ಮಾನವೀಯತೆ ಇರಬೇಕಾದರೆ ನಾವು ಪುಸ್ತಕಗಳನ್ನು ಓದಬೇಕು ಅಗ Short ನಿಜವಾದ ಮಾನವೀಯತೆಯ ಗುಣಗಳು ನಮ್ಮಲ್ಲಿ ಇರುತ್ತದೆ ಎಂದು ನಿವೃತ್ತಮುಖ್ಯ ಅರಣ್ಯ ಅಧಿಕಾರಿಗಳಾದ ಯತೀಶ್ ಕುಮಾರ್ ರವರ ಇಂದು ಹಾಸನ ಮಲೆನಾಡು ಇಂಜಿನಿಯರ್ ಕಾಲೇಜು ಆಲ್ಯೂಮ್ನಿ ಹಾಲ್ ನಲ್ಲಿ ನಡೇದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಾತಾನಾಡಿದರು.

ವಿದ್ಯಾರ್ಥಿಗಳಿಗೆ ತಮ್ಮ ವ್ಯಾಸಂಗದ ಜೋತೆಗೆ ಇತರ ಓದುವ ಹವ್ಯಾಸ ಇರಬೇಕು ಎಂದರು ಇದರಿಂದಾಗಿ ನಮಗೆ ಎಲ್ಲಾ ವಿಷಯಗಳನ್ನು ತಿಳಿಯಬಹುದಾಗಿದೆ ಎಂದು ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಸಮಾರಂಭದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಚೌಡುವಳ್ಳಿ ಜಗಧೀಶ್ ಮಾತಾನಾಡಿ ಅರಣ್ಯ ಇಲಾಖೆಯಲ್ಲಿ ಉನ್ನತ ಅಧಿಕಾರಿಗಳಾಗಿ ಕೇಲಸ ಮಾಡಿ ಜೋತೆಗೆ ಹಲವಾರು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪುಸ್ತಕ ಯತೀಶ್ ಕುಮಾರ್ ಬರೆದಿದ್ದಾರೆ ಇವರ ಆಡಳಿತದ ಅನುಭವ ಮತ್ತು ಸಾಮಾಜಿಕವಾಗಿ ಹೇಗಿರಬೇಕು ಎಂಬ ತಮ್ಮದೆ ಅನುಬವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು ಅವರಿಗೆ ಭ
ಮಾರ್ಗದರ್ಶನ ನಿಡುತ್ತಿರುವುದು ಶ್ಲಾಘನಿಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರ್ ಟಿ ದ್ಯಾವೇಗೌಡರು ಮಾತಾನಾಡಿ ಯತೀಶ್ ಕುಮಾರ್ ಇಂಜಿನಿಯರ್ ಪದವಿಯನ್ನು ಪಡೆದು ಅರಣ್ಯ ಇಲಾಖೆಯಲ್ಲಿ ಹಲವಾರು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರವಹಿಸಿದ್ದಾರೆ, ಇವರು ಪರಿಸರ ಜಾಗೃತಿಯ ಬಗ್ಗೆ ಹಾಗೂ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿರುವ ಅನುಭವ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಪ್ರಾಂ ಶುಪಾಲರಾದ ಡಾ. ಹೆಚ್ ಜೆ ಅಮರೆಂದ್ರ ರವರು ಮಾತಾನಾಡಿ ವಿದ್ಯಾರ್ಥಿಗಳಿಗೆ ತಮ್ಮ ವ್ಯಾಸಂಗದ ಜೋತೆಗೆ ಅನುಭವಿಗಳ ಅತ್ಮನುಡಿ ದಾರಿದೀಪವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಬಿ. ಉಮಾ. ರವರು ಹಲವಾರು ಪ್ರಶ್ನೆಗಳನ್ನು ಕೇಳುತ್ತಾ ನಿವೃತ ಅರಣ್ಯ ಅಧೀಕಾರಿಗಳೋಂದಿಗೆ ಮುಕ್ತ ಚರ್ಚೆ ನಡೆಸಿದರು. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಲ ಶಿಕ್ಷಣ ಸಂಸ್ಥೆಯ ಖಜಾಂಚಿಗಳಾದ ಹೆಚ್. ಡಿ. ಪಾರ್ಶ್ವನಾಥ್, ಅಭಿವೃದ್ಧಿಅಧಿಕಾರಿ ಡಾ. ಇಂದ್ರ ಬಹದ್ದೂರ್ ಭಾಗವಹಿಸಿದ್ದರು ಕಾರ್ಯಕ್ರಮದ ಸ್ವಾಗತವನ್ನು ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಸುಮನ್ ಜಯಪ್ರಕಾಶ್ ರವರು ನೆರವೇರಿಸಿದರು.
– ಶಿವಕುಮಾರ್ ಕಟ್ಟಾಯ.
