ಕೆ.ಆರ್.ಪೇಟೆ: ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ಪಕ್ಷದ ರಾಷ್ಟಿçÃಯ ವರಿಷ್ಠರಾದ ಪೂಜ್ಯ ಹೆಚ್.ಡಿ.ದೇವೇಗೌಡರ 94ನೇ ಹುಟ್ಟು ಹಬ್ಬವನ್ನು ಕೆ.ಆರ್.ಪೇಟೆ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಹಾಗೂ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ನೇತೃತ್ವದಲ್ಲಿ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ, ಮಾವಿನ ಸಸಿಗಳನ್ನು ರೈತರಿಗೆ ವಿತರಿಸುವ ಮೂಲಕ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಮಾತನಾಡಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ದೆಹಲಿಯ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಏಕೈಕ ಕನ್ನಡಿಗರಾಗಿದ್ದಾರೆ. ದೇವೇಗೌಡರು ದೇಶದ ಕೋಟಿ ಕೋಟಿ ರೈತರ ಮನಸ್ಸು ಗೆದ್ದಿರುವ ಏಕೈಕ ಪ್ರಧಾನಿಯಾಗಿದ್ದು ದೇವೇಗೌಡರ ಹೆಸರನ್ನು ಪಂಜಾಬಿನ ರೈತರು ಭತ್ತದ ತಳಿಗೆ ಹೆಸರು ಇಡುವ ತಮ್ಮ ಗೌರವವನ್ನು ಸಲ್ಲಿಸಿದ್ದಾರೆ. ಸುಮಾರು 10ತಿಂಗಳು ಪ್ರಧಾನ ಮಂತ್ರಿಗಳಾಗಿದ್ದ ಅವಧಿಯಲ್ಲಿ ಭಾರತ-ಬಾಂಗ್ಲಾ ನಡುವೆ ವಿವಾದವಾಗಿದ್ದ ಗಂಗಾ ನದಿ ನೀರಿನ ಹಂಚಿಕೆ ಕುರಿತು ಪರಕ್ಕಾ ಒಪ್ಪಂದವನ್ನು ಯಶಸ್ವಿಯಾಗಿ ವಿವಾದವನ್ನು ಬಗೆಹರಿಸಿದರು. ಈಶಾನ್ಯ ರಾಜ್ಯಗಳಲ್ಲಿ ನಾಗಾ ಉಗ್ರಗಾಮಿಗಳೊಂದಿಗೆ ಕದನ ವಿರಾಮ ಘೋಷಿಸುವ ಮೂಲಕ ಶಾಂತಿ ಸ್ಥಾಪನೆ ಮಾಡಿ ಐತಿಹಾಸಿಕ ನಿರ್ಧಾರ ಕೈಗೊಂಡು ಈಶಾನ್ಯ ರಾಜ್ಯಗಳಲ್ಲಿ ಜನರ ನೆಮ್ಮದಿಯ ಜೀವನಕ್ಕೆ ಕಾರಣರಾದರು.

ರೈತರ ಪರವಾದ ಆಡಳಿತವನ್ನು ನೀಡಿದರು. ಹೈನುಗಾರಿಕೆ ಅಭಿವೃದ್ಧಿಗೆ ಸ್ಟೆಪ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಕ್ಷೀರಕ್ರಾಂತಿಗೆ ಕಾರಣರಾದರು. ನೀರಾವರಿಗೆ ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟರು. ದೇಶದ ಗಡಿಗೆ ಬೇಟಿ ನೀಡಿ ಯೋಧರಿಗೆ ದೈರ್ಯ ತುಂಬಿದರು. ಹುಬ್ಬಳ್ಳಿಯ ಈದ್ಗಾ ಮೈದಾನದ ಸಮಸ್ಯೆಯನ್ನು ಒಂದೇ ಗಂಟೆಯಲ್ಲಿ ಬಗೆಹರಿಸಿದರು. ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಿದರೆ. ಇನ್ನಷ್ಟು ವರ್ಷಗಳ ಕಾಲ ಅಧಿಕಾರ ಸಿಕ್ಕಿದ್ದರೆ ದೇಶವನ್ನು ಅಭಿವೃದ್ಧಿಯ ನಾಗಾಲೋಟದಲ್ಲಿ ಸಾಗಿಸುವಂತೆ ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ಪಕ್ಷದವರು ದೇವೇಗೌಡರ ಅಧಿಕಾರದ ಯಶಸ್ಸು ಸಹಿಸಲಾಗದೇ ಅಧಿಕಾರದಿಂದ ಕೆಳಕ್ಕೆ ಇಳಿಸಿದರು.
ಪ್ರಧಾನ ನರೇಂದ್ರ ಮೋದಿಯವರಿಗೆ ಅಚ್ಚುಮೆಚ್ಚಿನ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಹೆಚ್.ಡಿ.ದೇವೇಗೌಡರು 94ರ ಇಳಿ ವಯಸ್ಸಿನಲ್ಲೂ ನಮ್ಮ ರೈತರು ಮತ್ತು ಕರ್ನಾಟಕ ರಾಜ್ಯ ಸಮಸ್ಯೆಗಳನ್ನು ರಾಜ್ಯಸಭೆಯ ಸಂಸತ್ತಿನಲ್ಲಿ ಅನಾವರಣ ಮಾಡಿ ಪರಿಹಾರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇಂತಹ ರಾಜಕೀಯ ಮುತ್ಸದ್ದಿ ಶತಾಯುಷಿಗಳಾಗಿ ಗಿನ್ನಿಸ್ ದಾಖಲೆ ಮಾಡುವಂತಾಗಲಿ, ದೇವರು ಆಯಸ್ಸು, ಆರೋಗ್ಯ ನೀಡಲಿ ಎಂದು ಶಾಸಕ ಹೆಚ್.ಟಿ.ಮಂಜು ದೇವರಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜುಳಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ವಳಗೆರೆಮೆಣಸ ಮಹಾದೇವೇಗೌಡ, ತಾಲ್ಲೂಕು ಜೆಡಿಎಸ್ ಗೌರವಾಧ್ಯಕ್ಷ ತೋಟಪ್ಪಶೆಟ್ಟಿ, ತಾಲ್ಲೂಕು ಜೆಡಿಎಸ್ ರೈತ ಮೋರ್ಚಾ ಅಧ್ಯಕ್ಷ ಹೆಳವೇಗೌಡ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಮಡುವಿನಕೋಡಿ ಎಂ.ಆರ್.ಮನು, ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ಉಪಾಧ್ಯಕ್ಷ ಕಾಯಿ ಮಂಜೇಗೌಡ. ನಿರ್ದೇಶಕರಾದ ನಾಗರಘಟ್ಟ ದಿಲೀಪ್ಕುಮಾರ್, ಹೆಚ್.ಟಿ.ಲೋಕೇಶ್, ಮಧು, ಜೆಡಿಎಸ್ ಮುಖಂಡರಾದ ಡಿಸಿಸಿ ಹೆಚ್.ಕೆ.ಅಶೋಕ್, ವಿ.ಎಸ್.ಧನಂಜಯಕುಮಾರ್, ಪಿಕೆಜಿ ಮಹೇಶ್, ಚಿಕ್ಕೋಸಹಳ್ಳಿ ನಾಗೇಶ್, ಚಿಕ್ಕಗಾಡಿಗನಹಳ್ಳಿ ಕುಮಾರ್, ನರಸನಾಯಕ್, ವಡ್ಡರಹಳ್ಳಿ ಮಹಾದೇವೇಗೌಡ, ಹೊಸೂರು ಸ್ವಾಮೀಗೌಡ, ಸಂತೇಬಾಚಹಳ್ಳಿ ಸಾಮಿಲ್ ರವಿಕುಮಾರ್, ಅಕ್ಕಿಹೆಬ್ಬಾಳು ಬಸವಲಿಂಗಪ್ಪ, ಭೈರಾಪುರ ಹರೀಶ್, ಅಜಯ್ ರಾಮೇಗೌಡ, ಅತೀಕ್ ಅಹಮದ್, ಬಣ್ಣೇನಹಳ್ಳಿ ಧನಂಜಯ, ಬೇಲದಕೆರೆ ನಂಜಪ್ಪ, ಮರೀಗೌಡ, ಕೃಷ್ಣೇಗೌಡ, ಅರಳಕುಪ್ಪೆ ಪ್ರತಾಪ್, ಜೀವನ್, ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
