ತುಮಕೂರು: ತಾಲೂಕಿನ, ಹೆಬ್ಬೂರು ವಲಯದ, ಹೆಬ್ಬೂರು ಹೋಬಳಿ, ಬಳ್ಳಗೆರೆ ಗ್ರಾಮದ ಜೈ ಮಾರುತಿ ದೇವಾಲಯ ಸೇವಾ ಸಮಿತಿಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ವತಿಯಿಂದ 2,50,000/- ಮೊತ್ತವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ||ಡಿ.ವೀರೇಂದ್ರಹೆಗ್ಗಡೆರವರು ಮಂಜೂರುಮಾಡಿರುವ ಡಿ.ಡಿ ವಿತರಣೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಎಂ.ಶೀನಪ್ಪ ಹಾಗೂ ತುಮಕೂರು-1 ಜಿಲ್ಲಾ ಮಾನ್ಯ ನಿರ್ದೇಶಕರಾದ ಸತೀಶ್ ಸುವರ್ಣ ಮತ್ತು ತುಮಕೂರು ಯೋಜನಾಧಿಕಾರಿಯವರಾದ ಪ್ರಭಾಕರ್ ರವರು ದೇವಸ್ಥಾನದ ಆಡಳಿತ ಸಮಿತಿಯವರಿಗೆ ವಿತರಣೆ ಮಾಡಿದರು.
ನಂತರ ಮಾತನಾಡಿದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ರವರು ಧರ್ಮಸ್ಥಳದ ಪ್ರಸಾದ ರೂಪದಲ್ಲಿ ಈಗ 2ಲಕ್ಷದ 50 ಸಾವಿರ ರೂಗಳನ್ನು ಪೂಜ್ಯ ಖಾವಂದರು ನೀಡಿದ್ದಾರೆ, ನಂತರ ತಮ್ಮ ಕಾರ್ಯಕ್ಕೆ ವಿವಿಧ ಕಡೆಯಿಂದ ಸಹಾಯ ಹರಿದು ಬರಲಿದೆ ತಮ್ಮಿಂದ ಧರ್ಮಸ್ಥಳ ವಸ್ತು ರೂಪದ ಸಹಾಯ ಬಯಸಲ್ಲ ಸಮಾಜಮುಖಿ ಕಾರ್ಯಕ್ರಮಗಳಾದ ನಮ್ಮೂರ ನಮ್ಮ ಕೆರೆ, ಹಾಲು ಸಂಗ್ರಹಣಾ ಕೇಂದ್ರ ಕಟ್ಟಡಕ್ಕೆ ಅನುದಾನ ಶಿಕ್ಷಣ ಇತರೆ ಎಲ್ಲಾ ಕಾರ್ಯಕ್ಕೆ ತಾವು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ಧರ್ಮಸ್ಥಳದ ಹಿನ್ನೆಲೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು, ತುಮಕೂರು ತಾಲೂಕಿನ ಯೋಜನಾಧಿಕಾರಿಯಾದ ಪ್ರಭಾಕರ್ ರಾಮ್ ನಾಯ್ಕ್, ಮೇಲ್ವಿಚಾರಕರು,ಸೇವಾಪ್ರತಿನಿಧಿಗಳು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
