ಕೆ.ಆರ್.ಪೇಟೆ : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಅಘಲಯ ಎ.ಎಸ್.ರಮೇಶ್ ನೇತೃತ್ವದಲ್ಲಿ ಪಟ್ಟಣದ ಟೌನ್ ಕ್ಲಬ್ ವೃತ್ತದಲ್ಲಿ ಸಿಎಂ. ಡಿಕೆ.ಶಿವಕುಮಾರ್ ಅವರ ಸುಮಾರು 25ಅಡಿ ಎತ್ತರದ ಬೃಹತ್ ಕಟೌಟ್ಗೆ ಕ್ಷೀರಾಭಿಷೇಕ ಮಾಡಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ತಾಲ್ಲೂಕು ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಘಲಯ ಎ.ಎಸ್.ರಮೇಶ್ ಮಾತನಾಡಿ ನಮ್ಮ ನೆಚ್ಚಿನ ನ್ಯಾಯಕರು ದಕ್ಷ ಆಡಳಿತಗಾರರು 40ವರ್ಷಗಳ ಸುಧೀರ್ಘ ರಾಜಕೀಯದಲ್ಲಿ ತಾಳ್ಮೆ ಮತ್ತು ಸಹನೆ ಹಾಗೂ ಪಕ್ಷ ಸಂಘಟನೆಯನ್ನು ಮೈಗೂಡಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು ಮೈಲುಗಲ್ಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಕೇವಲ ನಾಯಕರಲ್ಲ. ಕಾಂಗ್ರೆಸ್ ಪಕ್ಷದ ಜೀವಾಳ.

40ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿದಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ರಾಜಕೀಯಕ್ಕೆ ಕಾಲಿಟ್ಟ ದಿನದಿಂದ ಇವತ್ತಿನ ಕೆಪಿಸಿಸಿ ಅಧ್ಯಕ್ಷರವರೆಗೂ ಪಕ್ಷಕ್ಕಾಗಿ ಹಗಲು-ರಾತ್ರಿ ಶ್ರಮಿಸಿದ್ದಾರೆ. ವಿರೋಧ ಪಕ್ಷದ ಕುತಂತ್ರದಿಂದ ಜೈಲು ಶಿಕ್ಷೆ ಅನುಭವಿಸಿದಾಗಲೂ ಸಹ ರಾಜಕೀಯ ಸಂಕಷ್ಟ ಎದುರಾದಾಗಲೂ ಪಕ್ಷ ಬಿಡದೇ ನಿಷ್ಠೆಯಿಂದ ನಿಂತರು.

ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯಾದ್ಯಂತ ಪಕ್ಷವನ್ನು ಸಂಘಟನೆ ಮಾಡಿ, 135ಸ್ಥಾನಗಳೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ. ಕಷ್ಟದಲ್ಲಿರುವ ಕಾರ್ಯಕರ್ತನ ಮನೆಗೆ ನೇರವಾಗಿ ಹೋಗಿ ಸಾಂತ್ವನ ಹೇಳುವ ಗುಣ ಜೊತೆಗೆ ತಾಳ್ಮೆ, ಸಂಘಟನಾ ಚಾತುರ್ಯ, ದುಡಿಮೆ – ಇವೆಲ್ಲವೂ ಸೇರಿ ಇವತ್ತು ಮುಖ್ಯಮಂತ್ರಿ ಕುರ್ಚಿ ತಲುಪಿದ್ದಾರೆ. ಅವರ ನೇತೃತ್ವದಲ್ಲಿ ಕರ್ನಾಟಕ ರೈತ, ಯುವಕ, ಮಹಿಳೆ ಎಲ್ಲರಿಗೂ ನ್ಯಾಯ ಸಿಗಲಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಎಲ್.ದೇವರಾಜು ಮಾತನಾಡಿ ಡಿ.ಕೆ.ಶಿವಕುಮಾರ್ ಅವರ ತಾಳ್ಮೆ ಹಾಗೂ ಸುದೀರ್ಘ ಪಕ್ಷ ನಿಷ್ಠೆ ಎಲ್ಲರಿಗೂ ಮಾದರಿಯಾಗಿದೆ. ಅವರ ನೇತೃತ್ವದಲ್ಲಿ ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿ ಕಾಣಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ತಾ.ಪಂ ಮಾಜಿ ಸದಸ್ಯ ಸಣ್ಣನಿಂಗೇಗೌಡ, ಪುರಸಭೆ ಮಾಜಿ ಸದಸ್ಯ ಡಿ.ಪ್ರೇಮ್ ಕುಮಾರ್, ಕೃಷಿಕ ಸಮಾಜ ನಿರ್ದೇಶಕ ಅಶೋಕ್, ಹೆತ್ತೋಗೋನಹಳ್ಳಿ ನಾರಾಯಣಗೌಡ, ನಿವೃತ್ತ ಬಿಇಓ ಎ.ಬಿ.ಪುಟ್ಟಸ್ವಾಮೀಗೌಡ, ಸಂತೇಬಾಚಹಳ್ಳಿ ಡೇರಿ ಅಧ್ಯಕ್ಷ ಹರೀಶ್, ಮರಿಸ್ವಾಮೀಗೌಡ, ಹಾದನೂರು ಪರಮೇಶ್, ಐ.ಸಿ.ರಮೇಶ್, ಎ.ಸಿ.ವೆಂಕಟೇಶ್ವರ್, ಅಂಬಿಗರಹಳ್ಳಿ ಶಿವರಾಂ, ಆದಿಹಳ್ಳಿ ಮೀನಾಕ್ಷಿ, ಬಳ್ಳೇಕೆರೆ ಗಣೇಶ್, ಇಲಿಯಾಜ್ ಅಹಮದ್, ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್, ಕೆ.ಟಿ.ಹರೀಶ್, ಮಾಕವಳ್ಳಿ ಮಂಜೇಗೌಡ, ವೆಂಕಟಪ್ಪ, ಯುವ ಮುಖಂಡ ದೊಡ್ಡಗಾಡಿಗನಹಳ್ಳಿ ಲೋಕೇಶ್, ಹಾಗೂ ಕೆ.ಆರ್.ಪೇಟೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶುಭಾಶಯ ಕೋರಿದರು.
*ಎಲ್.ಇ.ಡಿ.ಪರದೆಯಲ್ಲಿ ಪ್ರಮಾಣ ವಚನ ನೇರ ಪ್ರಸಾರ ವೀಕ್ಷಣೆಗೆ ಅವಕಾಶ*
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು ನೇತೃತ್ವವದಲ್ಲಿ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ಚೀಕಾರ ಸಮಾರಂಭದ ನೇರ ಪ್ರಸಾರವನ್ನು ಎಲ್.ಇ.ಡಿ ದೊಡ್ಡ ಪರದೆಯಲ್ಲಿ ಮೂಲಕ ವೀಕ್ಷಣೆ ಮೂಲಕ ವಿಜಯೋತ್ಸವ ಆಚರಣೆ ಮಾಡಿದರು.
ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ಎ.ಬಿ.ಪುಟ್ಟಸ್ವಾಮಿಗೌಡ, ಎ.ಬಿ.ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಆದಿಹಳ್ಳಿ ಮೀನಾಕ್ಷಿ, ಮುಖಂಡರಾದ ಐಚನಹಳ್ಳಿ ಶಿವಣ್ಣ, ಎ.ಸಿ.ವೆಂಕಟೇಶ್ವರ್, ಬಳ್ಳೇಕೆರೆ ಗಣೇಶ್, ಸಿ.ಆರ್.ಪಿ.ಕುಮಾರ್, ಮಾಕವಳ್ಳಿ ಮಂಜೇಗೌಡ, ಹಾದನೂರು ಪರಮೇಶ್, ಅಂಬಿಗರಹಳ್ಳಿ ಶಿವರಾಂ, ಕೆ.ಟಿ.ಹರೀಶ್, ಸೇರಿದಂತೆ ಇತರೆ ಗಣ್ಯರು ಎಲ್.ಇ.ಡಿ ದೊಡ್ಡ ಪರದೆಯಲ್ಲಿ ವೀಕ್ಷಣೆ ಮಾಡಿ ವಿಜಯೋತ್ಸವ ಆಚರಣೆ ಮಾಡಿದರು.
– ಶ್ರೀನಿವಾಸ್ ಆರ್.
