ಹಾಸನ, ಜು. 19: ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ನ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಭಾನುವಾರ (ಜು. 19) ನಡೆಯಲಿದೆ.

“Service Above Self” (ಸ್ವಾರ್ಥಕ್ಕಿಂತ ಸೇವೆ) ಎಂಬ ರೋಟರಿಯ ಆದರ್ಶ ಹಾಗೂ “Create Lasting Impact” ಎಂಬ ಈ ಸಾಲಿನ ಧ್ಯೇಯವನ್ನು ಸಾಕಾರಗೊಳಿಸುವ ನೂತನ ಪಯಣಕ್ಕೆ ಚಾಲನೆ ನೀಡುವ ಉದ್ದೇಶದಿಂದ ಸಮಾರಂಭವನ್ನು ಆಯೋಜಿಸಲಾಗಿದೆ.

2026–27ನೇ ಸಾಲಿನ ಅಧ್ಯಕ್ಷರಾಗಿ ರೋ. ಕೆ.ಎಸ್. ಯೋಗೇಶ್, ಕಾರ್ಯದರ್ಶಿಯಾಗಿ ರೋ. ಬಿ.ಎಂ. ದರ್ಶನ್ ಹಾಗೂ ಖಜಾಂಚಿಯಾಗಿ ರೋ. ಶಶಿಂದ್ರನಾಥನ್ ಎಂ.ಡಿ. ಪದಗ್ರಹಣ ಮಾಡಲಿದ್ದಾರೆ.
ಸಮಾರಂಭಕ್ಕೆ ಗಣ್ಯರು, ರೋಟರಿ ಸದಸ್ಯರು ಹಾಗೂ ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
