ಕೊರಟಗೆರೆ:- ತಾಲ್ಲೂಕಿನ ಬುಕ್ಕಪಟ್ಟಣ ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ನಡೆದ ಶಿಕ್ಷಣ ಭೀಷ್ಮ ಡಾ.ಹೆಚ್.ಎಂ.ಗಂಗಾಧರಯ್ಯನರ ಸ್ಮಾರಣಾರ್ಥ ಕನ್ನಡ ಶಿಕ್ಷಕ ಮತ್ತು ತಾಲ್ಲೂಕು ಎಸ್ಸಿ.ಎಸ್ಟಿ. ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಲಕ್ಷ್ಮೀಪುತ್ರ ಹಾಗೂ ಪ್ರಥಮ ದರ್ಜೆ ಸಹಾಯಕ ಹನುಮಂತರಾಜು ರವರ ವಯೋ ನಿವೃತ್ತಿ ಗೌರವ ಸಮರ್ಪಣಾ ಸಮಾರಂಭ ಮತ್ತು 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾಧಕರು ಮತ್ತು ಕನ್ನಡ ವಿಷಯದಲ್ಲಿ ಸಂಪೂರ್ಣ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಗೃಹ ಸಚಿವರ ವಿಶೇಷ ಅಧಿಕಾರಿ ಡಾ. ನಾಗಣ್ಣ ಉದ್ಘಾಟಿಸಿ ಮಾತನಾಡಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಕ್ತಿ ಶಿಕ್ಷಕರಿಗಿದ್ದು ಅದನ್ನು ಲಕ್ಷ್ಮೀಪುತ್ರ ಉತ್ತಮವಾಗಿ ನೆರವೇರಿಸಿದ್ದಾರೆ,
ನಿವೃತ್ತಿ ಬೀಳ್ಕೋಡಿಗೆ ಸಮಾರಂಭವನ್ನು ಪ್ರತಿಭಾಪುರಸ್ಕಾರ ಸಮಾರಂಭವನ್ನಾಗಿ ಆಚರಿಸಿಕೊಳ್ಳುತ್ತಿರುವ ಕನ್ನಡ ಶಿಕ್ಷಕ ಲಕ್ಷ್ಮೀಪುತ್ರ ಉದ್ದೇಶ ಉತ್ತಮವಾದದು ಎಂದು ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ನಾಗಣ್ಣ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪೈರೋಜ್ ಬೇಗಂ ಮಾತನಾಡಿ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೊರಟಗೆರೆ ತಾಲ್ಲೂಕು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಲು ಕಾರಣ ನಮ್ಮ ಶಿಕ್ಷಕರ ಶ್ರಮ, ವಿಧ್ಯಾರ್ಥಿಗಳ ಸಾಧನೆ, ಕ್ಷೇತ್ರ ಶಾಸಕರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರ ಮಾರ್ಗದರ್ಶನ ಕಾರಣವಾಗಿದೆ ಎಂದರು.
ಮುಖಂಡ ಮಾಹಾಲಿಂಗಪ್ಪ ಮಾತನಾಡಿ ಶಿಕ್ಷಣ ಕ್ಷೇತ್ರ ಬಹಳ ಪವಿತ್ರವಾದ ಕ್ಷೇತ್ರವಾಗಿದ್ದು ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲ್ಲಿ ಇರುತ್ತದೆ, ಗ್ರಾಮೀಣ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳಿಗಿಂತ ಹೆಚ್ಚು ಬುದ್ದಿವಂತರಾಗಿದ್ದು ಅವರಿಗೆ ಸರಿಯಾದ ಮಾರ್ಗ ಅವಕಾಶ ಬೇಕಾಗಿದೆ ಈ ನಿಟ್ಟಿನಲ್ಲಿ ಶಿಕ್ಷಕರ ಮಾರ್ಗದರ್ಶನ ಅವಶ್ಯಕವಾಗಿದೆ ಈ ದಸೆಯಲ್ಲಿ ಶಿಕ್ಷಕರಾದ ಲಕ್ಷ್ಮಿಪುತ್ರ ಉತ್ತಮ ಸೇವೆ ಮಾಡ್ಡಿದ್ದು, ಅದೇ ರೀತಿ ಹನುಮಂತರಾಜು ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ತಾಲ್ಲೂಕು ಟಾಪರ್ ಹರ್ಷ.ಪಿ.ಎನ್. ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಲ್ಲಿ ಮಧುಗಿರಿ ಡಿ.ಡಿ.ಪಿ.ಐ, ಮಾಧವರೆಡ್ಡಿ, ಜಿಲ್ಲಾ ಕ.ಸಾ.ಪ ಅದ್ಯಕ್ಷ ಸಿದ್ದಲಿಂಗಯ್ಯ, ಗಂಗಾಧರ್, ಸುಧಾಕರ್, ವೇಧಮೂರ್ತಿ, ಹನುಮಂತರಾಯಪ್ಪ, ರುದ್ರೇಶ್, ಬಿ.ಜಿ.ಹನುಮಂತರಾಯಪ್ಪ, ಪರಮೇಶ್. ಕೋಟೆಕಲ್ಲಪ್ಪ, ತಿಪ್ಪೇಸ್ವಾಮಿ, ಮಾರುತೀಶ್ ಮುಖಂಡರಾದ ಲಕ್ಷ್ಮೀಶ್ ,ಗೊಂದಿಹಳ್ಳಿ ರಂಗರಾಜು, ರಾಜು, ದೇವರಾಜು, ಸೇರಿದಂತೆ ಹಲವರು ಹಾಜರಿದ್ದರು.
– ಶ್ರೀನಿವಾಸ್ ಕೊರಟಗೆರೆ.
