ರಾಮನಾಥಪುರ : ಶ್ರೀ ರಾಮೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ದಿ ರಾಮನಾಥಪುರ ವಲಯದಲ್ಲಿ 3 ವರ್ಷಗಳ ಕಾಲ ಗ್ರಾಮೀಣ ಜನರ ಕುಂದುಕೊರತೆಗಳು, ಮಧ್ಯವಸನ, ಕಾರ್ಯಕ್ರಮಗಳು ಸೇರಿದಂತೆ ಉತ್ತಮ ಸೇವೆ ಸಲ್ಲಿಸಿದ ಧರ್ಮಸ್ಥಳದ ವಲಯದ ಮೇಲ್ವಿಚಾರಕಿಯಾದ ಹೇಮಲತಾ ಅವರನ್ನು ದೇವಾಲಯದ ಸಮಿತಿಯವರು ಗೌರವಿಸಿದರು.

ಈ ಸಂದರ್ಭದಲ್ಲಿ ದೇವಾಲಯದ ಮುಖ್ಯ ಅರ್ಚಕರು ಶ್ರೀನಿವಾಸ, ಸಹ ಅರ್ಚಕರು ರಘು, ದೇವಾಲಯದ ಸಮಿತಿಯವರಾದ ಲೋಕೇಶ್, ಎಂ.ಎನ್. ಕುಮಾರಸ್ವಾಮಿ, ಕಾಳಬೋಯಿ, ಸಿದ್ದರಾಜು, ಕೇಶವ ಧರ್ಮಸ್ಥಳದ ಕಾರ್ಯಕರ್ತರು ರೂಪ ಮುಂತಾದವರು ಧರ್ಮಸ್ಥಳ ಮೇಲ್ವಿಚಾರಕಿ ಹೇಮಲತಾ ಅವರನ್ನು ಗೌರವಿಸಿದರು.
