಂಹ್ಮೋಹನ ಚಿಕಿತ್ಸೆ ಎಲ್ಲಾ ಕಡೆ ಪಾರ್ತೇನಿಯಮ್ ತರ ಹಬ್ಬಿತ್ತು. ಪ್ರಪಂಚಾದ್ಯಂತ ಇದರ ಕ್ಲಿನಿಕ್ ಗಳು ನಾಯಿ ಕೂಡೆಗಳಂತೆ ಎದ್ದವು. ಕಾಲ ಕ್ರಮೇಣ ಮಾನಸಿಕ ಕಾಯಿಲೆಗಳು changes in the neuro transmitter’s (ನರ ರಸೋ ಪಲ್ಲಟ) ಇಂದ ಎಂದು ವಿಜ್ಞಾನಿಗಳು ತಿಳಿಸಿದ ಮೇಲೆ ಸಂಹ್ಮೋಹನ ಚಿಕಿತ್ಸೆಯ ಅಬ್ಬರ ಕಡಿಮೆ ಆಯ್ತು.
ನನ್ನ ಈ ಅಂಕಣ ಸಂಹ್ಮೋಹನ ಚಿಕಿತ್ಸೆಯನ್ನು ಪರಿಚಯಸುವ ಉದ್ದೇಶವಲ್ಲ, ಆದರೆ ಇದರ ಹಿಂದೆ ನೆಡೆಯುವ ‘ವಶೀಕರಣ’ ನಕಲಿ ಚಿಕಿತ್ಸಾ ವಿಧಾನವನ್ನು ತೆರಿದಿಡುವ ಪ್ರಯತ್ನ ಅಷ್ಟೇ. ನಾನು ಎಲ್ಲೇ ಹೋದಲ್ಲಿ ಉಪನ್ಯಾಸ ನೀಡುವ ವೇಲೆ ನನ್ನನ್ನು ಕೇಳುತ್ತಿದ್ದ ಪ್ರಶ್ನೆ ‘ಹಿಪ್ನಾಟಿಸಮ್’ ಬಗ್ಗೆ. ಇಂದಿನ ಮಾಹಿತಿ ತಂತ್ರಜ್ಞಾನದಿಂದ ಇದರ ವಿವರಣೆಗಳನ್ನು ಪಡೆಯಬಹುದು. ಅನೇಕ ಪುಸ್ತಕಗಳು ಲಭ್ಯವಿದೆ. ಕೇಳರಿಯದ ಮನೋ ಕಾಯಿಲೆಗಳನ್ನು ಈ ಚಿಕಿತ್ಸಾ ಪದ್ದತಿಯಿಂದ ವಾಸಿ ಮಾಡಿರುವ ಚಿತ್ರಗಳು ಮತ್ತು ಕತೆಗಳು ಬಂದಿದೆ. ನನ್ನ ವಿಶ್ರಾಂತಿ ಸಮಯದಲ್ಲಿ ಟಿ ವಿ ಚಾನಲ್ ವೀಕ್ಷಿಸುತ್ತಿದ್ದ ನನಗೆ ‘ಪುನರ್ಜನ್ಮ’ ದ ಸತ್ಯಾಂಶ ತಿಳಿಯುವ ಕುತೂಹಲ ಆಯ್ತು.
ಹಿಂದು ಧರ್ಮ ಅಂದ್ರೆ ಏನು? ಕೆಲವಾರು ನಿರೂಪಣೆಗಳು ಓದಲು ಸಿಗುತ್ತವೆ. ಈ ಪ್ರಶ್ನೆಗೆ ಉತ್ತರ ಕೊಡುವುದು ಬಲು ಕಷ್ಟ.
ಯಾರಿಗೆ ಆತ್ಮ ಇದೆ, ಸತ್ತಾಗ ತನ್ನ ಆತ್ಮ ಬಿಟ್ಟು ಹೋಗುತ್ತೆ ಮತ್ತು ಆತನ ಪುನರ್ಜನ್ಮವಿದೆ ಎಂಬುದರ ಮೂರು ಬಗೆಯ ದೃಡ ನಂಬಿಕೆಗಳು ಇವೆಯೋ ಅವರನ್ನು “ಹಿಂದು” ಎಂದು ಕರೆಯಬಹುದೇ?
ನನಗೆ ಇದರ ಅವಶ್ಯಕತೆಯಿಲ್ಲ, ಆದರೇ ಪುನರ್ಜನ್ಮ ಕಾರ್ಯಕ್ರಮವನ್ನು ನೋಡಿ ಅಳಬೇಕೊ ಅಥವ ನಗಬೇಕೂ ತಿಳಿಯಲಿಲ್ಲ. ಸಂಮೋಹನೆ ಮೂಲಕ ರೋಗಿಯ ಆತ್ಮವನ್ನು ಅಹ್ವಾನೆ ಮಾಡಿ ಆ ರೋಗಿಯ ಲಕ್ಷಣಗಳ ಮೇಲೆ ಅತ ಹಿಂದಿನ ಜನ್ಮದಲ್ಲಿ ರಾಕ್ಷಸನೋ, ಕೋತಿಯೋ, ಹತ್ಯೆಗಾರನೋ, ಸಾಹುಕಾರನೋ, ಬಡವನೋ ಆಗಿದ್ದ ಎಂದು ಚಿಕಿತ್ಸಾಕಾರನು ದೂರದರ್ಶನದಲ್ಲಿ ವಿವರಿಸುತ್ತಾ ಹೋಗುತ್ತಿದ್ದರು. ಉದಾಹರಣೆಗೆ ರೋಗಿಯ ಲಕ್ಷಣ, ಅಂದರೆ ಕೋಪ, ತಾಳ್ಮೆಯ ಕೊರೆತೆ, ಉದ್ರೇಕ, ಪರಚುವುದು ಇತ್ಯಾದಿಗಳೆಲ್ಲ ಇದೇ ಅಂದುಕೂಂಡಾಗ ಪುನರ್ಜನ್ಮದಲ್ಲಿ ಕೋತಿ ಆಗಿದ್ದ ಎಂಬ ವಿವರಣೆ ನೀಡಿ ಬುರುಡೆ ಬಿಡುವುದಲ್ಲದೆ ಸಾವಿರಾರು ರೂಪಾಯಿ ರೋಗಿಯ ಜೇಬಿಗೆ ಕತ್ತರಿ ಹಾಕುತ್ತಿದ್ದರು.
ಹಿಂದು ಧರ್ಮದಲ್ಲಿ “ಆತ್ಮ” ಕ್ಕೆ ಅದರದೇ ಆದ ಸ್ಥಾನಮಾನ ಇದೆ ಮತ್ತು ತನ್ನದೆ ಸಿದ್ಧಾಂತವನ್ನು ಹೊಂದಿದೆ. ನಾನು ಓದಿ ತಿಳಿದಂತೆ ಆತ್ಮವನ್ನು ವಿವರಿಸುವ ಪ್ರಯತ್ನ ಮಾಡುವೆ. “ದೇವ” ಸರ್ವಾಂತ್ರಯಾಮಿ, ಸರ್ವಜ್ಞನು ಮತ್ತು ಸರ್ವಶಕ್ತನು. ನಮ್ಮ ಹಿಂದೂ ಧರ್ಮದಲ್ಲಿ ಆತ್ಮಕ್ಕೆ ಇದೇ ವಾಖ್ಯಾನಳಿಂದ ವಿವರಿಸುತ್ತಾರೆ. ಹೀಗಿದ್ದಾಗ ಆ ಆತ್ಮ ಯಾವುದು? ಶರೀರಕ್ಕೂ ಮತ್ತು ಅರಿವಿಗೆ ಇರುವ ಅನುಬಂಧವೇ? ಅಥವ ಜೀವತಂತುವಿನ ಕೊಂಡಿಯೇ(ಜೀನ್ಸ್)? ಧರ್ಮಾನುಸಾರ ಜೀವಿಗೆ “ಆತ್ಮ” ಜೀವಂತ ಇರುವರಿಗೂ ಇರುತ್ತದೆ. ಸತ್ತ ನಂತರ ಆತ್ಮ ಆ ಜೀವಿಯ ಶರೀರವನ್ನು ಬಿಟ್ಟು ಮತ್ತೆಲ್ಲೋ ಜನ್ಮ ಎತ್ತುವುದಾದರೆ “ಆತ್ಮ” ದೇವರು ಆಗಲಿಲ್ಲವೆ? ಈ ವಿವರಣೆ ಒಂದಾದರೆ ಮತ್ತೊಂದು ಆಯಾಮದಲ್ಲಿ ವೈಜ್ಞಾನಿಕವಾಗಿ ವಿಶ್ಲೇಷಿಸುವ ಪ್ರಯತ್ನ ನನ್ನದು.
ಆದಿ ಕಾಲದಿಂದಲೂ ಸಂಸಾರ ನಿರಂತರವಾಗಿ ಸಾಗುತ್ತಾ ಬಂದಿದೆ. ಈ ಸಂಸಾರ ಎಂದೂ ನಿಂತಿಲ್ಲ. ಈ ಮಾತು ಎಲ್ಲಾ ಜೀವರಾಶಿಗಳಿಗು ಅನ್ವಯಿಸುತ್ತದೆ. ಯಾವಾಗ ಮಾನವನ ಸಂಸಾರ ನಿಲ್ಲುತ್ತೊ ಅಂದು ದೇವರು ಇರುವುದಿಲ್ಲ. ದೇವರನ್ನು ಅರಿಯಬೇಕಾದರೇ ಅರಿಯುವಂತಾಹ ಜೀವಿ ಇರಬೇಕು. ಈಗಿನ ಸದ್ಯಕ್ಕೆ ಆ ಜೀವಿ “ಮಾನವ”. ಈ ಸಂಸಾರವನ್ನು ಭೂಮಿಯು ಬಿಟ್ಟುಕೊಡುವುದಿಲ್ಲ. ಕಾರಣವೇನೆಂದರೆ ಭೂಮಿ ಮತ್ತು ಜೀವಿ ಅನ್ಯೋನ್ಯವಾಗಿ ಮುಂದುವರಿಯಬೇಕು. ಇಲ್ಲ ಅಂದ್ರೆ ಅಲ್ಲಿಗೆ ಪ್ರಳಯ ಶತ ಸಿದ್ದ. ಒಂದು ಮಾತು, ಪ್ರಪಂಚದ ರಾಜಕೀಯ ಅಹಂಕಾರದ ಕಿಡಿಕೇಡಿಗಳಿಂದ ಅಣ್ವಸ್ತ್ರ ಸಿಡಿಸಿ ಮಾನವ ಕುಲವನ್ನೆ ಸರ್ವನಾಶ ಮಾಡಬಹುದು ಆದರೇ ಜೀವದ ಬೀಜ ಭೂಮಿಯಲ್ಲಿ ಹುದುಗಿ ಮತ್ಯಾವಗೋ ಸಂಸಾರವನ್ನು ಹೊಂದಬಹುದು.
ಈ ಬೀಜವನ್ನು ನಾನು ‘ಕಾರ್ಬನ್ ಚಿಪ್’ ಎಂದು ಕರೆಯುವೆನು. ನನ್ನ ಪ್ರಕಾರ ಸದ್ಯದ ವೈಜ್ಞಾನಿಕ ಕಾರ್ಬನ್ ಚಿಪ್ ನಮ್ಮ “ವಂಶ ವಾಹಿನಿ” ಅಥವಾ “ಜೀವ ತಂತು”.
ಮಾನವ ತನ್ನದಾದ ತನವನ್ನು ಸಂಸಾರದ ಮೂಲಕ ತನ್ನ ಕುಡಿಗಳಿಗೆ ಹರಿಸುತ್ತಿದ್ದಾನೋ ಅದನ್ನೇ ನಾನು ಮನೋವೈಜ್ಞಾನಿಕವಾಗಿ “ಆತ್ಮ” ಎಂದು ಕರೆಯುವೆನು.
The transfer of the Gene from
one life to another life is otherwise called transfer of Nano Souls, which is a never ending process, if Soul ends then whole universe ends. By any means there is end to this world, once again life begin through the remnant of Soul (Seed) that we have left. Hence Soul is not there to feel or look and it has no end (infinite). Soul cannot be measured. When God has no death, Soul too has no death….
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

