ರಾಮನಾಥಪುರ – ಇಲ್ಲಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೂಡಲೂರು ಶ್ರೀ ಬಸವೇಶ್ವರ ಯುವಕರ ಸಂಘದವರವತಿಯಿಂದ ಯುಗಾಧಿ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಮತ್ತು ಹಾಲು ಹಲ್ಲು ಮತ್ತು ಎರಡು ಹಲ್ಲುಗಳ ಕರುಗಳ ಚಕ್ಕಡಿ ಗಾಡಿ ಓಟದ ಸ್ವರ್ಧೆ ಕಾರ್ಯಕ್ರಮ ಎಪ್ರಿಲ್ 1 ರಂದು ಬುಧವಾರ ಹಾಗೂ 2 ರಂದು ಗುರುವಾರ ನಡೆಯಲಿದೆ ಎಂದು ಶ್ರೀ ಬಸವೇಶ್ವರ ಯುವಕರ ಸಂಘದ ಪದಾಧಿಕಾರಿಗಳು ತಿಳಿಸಿದರು.
ರಾಮನಾಥಪುರ ಹೋಬಳಿ ಶಾಸಕರ ಸ್ವಗ್ರಾಮ ಹನ್ಯಾಳು ಗ್ರಾಮದಲ್ಲಿ ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಅವರನ್ನು ಭೇಟಿ ಮಾಡಿ ಅಹ್ವಾನ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿದರು.
ಕೂಡಲೂರು ಗ್ರಾಮದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವರು ಹಾಗೂ ಅರಕಲಗೂಡು ಕ್ಷೇತ್ರದ ಶಾಸಕರು ಎ. ಮಂಜು ಅಧ್ಯಕ್ಷತೆ ವಹಿಸುವರು. ಮಡಿಕೇರಿ ವಿಧಾನಸಭಾ ಶಾಸಕರು ಡಾ. ಮಂತರಗೌಡ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಈ ಸಂದರ್ಭದಲ್ಲಿ ಟ್ರೋಫಿ ದಾನಿಗಳಾದ ಹೆಚ್.ಎಸ್. ವಿನಯ್ ಮುಂತಾದವರು ಭಾಗವಹಿಸಿವರು ಎಂದು ಶ್ರೀ ಬಸವೇಶ್ವರ ಯುವಕರ ಸಂಘದ ಪದಾಧಿಕಾರಿಗಳಾದ ಪ್ರಸನ್ನ, ದರ್ಶನ್, ವೇಣು, ಸೋಮೇಶ್, ಗಜಾನನ, ಪಾಲಕ್ಷ,
ಅಭಿಷೇಕ್, ಯಶವಂತ, ರಕ್ಷಿತ್, ಸುಮಂತ್, ರವಿ, ಲೋಕೇಶ್, ಮನು, ಪವನ್ ಮುಂತಾದವರು ವಿನಂತಿಸಿದ್ದಾರೆ.
ಎಪ್ರಿಲ್ 1 ರಂದು ಬುಧವಾರ ನಡೆಯುವ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ವರ್ಧೆಯಲ್ಲಿ ಪ್ರಥಮ ಬಹುಮಾನ, 50 ಸಾವಿರ, ದ್ವೀತಿಯ ಬಹುಮಾನ 30 ಸಾವಿರ, ತೃತೀಯ ಬಹುಮಾನ 20 ಸಾವಿರ, ಚತುರ್ಥಿ ಬಹುಮಾನ 10 ಸಾವಿರ ಪಂಚಮ ಬಹುಮಾನ 5 ಸಾವಿರವಿರುತ್ತದೆ. ಹಾಗೂ ಚಕ್ಕಡಿಗಾಡಿ ಓಟದ ಸ್ವರ್ಧೆಗೆ ಎಪ್ರಿಲ್ 2 ರಂದು ಗುರುವಾರ ಪ್ರಥಮ ಬಹುಮಾನ 30 ಸಾವಿರ, ದ್ವೀತಿಯ ಬಹುಮಾನ 20 ಸಾವಿರ, ತೃತೀಯ ಬಹುಮಾನ 10 ಸಾವಿರ ಚತುರ್ಥಿ ಬಹುಮಾನ 5 ಸಾವಿರ ವಿರುತ್ತದೆ ಎಂದು ಸಂಘದವರು ತಿಳಿಸಿದರು.
ಹೆಚ್ಚಿನ ಮಾಹಿತಿಗೆ ಮೋ. 8105172202ಆಥವಾ 9148819209 ಸಂಪರ್ಕಿಸಲು ಕೋರಲಾಗಿದೆ.
ವರದಿ : ಎಂ.ಎನ್. ಕುಮಾರಸ್ವಾಮಿ, ಲೇಖಕರು, ರಾಮನಾಥಪುರ.
