ಕೊರಟಗೆರೆ:- ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ _Special Intensive Revision – SIR_ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಒಂದು ತಿಂಗಳ ಕಾಲ ನಡೆಯುವ ಈ ಅಭಿಯಾನ ಜುಲೈ 29ಕ್ಕೆ ಮುಕ್ತಾಯವಾಗಲಿದೆ.
*ಕ್ಷೇತ್ರದ ಮಾಹಿತಿ:*
ಕೊರಟಗೆರೆ ಕ್ಷೇತ್ರದಲ್ಲಿ ಒಟ್ಟು *6 ಹೋಬಳಿ, 386 ಗ್ರಾಮ, 2,09,945 ಮತದಾರರು* ಹಾಗೂ *240 ಮತಗಟ್ಟೆಗಳಿವೆ*. ಪ್ರತಿ ಮತಗಟ್ಟೆಗೆ ಒಬ್ಬರಂತೆ ಒಟ್ಟು 240 ಬೂತ್ ಮಟ್ಟದ ಅಧಿಕಾರಿಗಳನ್ನು _BLO_ ನೇಮಿಸಲಾಗಿದೆ.
ತಾಲೂಕು ಮತ್ತು ಹೋಬಳಿ ನೋಡೆಲ್ ಅಧಿಕಾರಿಗಳು ಹಾಗೂ ಬಿಎಲ್ಒಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ಹೆಸರು, ವಿಳಾಸ, ಫೋಟೋ ಸೇರಿದಂತೆ ಎಲ್ಲಾ ವಿವರಗಳನ್ನು ಪರಿಶೀಲಿಸಲಿದ್ದಾರೆ. ಹೊಸ ಮತದಾರರ ಸೇರ್ಪಡೆ, ಮೃತರಾದವರ ಹೆಸರು ತೆಗೆಯುವಿಕೆ, ತಿದ್ದುಪಡಿ ಕಾರ್ಯ ನಡೆಯಲಿದೆ.
ಈ ಹಿನ್ನೆಲೆಯಲ್ಲಿ *ತುಮಕೂರು ಜಿಲ್ಲಾ ನೋಂದಣಾಧಿಕಾರಿ ವಿಜಯಲಕ್ಷ್ಮಿ ಡಿ.ಆರ್, ಕೃಷಿ ಇಲಾಖೆ ಉಪನಿರ್ದೇಶಕ ಡಾ. ಚಂದ್ರಕುಮಾರ್ ಹಾಗೂ ಕೊರಟಗೆರೆ ತಹಶೀಲ್ದಾರ್ ಮಂಜುನಾಥ್, ಪುರಸಭೆ ಮುಖ್ಯ ಅಧಿಕಾರಿ ಉಮೇಶ್, ಕಸಬಾ ಹೋಬಳಿ ಆರ್ ಐ ಬಸವರಾಜು, ವಿ ಎ ಪವನ್ * ಅವರು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೂತ್ ಮಟ್ಟದ ಅಧಿಕಾರಿಗಳ ಕಾರ್ಯ ವೈಖರಿ ಪರಿಶೀಲಿಸಿದರು.
ಕೋಟ್ ಬಳಸಿ ಸರ್:
“ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಆಧಾರ. ಒಬ್ಬ ಮತದಾರನೂ ಮಿಸ್ ಆಗಬಾರದು, ನಕಲಿ ಮತದಾರ ಸೇರಬಾರದು. ಈ SIR ಅಭಿಯಾನದಲ್ಲಿ 100% ನಿಖರ ಪಟ್ಟಿ ತಯಾರಿಸುವುದು ನಮ್ಮ ಗುರಿ. BLOಗಳು ಪ್ರತಿ ಮನೆಗೂ ಭೇಟಿ ನೀಡಿ ಖಚಿತಪಡಿಸಿಕೊಳ್ಳುತ್ತಾರೆ.”
ವಿಜಯಲಕ್ಷ್ಮೀ, ತುಮಕೂರು ಜಿಲ್ಲಾ ನೊಂದಣಾಧಿಕಾರಿ..
* “ಗ್ರಾಮೀಣ ಭಾಗದ ರೈತಾಪಿ ಜನರಿಗೆ ಮತದಾನದ ಮಹತ್ವ ತಿಳಿಸಿಕೊಡುವುದು ನಮ್ಮ ಜವಾಬ್ದಾರಿ. ಈ ಪರಿಷ್ಕರಣೆ ವೇಳೆ 18 ವರ್ಷ ತುಂಬಿದ ಎಲ್ಲಾ ಯುವಕ-ಯುವತಿಯರ ಹೆಸರು ಸೇರ್ಪಡೆಯಾಗಬೇಕು. ರೈತರು ತಪ್ಪದೇ ಸಹಕರಿಸಿ.”
ಡಾ. ಚಂದ್ರಕುಮಾರ್, ಉಪ ನಿರ್ದೇಶಕ, ಕೃಷಿ ಇಲಾಖೆ..
“ಯಾವುದೇ ಗೊಂದಲ ಅಥವಾ ಲೋಪ ಉಂಟಾಗದಂತೆ ಮನೆ-ಮನೆಗೆ ಸಮರ್ಪಕವಾಗಿ ಪರಿಶೀಲನೆ ನಡೆಸಿ, ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಸಾರ್ವಜನಿಕರು ಆಧಾರ್ ಕಾರ್ಡ್, ವೋಟರ್ ID, ಜನನ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು BLOಗಳಿಗೆ ಸಹಕರಿಸಬೇಕು.”
ಕೆ.ಮಂಜುನಾಥ, ತಹಶೀಲ್ದಾರ್
ಕೊರಟಗೆರೆ
ವರದಿ- ಶ್ರೀನಿವಾಸ್ ಕೊರಟಗೆರೆ.
