ಚನ್ನರಾಯಪಟ್ಟಣ: ಭಾರತವು ವಿಶ್ವಗುರುವಾಗಿ ಸ್ಥಾನದಲ್ಲಿ ನಿಂತುಕೊಂಡು ಯುದ್ಧವನ್ನು ನಿಲ್ಲಿಸುತ್ತದೆ ಎಂದು ಗಜೇಂದ್ರಗಡದ ಶ್ರೀ ಕಾಲ ಬ್ರಹ್ಮ ಶರಣಬಸಪ್ಪ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ಎವನ್ ಸ್ಪೋರ್ಟ್ಸ್ ಅಕಾಡೆಮಿಯ ಉದ್ಘಾಟನಾ ಸಮಾರಂಭದಲ್ಲಿ ಪ್ರವಚನ ನೀಡಿ ಮಾತನಾಡಿದ ಅವರು ಆರ್ಥಿಕ ಮುಗ್ಗಟ್ಟಿನಿಂದ ವಿಶ್ವದ ಹಲವು ದೇಶಗಳು ತತ್ತರಿಸಿ ಹೋಗುತ್ತವೆ, ದೊಡ್ಡಣ್ಣನ ಸ್ಥಾನದಲ್ಲಿ ಭಾರತವು ನಿಂತು ಎಲ್ಲಾ ದೇಶಗಳಿಗೂ ಆರ್ಥಿಕ ಸಹಾಯ ಮಾಡುತ್ತದೆ ಎಂದರು.

ಈ ವರ್ಷ ಸಕ್ಕರೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುತ್ತದೆ, ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ ಉತ್ತಮ ರೀತಿಯ ಬೆಲೆ ದೊರೆಯುತ್ತದೆ ಎಂದು ಭವಿಷ್ಯ ನುಡಿದರು. ಇದೇ ಸಂದರ್ಭದಲ್ಲಿ ಗಜೇಂದ್ರಗಡದ ಪರಮಪೂಜ್ಯ ಶ್ರೀ ಕಾಲ ಬ್ರಹ್ಮ ಶರಣಬಸಪ್ಪ ಮಹಾಸ್ವಾಮೀಜಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಬಸವರಾಜ್, ಗ್ಯಾರೆಂಟಿ ಸಮಿತಿಯ ನಿರ್ದೇಶಕರಾದ ಮಿಲಿಟರಿ ಮಂಜುನಾಥ್, ಎವನ್ ಸ್ಪೋರ್ಟ್ಸ್ ಅಕಾಡೆಮಿ ಮುಖ್ಯಸ್ಥರಾದ ರಂಗನಾಥ್ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ.
