ಕೆ.ಆರ್.ಪೇಟೆ : ಮಕ್ಕಳ ಬಾಲ್ಯದ ಜೀವನ ನಶಿಸಬಾರದು ಶ್ರೀ ಪಂಚಭೂತೆಶ್ವರ ಸುಕ್ಷೆತ್ರ ಮಠ ಕಲಿಕೆ ಜೊತೆಗೆ ಮಕ್ಕಳಿಗೆ ಸಂಸ್ಕಾರ, ಕಲೆ, ಸಾಹಿತ್ಯ ಕುರಿತು ಈ ಶಿಬಿರದಲ್ಲಿ ತಿಳಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.

ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಬೇಡದಹಳ್ಳಿ ಗ್ರಾಮದ ಶ್ರೀ ಪಂಚಭೂತೆಶ್ವರ ಸುಕ್ಷೆತ್ರ ಮಠದ ಪೀಠಧ್ಯಕ್ಷರಾದ ಶ್ರೀ ರುದ್ರಮುನಿಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ವಸತಿ ಸಹಿತ ಸಂಸ್ಕೃರ ಜ್ಞಾನ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಬೇಸಿಗೆ ರಜಾ ಬಂದರೆ ಸಾಕು ನಾವು ಅಜ್ಜಿ ಮನೆಗೆ ಹೋಗುತ್ತಿದ್ದೆವು. ಅಜ್ಜಿ ಮನೆಯೇ ನಮಗೆ ಬೇಸಿಗೆ ಶಿಬಿರವಾಗಿತ್ತು ಎಂದು ಬಾಲ್ಯದ ನೆನಪು ಮೆಲಕು ಹಾಕಿದರು ಆದರೆ, ಅಜ್ಜಿ ಮನೆಗೆ ಹೋಗುವುದು, ಸಾಂಪ್ರದಾಯಿಕ ಆಟ ಆಡುವುದೆಲ್ಲಾ ಈಗ ಮರೆಯಾಗಿದ್ದು, ಮಕ್ಕಳು ಮೊಬೈಲ್,ಟಿವಿಗೆ ದಾಸರಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಶ್ರೀ ಪಂಚಭೂತೆಶ್ವರ ಸುಕ್ಷೆತ್ರ ಮಠದ ಪೀಠಧ್ಯಕ್ಷರಾದ ಶ್ರೀ ರುದ್ರಮುನಿಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವಸತಿ ಸಹಿತ ಸಂಸ್ಕೃರ ಜ್ಞಾನ ಶಿಬಿರ ಸಮಾರೋಪ ಸಮಾರಂಭ ಆಯೋಜಿಸಿರುವ ಬೇಸಿಗೆ ಶಿಬಿರ ಮಕ್ಕಳಿಗೆ ಪ್ರಯೋಜನಕಾರಿಯಾಗಲಿದೆ. ರಜಾ ದಿನದ ಸಮಯವನ್ನು ವ್ಯರ್ಥ ಮಾಡದೆ ಸೃಜನ ಸಂಸ್ಕಾರಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿರುವುದು ನಿಜಕ್ಕೂ ಸದೃಢ ಸಮಾಜಕ್ಕೆ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮತನಾಡಿದ ಬೇಡದಹಳ್ಳಿ ಪಂಚಭೂತೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ರುದ್ರಮುನಿಸ್ವಾಮಿ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಕೇವಲ ಶಾಲಾ ಶಿಕ್ಷಣ ಮಾತ್ರವಲ್ಲದೆ, ನಮ್ಮ ಸನಾತನ ಧರ್ಮ, ಸಂಸ್ಕೃತಿ ಮತ್ತು ದಿನನಿತ್ಯದ ಆಚರಣೆಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ.ಈ ನಿಟ್ಟಿನಲ್ಲಿ ನಮ್ಮ ಮಠದಿಂದ ಮೂರು ವರ್ಷದಿಂದ ಅರ್ಥಪೂರ್ಣವಾದ ಶಿಬಿರವನ್ನು ಹಮ್ಮಿಕೊಂಡು ಬಂದಿದ್ದೇವೆ ಈ ವರ್ಷದ ಶಿಬಿರವೂ ಕೂಡ ಸಂಪೂರ್ಣವಾಗಿ ಯಶಸ್ವಿಗೊಂಡಿದೆ ಸಮಾಜದಲ್ಲಿ ಶ್ರೇಷ್ಠ ಸಾಧಕರಿಗೆ, ಹಿರಿಯರಿಗೆ, ಸಜ್ಜನರಿಗೆ ಜ್ಞಾನಿಗಳಿಗೆ ಎಲ್ಲೆಡೆ ಗೌರವ ಲಭಿಸುತ್ತದೆ. ಅಂತಹ ಗೌರವವನ್ನು ನಾವೂ ಪಡೆಯುವಂತಾಗಲು ಜನ್ಮ ನೀಡಿದ ತಂದೆ-ತಾಯಿಗಳ ಮಾತನ್ನು ತಪ್ಪದೇ ಪಾಲಿಸಬೇಕು ಎಂದು ಮಕ್ಕಳಿಗೆ ಆಶೀರ್ವಚನ ನೀಡಿದರು.
ಬಳಿಕ ಮಾತನಾಡಿದ ಪ್ರಾಂಶುಪಾಲ ಯತೀಶ್ ಭಾರತೀಯ ಜೀವನ ಪದ್ದತಿಯ ತ್ಯಾಗ ಮತ್ತು ಸೇವೆ. ನಮ್ಮ ಜೀವನ ಅದಕ್ಕಾಗಿ ಮುಡಿಪಿರಬೇಕು. ರ್ಯಾಂಕ್ , ಮಾರ್ಕ್ಸ್ ಮತ್ತು ಹಣವೇ ಪ್ರಧಾನವಲ್ಲ, ಭಾರತೀಯ ಜೀವನ ಪದ್ಧತಿಯಲ್ಲಿ ಗುಣವಿಲ್ಲದ ಹಣ ವ್ಯರ್ಥ ಹಾಗಂತ ಗುಣಸಹಿತ ಹಣ ಬೇಕು.ಬೇರೆ ದೇಶಗಳ ಹಾಗೆ ನಮಗೆ ಆಶಂಕ, ಒತ್ತಡಗಳಿಲ್ಲ ಹಿಂದೆ ಏನನ್ನು ಮಾಡಿದ್ದವೋ ಅನುಭವಿಸುತ್ತಿದ್ದಾರೆ. ಇನ್ನೊಬ್ಬರಿಗೆ ತೊಂದರೆ ಅದನ್ನು ಭಾರತ ಕೊಟ್ಟ ದೇಶವಲ್ಲ,ಇದರಿಂದ ಜಗತ್ತಿನಲ್ಲಿ ಭಾರತದ ಕುರಿತು ಸದ್ಭಾವನೆ ಇದೆ.ಶಿಬಿರಾರ್ಥಿಗಳು ಇಲ್ಲಿ ಕಲಿತ ವಿಚಾರಗಳನ್ನು ಜೀವನ ಪರ್ಯಂತ ಉಳಿಸಿಕೊಂಡವರು ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದರು.ಶಿಬಿರಾರ್ಥಿಗಳು ಶಿಬಿರದ ಅನುಭವ ಹಂಚಿಕೊಂಡರು.ಶಿಬಿರದಲ್ಲಿ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ತಾಲ್ಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್, ಜಿಲ್ಲಾ ಮಾಜಿ ಅಧ್ಯಕ್ಷ ಸುಬ್ರಮಣ್ಯ,ಡಾ.ಶಿವರಾಮು, ಹಿರಿಯ ಪತ್ರಕರ್ತ ಹರಿಚರಣ ತಿಲಕ್,ಭಾರತಿಪುರ ಎಳನೀರು ಪುಟ್ಟಣ್ಣ, ಕಾರ್ಯನಿರತ ಪತ್ರಕರ್ತ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ವೈ ಆನಂದ್, ವಕೀಲ ಕಿಕ್ಕೇರಿ ಚಂದ್ರು, ಶಿಕ್ಷಕರಾದ ಕಾಂತರಾಜು, ಡಾ ಕೆ.ಎಸ್ ಚಂದ್ರು ಕಾಡುಮೆಣಸ ,ಯೋಗ ಶಿಕ್ಷಕ ಪರಮೇಶ್,ಅವಿನಾಶ್,ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜೀಗೆರೆ ಮಹೇಶ್, ಸೇರಿದಂತೆ ಶಿರಾರ್ಥಿಗಳು ಪೋಷಕರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
