ಚನ್ನರಾಯಪಟ್ಟಣ: ಭಾರತವು ವಿಶ್ವಗುರುವಾಗಿ ಜಗತ್ತಿನಲ್ಲಿ ಪ್ರಮುಖ ಸ್ಥಾನಕ್ಕೇರಿದ್ದು, ಮುಂದಿನ ದಿನಗಳಲ್ಲಿ ಯುದ್ಧಗಳನ್ನು ನಿಲ್ಲಿಸುವ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಗಜೇಂದ್ರಗಡದ ಶ್ರೀ ಕಾಲ ಬ್ರಹ್ಮ ಶರಣಬಸಪ್ಪ ಮಹಾಸ್ವಾಮಿಗಳು ಭವಿಷ್ಯ ನುಡಿದರು.
ಪಟ್ಟಣದ ಎವನ್ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ಪ್ರವಚನ ನೀಡಿದ ಅವರು, ವಿಶ್ವದ ಅನೇಕ ದೇಶಗಳು ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುವ ಪರಿಸ್ಥಿತಿ ಎದುರಿಸಲಿದ್ದು, ಅಂತಹ ಸಂದರ್ಭದಲ್ಲಿಯೂ ಭಾರತವು ದೊಡ್ಡಣ್ಣನ ಸ್ಥಾನದಲ್ಲಿ ನಿಂತು ಹಲವು ರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಲಿದೆ ಎಂದು ಹೇಳಿದರು.

ಇದೇ ವೇಳೆ, ಈ ವರ್ಷ ಭಾರತವು ಸಕ್ಕರೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆಯಲಿದ್ದು, ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ ಉತ್ತಮ ಬೆಲೆ ದೊರೆಯಲಿದೆ ಎಂದು ಅವರು ಭವಿಷ್ಯವಾಣಿ ಮಾಡಿದರು.
ಕಾರ್ಯಕ್ರಮದಲ್ಲಿ ಗಜೇಂದ್ರಗಡದ ಪರಮಪೂಜ್ಯ ಶ್ರೀ ಕಾಲ ಬ್ರಹ್ಮ ಶರಣಬಸಪ್ಪ ಮಹಾಸ್ವಾಮೀಜಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಸವರಾಜ್, ಗ್ಯಾರೆಂಟಿ ಸಮಿತಿಯ ನಿರ್ದೇಶಕ ಮಿಲಿಟರಿ ಮಂಜುನಾಥ್, ಎವನ್ ಸ್ಪೋರ್ಟ್ಸ್ ಅಕಾಡೆಮಿಯ ಮುಖ್ಯಸ್ಥ ರಂಗನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮಂಜುನಾಥ್ ಐ ಕೆ.
