ಹಾಸನ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ಪಂದನ ಸಿರಿ ವೇದಿಕೆ ವತಿಯಿಂದ ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಧದ ಕೋಠಿ ಆವರಣದಲ್ಲಿ ಗಿಡ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಾಂಶುಪಾಲರು ಪ್ರೊ. ಮಂಜಯ್ಯ. ಡಿ ಕೆ, ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ಪಂದನ ಸಿರಿ ವೇದಿಕೆ ರಾಜ್ಯಾಧ್ಯಕ್ಷರು ಕಲಾವತಿ ಮಧುಸೂದನ್, ಕದಂಬ ಸೇನೆ ಕನ್ನಡ ಸಂಘಟನೆ ಹಾಸನ ಜಿಲ್ಲಾಧ್ಯಕ್ಷರು ಪ್ರೊಫೆಸರ್ ಎ. ಹೆಚ್. ಗಣೇಶ್ ಅಂಕಪುರ, ಸಾಹಿತಿ ಗೊರೂರು ಅನಂತರಾಜು, ಕ್ಯಾಪ್ಟನ್ ಜಯರಾಮ್, ಗಿರಿಜಾಂಬ, ಪುಟ್ಟೇಗೌಡ, ಪವನ್ ಕುಮಾರ್, ಅಧ್ಯಾಪಕರಾದ ಡಾ. ಶಿವಕುಮಾರ್, ಮಂಜುನಾಥ. ಎ. ಕೆ ಯೋಗೀಶ್, ಸುಧಾರಾಣಿ, ನವ್ಯಶೆಟ್ಟಿ, ಗೀತಾoಜಲಿ. ಆಡಳಿತ ವಿಭಾಗದ ಶೀಲಾ, ಸುಧಾಮಣಿ, ರವಿ, ಮೋಹನ್ ಕುಮಾರ್, ಅಖಿಲಮ್ಮ ಹಾಜರಿದ್ದರು.
