ಚನ್ನರಾಯಪಟ್ಟಣ : ಪಟ್ಟಣದ ಗಾಯತ್ರಿ ಪತ್ತಿನ ಸಹಕಾರ ಸಂಘ ಹಾಗೂ ಹಾಸನದ ಇಂಡಿಯಾನಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 17ರಂದು ಸಾರ್ವಜನಿಕರು ಮತ್ತು ಷೇರುದಾರರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಆರ್. ನಾಗರಾಜು ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಶಿಬಿರವು ಬೆಳಗ್ಗೆ 10ರಿಂದ ಮಧ್ಯಾಹ್ನ 2.30 ರವರೆಗೆ ಗಾಯತ್ರಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಯಲಿದೆ ಎಂದು ಹೇಳಿದರು.ಶಿಬಿರದಲ್ಲಿ ಹೃದಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಸಮಾಲೋಚನೆ, ಕೀಲು ಮತ್ತು ಮೂಳೆ ತಪಾಸಣೆ, ರಕ್ತದ ಒತ್ತಡ (ಬಿಪಿ), ಶುಗರ್ ಪರೀಕ್ಷೆ, ಇಸಿಜಿ ಹಾಗೂ ಉಸಿರಾಟ ಸಂಬಂಧಿತ ತೊಂದರೆಗಳ ಪರಿಶೀಲನೆ ಸೇರಿ ದಂತೆ ವಿವಿಧ ಆರೋಗ್ಯ ಸೇವೆಗಳು ಉಚಿತವಾಗಿ ಲಭ್ಯವಿರುತ್ತವೆ.
ಹಾಸನದ ಇಂಡಿಯಾನಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಅನುಪ (ಹೃದಯ ತಜ್ಞರು), ಡಾ. ಚೈತ್ರ ವೈ. ಭಟ್ (ಜನರಲ್ ಸರ್ಜರಿ) ಹಾಗೂ ಡಾ. ನಹೀಮ್ ಸಿದ್ದಿಕ್ (ಮೂಳೆ ಶಸ್ತ್ರಚಿಕಿತ್ಸಾ ತಜ್ಞರು) ಸೇರಿದಂತೆ ಪರಿಣಿತ ವೈದ್ಯರ ತಂಡ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.
ಆರೋಗ್ಯ ತಪಾಸಣೆಗೆ ಬರುವವರು ತಮ್ಮ ಹಿಂದಿನ ಚಿಕಿತ್ಸಾ ದಾಖಲೆಗಳನ್ನು ತರಲು ಮನವಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗೆ ಗಾಯತ್ರಿ ಪತ್ತಿನ ಸಹಕಾರ ಸಂಘ ಮೊಬೈಲ್ ಸಂಖ್ಯೆ 9008922234, ಅಧ್ಯಕ್ಷ ಸಿ.ಆರ್. ನಾಗರಾಜು (9448655187) ಹಾಗೂ ಜಯರಾಮ್ (9242272333) ಸಂಪರ್ಕಿಸಬಹುದು ಎಂದು ತಿಳಿಸಿದರು.
