ರಾಮನಾಥಪುರ- ಧರ್ಮ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಉಳಿವು- ಬೆಳವಣಿಗೆಗೆ ನಮ್ಮ ಮಠ- ಮಂದಿರಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಹಾಗೂ ನೈತಿಕ ಮೌಲ್ಯಗಳನ್ನು ಬಲಪಡಿಸುವ ಕೇಂದ್ರಗಳಾಗಿವೆ. ಇಂತಹ ಅಧ್ಯಾತ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ನಡೆಸಿಕೊಂಡು ಹೋಗಬೇಕು ಎಂದು ನಿವೃತ್ತ ಉಪನ್ಯಾಸಕರು ಬೆಂಗಳೂರು ವಿ. ವೆಂಕಟರಮಣಭಟ್ಟರು ತಿಳಿಸಿದರು.

ರಾಮನಾಥಪುರ ಕಾವೇರಿ ನದಿ ದಂಡೆಯಲ್ಲಿ ಹಾಗೂ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಶೃಂಗೇರಿ ಶ್ರೀ ಶಂಕರಮಠ ಶಾಖೆ ರಾಮನಾಥಪುರದ ಶ್ರೀ ಭಾರತೀತೀರ್ಥ ಕಲಾ ಭವನದಲ್ಲಿ ಜಗದ್ಗುರು ಶ್ರೀ ಶಂಕರಭಗವತ್ಪಾದರ ಜಯಂತಿ ಮಹೋತ್ಸವ ಇಂದಿನಿಂದ ಏಪ್ರಿಲ್ 21 ವರೆಗೆ ಐದು ದಿವಸಗಳ ಕಾಲ ಪ್ರತಿದಿನ ಸಂಜೆ 5 ಗಂಟೆಯಿಂದ 6-30 ರವರೆಗೆ ಭಜನೆ ಮತ್ತು ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ ಎಂದು ಶೃಂಗೇರಿ ಶಂಕರ ಮಠದ ವ್ಯವಸ್ಥಾಪಕರು ಕೊಣನೂರು ಗಣೇಶ್ ತಿಳಿಸಿದರು.

ರಾಮನಾಥಪುರ ಶ್ರೀ ಶೃಂಗೇರಿ ಶಂಕರ ಮಠ ಶಾಖೆ ಶ್ರೀ ಭಾರತೀತೀರ್ಥ ಸಭಾ ಭವನದಲ್ಲಿ ಮಾತನಾಡಿದ ಅವರು ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀತೀರ್ಥಮಹಾಸ್ವಾಮೀಜಿಗಳವರ ಹಾಗೂ ತತ್ಕರಕಮಲಸಂಜಾತರಾದ ಶ್ರೀ ವಿಧುಶೇಖರಭಾರತೀಮಹಾಸ್ವಾಮೀಜಿಗಳವರ ಕೃಪಾ ಅಶೀರ್ವಾದಗಳೊಂದಿಗೆ ಜಗದ್ಗುರು ಶ್ರೀ ಶಂಕರಭಗವತ್ಪಾದರ ಜಯಂತಿ ಮತ್ತು ಸನ್ಮಾನ ಸಮಾರಂಭ ಮತ್ತು ಏಪ್ರಿಲ್ 21 ರಂದು ಮಂಗಳವಾರ ಸಂಜೆ 4-30 ಗಂಟೆಗೆ ಜಗದ್ಗುರು ಶ್ರೀ ಶಂಕರ ಭಗವಗವತ್ಪಾದರ ರಥೋತ್ಸವ ನಡೆಯಲಿದೆ – ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಗಣೇಶ್ ಮನವಿ ಮಾಡಿದರು.
