ಕೆ ಆರ್ ಪೇಟೆ: ಪೌರಾಣಿಕ ನಾಟಕಗಳು ಜೀವನದಲ್ಲಿ ಮೌಲ್ಯಗಳ ಮಹತ್ವವನ್ನು ತಿಳಿಸುತ್ತವೆ ಎಂದು ಆರ್ ಟಿ ಓ ಸಂಘದ ರಾಜ್ಯಾದ್ಯಕ್ಷರು ಹಾಗೂ ಸಮಾಜ ಸೇವಕ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಅವರು ಕಸಬಾ ಹೋಬಳಿ ಕಾಮನಹಳ್ಳಿ ಗ್ರಾಮದಲ್ಲಿ ಶ್ರೀ ವಡ್ಗಲಮ್ಮ ದೇವಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಆಯೋಜಿಸಿದ್ದ ಭಕ್ತ ಪ್ರಹ್ಲಾದ ಅಥವಾ ಹಿರಣ್ಯ ಕಶ್ಯಪ ವಧೆ ಎಂಬ ಪೌರಾಣಿಕ ನಾಟಕದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಟಕಗಳಲ್ಲಿ ಬರುವ ಪ್ರತಿಯೊಂದು ಸನ್ನಿವೇಶವೂ ನಮ್ಮ ಜೀವನಕ್ಕೆ ಹತ್ತಿರವಾಗಿದೆ. ರಂಗಕಲೆಯನ್ನು ಇನ್ನು ಜೀವಂತವಾಗಿಟ್ಟುಕೊಂಡು ಮುಂದಿನ ಪೀಳಿಗೆಗೆ ಕೊಡುಗೆ ನೀಡಲು ರಂಗ ಕಲಾವಿದರು ಶ್ರಮಿಸುತ್ತಿರುವುದು ಉತ್ತಮ ಬೆಳೆವಣಿಗೆ. ನಾಟಕಗಳನ್ನು ಪ್ರೋತ್ಸಾಹಿಸುವಂತಹ ಕೆಲಸವಾಗಬೇಕು ಎಂದು ಹೇಳಿದರು.

ಸಂಸ್ಕೃತಿಯ ಪ್ರತೀಕವಾಗಿರುವ ಪೌರಾಣಿಕ ನಾಟಕ ಕಲೆ ಇಂದು ಅಸ್ತಿತ್ವ ಕಳೆದುಕೊಳ್ಳುತ್ತಿದ್ದು ಈ ಕಲೆಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿದೆ ಎಂದು ತಿಳಿಸಿದರು.

ರಾತ್ರಿಯಿಂದ ಬೆಳಗಿನ ಜಾವದ ತನಕ ಮನೆ ಮಂದಿಯೆಲ್ಲಾ ಕುಳಿತು ನಾಟಕ ನೋಡುತ್ತಿದ್ದ ದಿನಗಳು ದೂರಾವಾಗಿದ್ದು, ನಾಟಕ ಪ್ರದರ್ಶನ ಮಾಡುವ ಸಂಬಂದಿಗಳು ಹಾಗೂ ಸ್ನೇಹಿತರು ಬೆರಳೆಣಿಕೆಯಷ್ಟು ಮಂದಿ ಮಾತ್ರ ನಾಟಕ ನೋಡುವಂತಹ ಸ್ಥಿತಿ ಬಂದಿದೆ. ಆದರೆ ಕಾಮನಹಳ್ಳಿ ಗ್ರಾಮದಲ್ಲಿ ಸಾವಿರಾರು ಮಂದಿ ಗ್ರಾಮಸ್ಥರು ನೋಡಲು ಆಗಮಿಸಿರುವುದು ಶ್ಲಾಘನೀಯವಾದುದು. ಕಷ್ಟಪಟ್ಟು ಕಲಿಯುವ ಕಲಾವಿದರಿಗೆ ನಾಟಕಗಳನ್ನು ನೋಡುವ ಮೂಲಕ ನಾಟಕ ಕಲೆಯನ್ನು ಉಳಿಸುವತ್ತ ಗಮನಹರಿಸಬೇಕು ಎಂದರು.

ಶಾಸಕರಾದ ಹೆಚ್ ಟಿ ಮಂಜು ಅವರ ಸಹೋದರ ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಟಿ.ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಸಂತೋಷದ ವಿಚಾರ. ನಶಿಸಿ ಹೋಗುತ್ತಿರುವ ರಂಗ ಕಲೆಯನ್ನು ಉಳಿಸಿ ಬೆಳೆಸಬೇಕಿದೆ. ಕಷ್ಟ ಪಟ್ಟು ಮೂರು ನಾಲ್ಕು ತಿಂಗಳಿನಿಂದ ಅಭ್ಯಾಸ ಕಲಾವಿದರು ಅಭ್ಯಾಸ ಮಾಡಿರುತ್ತಾರೆ.ಅವರವರ ಪಾತ್ರವನ್ನು ಬಂದು ನೋಡಿದ ತಕ್ಷಣ ಅವರ ಕುಟುಂಬದವರು ಮನೆಗೆ ಹೋಗುವ ಬದಲು ನಾಟಕವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿದಾಗ ಮಾತ್ರ ಸಾರ್ಥಕ ಎಂಬ ಭಾವನೆ ಮೂಡುತ್ತದೆ. ಜೊತೆಗೆ ಇಂತಹ ಕಾರ್ಯಗಳಿಗೆ ಸಾರ್ವಜನಿಕರು ಸಹಾಯಹಸ್ತ ನೀಡಬೇಕು.
ಪೌರಾಣಿಕ ನಾಟಕದಲ್ಲಿ ಬರುವ ಧನಾತ್ಮಕ ಪಾತ್ರಗಳು ನಿಜ ಜೀವನದಲ್ಲಿ ಅಳವಡಿಸಿಕೊಂಡಿರುವ ಸಂಗತಿಗಳು ಇಂದಿಗೂ ಕಂಡುಬರುತ್ತವೆ. ಟಿವಿಯಲ್ಲಿ ಪ್ರಸಾರವಾಗುವ ಧಾರವಾಹಿಗಳ ಪ್ರಭಾವಕ್ಕೆ ಸಿಲುಕಿದರೂ ಇಂದಿಗೂ ಎಂದಿಗೂ ತಮ್ಮ ಮೌಲ್ಯವನ್ನು ಕಳೆದುಕೊಂಡಿಲ್ಲ ಎಂಬುದಕ್ಕೆ ನಮ್ಮ ತಾಲ್ಲೂಕಿನಲ್ಲಿ ಅತಿ ಹೆಚ್ಚು ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಸಾಕ್ಷಿಯಾಗಿದೆ ಎಂದು ಟಿಎಪಿಸಿಎಂಎಸ್ ನಿರ್ದೇಶಕ ಹೆಚ್ ಟಿ ಲೋಕೇಶ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಹಾಗೂ ಉದ್ಯಮಿ ಗೋಲ್ಡ್ ವಾಸು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಚೌಡೇನಹಳ್ಳಿ ನಾಗರಾಜು, ನ್ಯಾಯಬೆಲೆ ಅಂಗಡಿ ಜವರೇಗೌಡ, ನಿವೃತ್ತ ಶಿಕ್ಷಕರು ಹಿರಿಯರಾದ ಕೃಷ್ಣೇಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್,ಎಲ್ ಐ ಸಿ ಸ್ವಾಮಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಅಶೋಕ್, ಸೇಟು ರಾಮಕೃಷ್ಣೇಗೌಡ, ಮರಿತಿಮ್ಮೇಗೌಡ,ಬಾಣೇಗೌ,ಸಿದ್ದರಾಜು,ಮರಿತಿಮ್ಮೇಗೌಡರ ಮಂಜುನಾಥ್,ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಹೆಚ್.ಆರ್. ಸೋಮಶೇಖರ್, ಅಪ್ಪು ಯುವ ಸಾಮ್ರಾಜ್ಯ ಟ್ರಸ್ಟ್ ಅಧ್ಯಕ್ಷ ಕೆ ಎಲ್ ಮಹೇಶ್, ಶಿಕ್ಷಕರಾದ ಗೋಪಾಲಕೃಷ್ಣ, ಮಹೇಶ್, ಜಯರಾಂ, ಅರುಣ್ ಕುಮಾರ್, ಲೈನ್ ಮ್ಯಾನ್ ಕಾಂತರಾಜು, ಅಣ್ಣಯ್ಯ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಂದ್ರೇಗೌಡ,ವಕೀಲರಾದ ಬೋರೇಗೌಡ, ಬಂಗಾರಿ ಮಂಜಣ್ಣ,ಛೇರ್ಮನ್ ಪ್ರಭಾಕರ್, ಮಂಜಣ್ಣ, ಸಣ್ಣಪ್ಪಯ್ಯ ರಾಮಕೃಷ್ಣೇಗೌಡ, ಅಂಗಡಿ ಸೋಮಣ್ಣ,ಯಶೋಧರ, ಕೆ ಟಿ ವರದರಾಜು,ಆಟೋ ಗಿರೀಶ್, ಕಾಂತಣ್ಣ,ಸರ್ವೆ ಆನಂದ್, ಪೂಜಾರಿ ಈರಾಜೇಗೌಡ,ದೇವೇಗೌಡ,ಗಂಗಾಧರ್, ಸುರೇಶ್, ಆರ್ ಐ ಗೋಪಾಲಕೃಷ್ಣ, ಕೆ ಟಿ ರಾಮಚಂದ್ರನಾಯಕ,ವಜ್ರೇಶ್,ಪ್ರಭು,ಜಗದೀಶ್ ಪತ್ರಕರ್ತರಾದ ಶ್ರೀನಿವಾಸ್,ರಘು, ರವಿ, ಕಾಮನಹಳ್ಳಿ ಗ್ರಾಮದ ಯಜಮಾನರು, ಮುಖಂಡರು, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ನಾಟಕ ವೀಕ್ಷಣೆ ಮಾಡಿದರು.
– ಶ್ರೀನಿವಾಸ ಆರ್.
