ತುಮಕೂರು: ತುಮಕೂರು ಯೋಜನಾ ಕಚೇರಿ ವ್ಯಾಪ್ತಿಯ ತುಮಕೂರು ಬಿ ವಲಯದ ನಗರದಲ್ಲಿರುವ ಉಪ್ಪಾರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜ್ಞಾನ ದೀಪ ಕಾರ್ಯಕ್ರಮದಡಿಯಲ್ಲಿ 10 ಬೆಂಚ್ ಹಾಗೂ ಡೆಸ್ಕ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತುಮಕೂರು1ತಾಲೂಕಿನ ಯೋಜನಾಧಿಕಾರಿಗಳಾದ ಪ್ರಭಾಕರ್ ರವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಗ್ರಾಮಗಳ ಅಭಿವೃದ್ಧಿಯಾಗಲು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಹಾಗೂ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ಆಯ್ಕೆ ಮಾಡುವುದು ಇನ್ನಿತರ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು.
ಉಪ್ಪಾರಹಳ್ಳಿಯ ಜನ ಜಾಗೃತಿ ಸದಸ್ಯರಾದ ಉಪ್ಪಾರಹಳ್ಳಿಕುಮಾರ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನುಆಯೋಜಿಸಿದ್ದು ಸರ್ಕಾರ ಮಾಡದಂತಹ ಕೆಲಸಗಳು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಾಡುತ್ತಿದೆ ಎಂಬುದಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕರು ಗೀತಾ ಹಾಗೂ ರೌಂಡ್ ಟೇಬಲ್ ಚೇರ್ಮನ್ ಮಿತ್ರ ಶ್ರೀನಿವಾಸ್ ಮತ್ತು ರೌಂಡ್ ಟೇಬಲ್ ಸಂಸ್ಥೆಯ ಅಧ್ಯಕ್ಷರಾದ ಪ್ರಮೋದ್, ಉಪ್ಪಾರಹಳ್ಳಿಯ ಗಣ್ಯರಾದ ರವಿ,ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಉಪ್ಪಾರಹಳ್ಳಿ ಒಕ್ಕೂಟದ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ, ವಲಯದ ಮೇಲ್ವಿಚಾರಕರಾದ ಕುಮಾರಿತನುಜ. ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯವರಾದ ಜಯಶ್ರೀ ಸಂಘದ ಸದಸ್ಯರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ
