ಮನಸು ಮೃದಂಗ
(ಲೇಖನಗಳ ಸಂಕಲನ)
ಯಮ
ಸಾವಿಗೆ ಅಂಜುವ ನಾವು ಯಮನನ್ನು ನೆನೆದೊಡನೆ ಅರ್ಧ ಜೀವ ಹೋದಂತೆ ಹೌಹಾರುತ್ತೇವೆ. ಮಾನವನ ಆಸೆಗಳು ನಿರಂತರವಾದದು. ನಮಗೆ ಸಾವನ್ನೆ ಗೆಲ್ಲುವ ಚಪಲ ಹಾಗು ಬದುಕಿದ್ದಾಗ ಸರ್ವಸ್ವವನ್ನು ಬಯಸುವ ಆತುರ. ಈ ಕಾರಣದಿಂದ ಮಾನವನ ಅಂತರಾಳದಲ್ಲಿ ಸಾವಿನ ಬಗ್ಗೆ ಭಯ ನಿರ್ಮಾಣವಾಗುವುದು ಸಹಜ.
ಪ್ರಾಯಶಃ ಅನೇಕರಿಗೆ “ಯಮ” ಯಾರೆಂಬುದು ಅರಿವಿರುವುದಿಲ್ಲ. ತಿಳಿದವರಿಗೆ ಇವನು ಸ್ನೇಹಿತ ಮತ್ತು ಪರಮಾತ್ಮರಲ್ಲೆ ಉತ್ತಮ ಪುರುಷ. ದಿನ ನಿತ್ಯವು ನಮಗೆ ಅರಿವಿಲ್ಲದೆ ಸಾವನ್ನು ಕಾಣುತ್ತಿರುತ್ತೇವೆ. ಈ ಸಾವು ಜೀವದಾತನ ಕೊಡುಗೆ. ಆ “ಕ್ಷಣ” ಸಾವು ಯಾವುದೆಂದರೆ ಸುಖ ನಿದ್ರೆ. ನಿದ್ರೆ ಇಲ್ಲದವನ ಪಾಡು ನರಕ ಸದೃಶ.
ಮಾನಸಿಕ ವ್ಯಾದಿಗಳಲ್ಲಿ ನಿದ್ರೆ ಇಲ್ಲದೆ ಇರುವದು ಮೊದಲನೆ ಲಕ್ಷಣ. ಈ ಲಕ್ಷಣವು ಗೀಳಾಗಿ ಸಹ ಕಾಡಬಹುದು. ಮನೋ ವ್ಯಾದಿವುಳ್ಳವನು “ಡಾಕ್ಟ್ರೇ ತಿಂಗಳಿನಿಂದ ನಿದ್ರೆಯೇ ಬರುತ್ತಿಲ್ಲ, ಕಾರಣ ತಿಳಿಯದು, ನನಗೆ ಸಾಯುತ್ತೇನೆಂದು ಪದೇ ಪದೇ ಯೋಚನೆ ಕಾಡುತ್ತಿರುತ್ತೆ” ಅನ್ನುತ್ತಾನೆ ಇವನಿಗೆ ನಿದ್ರೆ ಬರಿಸಿದೂಡನೆ ಜಿಂಕೆ ಮರಿಯಾಗಿಬಿಡುವನು. ನಿದ್ರೆ ಬರದೆ ಇರುವವನಿಗೆ ನಿದ್ರೆ ಬರಿಸಿದರೆ ವೈದ್ಯನು ಸಾಕ್ಷಾತ್ ನಾರಾಯಣ. ಇಲ್ಲೆ ಇರುವುದು ದ್ವಂದ್ವ ನೀತಿ ಅಥವಾ ವೈರುತ್ವದ ತತ್ವ. ಅಂದರೆ ಮಾನವನು ಹೊರಗೆ ಸಾವಿಗೆ ಅಂಜಿದರೂ ಒಳಗೆ ಅವನಿಗೆ ಅರಿವಿಲ್ಲದೆ ಸಾವನ್ನು ಸ್ವಾಗತಿಸುತ್ತಿರುತ್ತಾನೆ. ಅಂದರೆ ಪ್ರತಿಯೊಬ್ಬನು “ಯಮ” ನ ಮಿತ್ರ ಎಂದತ್ತಾಯ್ತು.
ಯಾವಗಲು ಮನುಷ್ಯನು ಯಮ ಮಹರಾಜನನ್ನು ದುಷ್ಠ, ಕಠೋರಿ, ನಿಷ್ಕರುಣಿಯ ರೂಪದಲ್ಲೆ ನೊಡುತ್ತಾನೆ. ಯಮನ ಬಗ್ಗೆ ಇಲ್ಲದ ಕಥೆಗಳನ್ನು ಕಟ್ಟಿ ಮಕ್ಕಳಲ್ಲಿ ಅವನ ಬಗ್ಗೆ ಭಯ ಹುಟ್ಟು ಹಾಕುತ್ತಾನೆ. ಈ ಬಗ್ಗೆ ನಾನು ಒಮ್ಮೆ ಯೋಚನೆ ಮಾಡುತ್ತಿದ್ದಾಗ ಸತ್ಯವನ್ನೆ ಅರಿಯದ ಮುಗ್ದರ ಬಗ್ಗೆ ಅನುಕಂಪ ಮೂಡಿತ್ತಾದರೂ ನನ್ನ ಮತ್ತು ಈ ಯಮನ ಸಂಭಂದ್ದವೇ ಬೇರೆ.
ನನ್ನ ಈ ಸಂಬಂದ್ದವನ್ನು ವೈಜ್ಞಾನಿಕ ರೀತಿಯಲ್ಲಿ ಹೇಳಬೇಕಾದರೆ ಓದುಗರು ಗಮನವಿಟ್ಟು ನನ್ನ ಸಿದ್ದಾಂತವನ್ನು ಓದಬೇಕಾಗಬಹುದು. ಸರಿ ಅಥವ ತಪ್ಪು ನಿಮ್ಮ ವಿಮರ್ಶೆಗೆ ಬಿಟ್ಟಿದ್ದು. ನನಗೆ ಸ್ವರ್ಗದ ಬಗ್ಗೆ ನಂಬಿಕೆ ಇಲ್ಲ. ಇದಕ್ಕೆ ಕಾರಣ, ಸ್ವರ್ಗದ ಪರಿಕಲ್ಪನೆ ಮಾಯೆಗೆ ಸಂಬಂಧ ಪಟ್ಟಿದ್ದು. ಆದುದರಿಂದ ಈ ವಾಸ್ತವಿಕ ಪ್ರಪಂಚವೇ ಸ್ವರ್ಗ.
ಮಾನವನು ಯಾವಾಗಲು ನರಕವನ್ನು ನಕಾರಾತ್ಮಕವಾಗಿಯೇ ನೋಡುತ್ತಾನೆ. ನರಕವೆನ್ನುವ ಕಾಲ್ಪನಿಕ ಲೋಕದ ಪರಿಕಲ್ಪನೆಯೇ ಇಲ್ಲದೆ ಇರುವಿದರಿಂದ ನರಕ ಮತ್ತು ಯಮನೆಂದರೆ ಇಲ್ಲದ ಭಯ ನಮ್ಮಲ್ಲಿ ಆವರಿಸಿ ಬಿಟ್ಟಿರುತ್ತೆ. ನನಗೆ ಯಮನೆಂದರೆ ಅಥೀವ ಭಕ್ತಿ.
ನರಕಲೋಕ ಕಾಲ್ಪನಿಕವೆನ್ನುವುದು ಸತ್ಯವಾದರೂ ಆ ಲೋಕದ ಪ್ರಪ್ರಥಮ ವ್ಯಕ್ತಿ ಯಾರು? ಈ ನರಕವು ಮಾನವನಿಗೆ ಮಾತ್ರ ಮೀಸಲೆ? ಕೋಟಿ ಕೋಟಿ ಜೀವವಿರುವ ಪ್ರಾಣಿಗಳಿಗೆ ನರಕಲೋಕವಿಲ್ಲವೆ? ಇಂತಹ ನೂರಾರು ಪ್ರಶ್ನೆಗಳು ಪ್ರಜ್ಞಾವಂತನಿಗೆ ಬರುವದು ಸಹಜ. ಪ್ರಶ್ನೆಗಳು ನೂರಾದರೆ ಉತ್ತರಗಳು ಸಾವಿರ. ಆದರೆ ಸಿದ್ದಾಂತಗಳು ತೀರ ವಿರಳ. ಹೀಗಿರುವಾಗ ನನ್ನ ಈ ವೈಜ್ಞಾನಿಕ ಸಿದ್ದಾಂತವು ಈ ಕೆಳಗಿನಂತಿದೆ.
ಮನುಷ್ಯನ ಸೃಷ್ಠಿ ಅನೇಕ ಸಾವಿರ ವರ್ಷಗಳ ಹಿಂದೆ ಪಂಚಭೂತಗಳ ಘರ್ಷಣೆಯಿಂದ ಸೃಷ್ಠಿಗೊಂಡಿತು ಎಂಬುದು ವಿಜ್ಞಾನ ವಿಚಾರದಲ್ಲು ಒಂದು. ಸೃಷ್ಠಿಗೊಂಡ ಪ್ರಪ್ರಥಮ ವ್ಯಕ್ತಿ ಮಾಯೆಯಿಂದ ವಂಚಿತನಾಗಿ ನಿರ್ಮಲ ಮತ್ತು ನಿರಂಕುಷ ಮನುಷ್ಯನಾಗಿದ್ದನು ಎನ್ನುವುದನ್ನ ಊಹಿಸೋಣ.

ಕೋಮಲ ಹೃದಯವಂತನು ಆದ ಇವನೂ ಸಹ ಸಾವಿಗೆ ಶರಣಾಗಲೇ ಬೇಕು. ಅವನಲ್ಲಿ ಕಲ್ಮಶಗಳೇ ಇಲ್ಲದೆ ಇರುವುದರಿಂದ ಆತನು ದೇವ ಮಾನವನಾಗಿರಲೇ ಬೇಕೆನ್ನುವುದು ನನ್ನ ವಾದ. ಸ್ವರ್ಗವೇ ಭೂಮಿಯಾದ್ದರಿಂದ ಸ್ವರ್ಗವೆಂಬ ಕಾಲ್ಪಿನಿಕ ಲೋಕವಿಲ್ಲ, ಪ್ರಸ್ತುತದಲ್ಲಿ ಭೂಮಿಯೆ ಸ್ವರ್ಗ.
ಹಿಂದೆ ಹೇಳಿದ ಹಾಗೆ ಭೂಮಿಗೆ ಬಂದ ಪ್ರಪ್ರಥಮ ವ್ಯಕ್ತಿ ತನ್ನ ಮಾನವ ಕುಲವನ್ನು ಉದ್ದಾರ ಮಾಡಬೇಕೆಂಬ ಮನೋ ಭಾವೆನೆಯ ಒಂದೇ ಒಂದು ತಪ್ಪಿನಿಂದ ಪ್ರೇಮವಲ್ಲದ ಕಾಮಕೇಳಿಗೆ ಮನ ಸೋತು ಕ್ಷಣ ಕಾಲ ತಪ್ಪು ಎಸಗಿದ್ದರಿಂದ ತಾನು ಕಾಲವಾದ ನಂತರ ಸ್ವರ್ಗ ಭೂಮಿಯನ್ನು ತೊರೆದು ಬಹು ದೂರದಲ್ಲಿ ಕಾಣಿಸಿಕೊಳ್ಳುವ ಕಾಲ್ಪನಿಕ ನರಕ ಲೋಕವನ್ನ ಸೇರಿದನೆಂದುಕೊಳ್ಳೋಣ. ಈ ಒಂದೆ ಒಂದು ತಪ್ಪಿಗೋಸ್ಕರ ಆ ಕತ್ತಲಿನ ದೇಶದ ಓಡೆಯನಾದನೆಂದು ಅಂದುಕೊಳ್ಳೊಣ.
ಆ ಕಾಲ್ಪನಿಕ ದೇಶದ ಮೊದಲನೇ ಮನುಷ್ಯನಾದ್ದರಿಂದ ನರಕಲೋಕದ ಮಹರಾಜನಾದ. ಈ ಊಹೆ ನನ್ನದಷ್ಠೆ. ಅಲ್ಲಿಂದ ಇಲ್ಲಿಯವರಿಗೊ ಸ್ವರ್ಗದಂತೆ ಇರುವ ಭೂಮಿಯ ಮಾಯೆಗೆ ಷಡ್ ಐಶ್ರ್ಯಗಳಿಂದ ಮತ್ತು ಪಂಚೇಂದ್ರಿಯ ಕಾಮೆನಗಳಿಗೆ ಒಳಪಟ್ಟು ಸತ್ತ ನಂತರ ಸತತವಾಗಿ ನರಕವನ್ನು ದಾಳಿ ಮಾಡುವ ಈ ಮಾನವರು ಆ ದೇಶದ ಅರಾಜಕತೆಗೆ ಕಾರಣಕರ್ತರಾದರು. ಇದನ್ನು ಯಮ ಮಹರಾಜನು ಸಹಿಸದೆ ತಪ್ಪು ಮಾಡಿದ್ದ ಮಾನವರನ್ನು ಸದೆ ಬಡಿದು ಶಾಂತಿ ಹಾಗು ಧರ್ಮವನ್ನು ಎತ್ತಿ ಹಿಡಿದಿದ್ದರಿಂದ ಯಮ ಧರ್ಮರಾಜನಾದನು. ಅವನ ಆಸ್ಥಾನದ ಬಂದಿಖಾನೆಯಲ್ಲಿ ಭಂದಿಸಲ್ಪಟ್ಟ ಮಾನವರನ್ನ ಯಮಕಿಂಖರರು ಆಯುಧಗಳಿಂದ ಹಿಂಸಿಸಿ ಪರಿವರ್ತಿಸುವ ರೀತಿ ಊಹಿಸಲು ಅಸಾದ್ಯ. ಈ ಕಾರಣದಿಂದಲೆ ಪ್ರಾಯಷಃ ಯಮ ಲೋಕ ಸುಂದರ, ನಿಶ್ಯಬ್ದ ಹಾಗು ತಿಳಿ.
ಇಂತಹ ಅದ್ಬುತವಾದ ಲೋಕಕ್ಕೆ ದಿನಂಪ್ರತಿ ಅಮಾಯಕರು ಅಥವ ಮುಗ್ದರು ಅವರ ತಪ್ಪಿಲ್ಲದೆ ಪ್ರಯಾಣಿಸಿತ್ತಿರುತ್ತಾರೆ. ಹಿಂದೆಯಷ್ಠೇ “ನಿರ್ಭಯ” ಮತ್ತು ನಿರ್ಭಯದಂತವರು
ಯಮನ ಪಾದ ಸೆರಿದರೆನ್ನುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆಗ ನನ್ನ ಅನಿಸಿಕೆ “ನಿರ್ಭಯ ಈ ಪಾಪಿ ಸ್ವರ್ಗ(ಭೂಮಿ)ದಿಂದ ಅತಿ ಸುಂದರವಾದ ನರಕ ಲೋಕಕ್ಕೆ ಪ್ರಯಾಣಿಸಿದಳು” ಎಂಬುದಾಗಿತ್ತು. ನನ್ನ ಪ್ರಕಾರ ಏನೂ ತಪ್ಪಿಲ್ಲದ ಇಂತಹ ಅಮಯಾಕರನ್ನು ಯಮನು ಸ್ವಾಗಿಸುತ್ತಾನೆಯೇ ಹೊರೆತು ಹಿಂಸಿಸುವುದಿಲ್ಲ. ಯಮನು ಮುಗ್ದರನ್ನು ಆಹ್ವಾನಿಸಿ ತನ್ನ ಅಥಿತಿಯಂತೆ ಸತ್ಕರಿಸುವನು. ಆದರೆ ಯಮನು ಪಾಪದ ಕೂಪಕ್ಕೆ ದುಡಿದವರನ್ನು ಸುಮ್ಮನೇ ಬಿಡುತ್ತಾನೆಯೇ?
ಈ ಭೂಮಿಯಲ್ಲಿ ತಪ್ಪು ಮಾಡಿದವನಿಗೆ ಯಮ ಲೋಕದಲ್ಲಿ ಯಮನಿಂದ ಕ್ರೂರ ಹಿಂಸೆ ಶತ ಸಿದ್ದ. ತಪ್ಪು ಮಾಡದೆ ಹೋಗುವವನಿಗೆ ಅವನಿಂದ ಸ್ವಾಗತ. ತಪ್ಪು ಮಾಡಿ ತಪ್ಪು ಮಾಡೆದೆ ಇರುವರನ್ನು ಅವನಲ್ಲಿಗೆ, ಕಳಿಸಿದವರನ್ನ ಈ ಭೂಮಿಯಲ್ಲೆ ಚಿತ್ರ ಹಿಂಸೆ ನೀಡಬಲ್ಲನು. ಈ ಹಿಂಸೆಯು ಮಾನವನ ಶರೀರಕಲ್ಲದೆ ಅವನ ಮನಸ್ಸಿಗೆ ನೇರವಾಗಿ ನೀಡಬಲ್ಲನು.
ಅದು ಯಾವುದೆಂದರೆ “ಕೊರಗು”. ಇದನ್ನು ಬುದ್ದಿಕೆಟ್ಟ ಮಾನವನು ತಿಳಿಯ ಬೇಕು. ಅ ಕೊರುಗು “ಛೆ ನನ್ನಿಂದ ಈ ನೀಚ ಕೆಲಸ ಆಗಬಾರದಾಗಿತ್ತು” ಎಂದು, ಅವನು ಇರುವಷ್ಠು ದಿವಸವು ಗೀಳಾಗಿ ಅವನ ಅರಿವಿಲ್ಲದೆ ಬರುವ “ಗಾಬರಿ” ಯಿಂದ ನಿಧಾನವಾಗಿ ಇವನು ಸಾಯುತ್ತಾ ಜೀವನವನ್ನು ಕಳೆಯುತ್ತಾನೆ. ಇಲ್ಲಿ ನನಗೆ ಕಂಡಂತ ಅನುಭವಗಳನ್ನು ಹೇಳಲೆಬೇಕು. ಅಂದರೆ ನಮ್ಮ ಜೀವನದಲ್ಲಿ ಅಂತಹ ಅನೇಕ ಘಟನೆಗಳಿಂದ ಭೂಮಿಯ ಮೇಲೆ ಇದ್ದು ಮಾನಸಿಕ ಹಿಂಸೆಗೆ ಒಳಪಡಿಸುವವರನ್ನ ನೋಡುತ್ತಿರುತ್ತೇವೆ. ಅವರುಗಳು ಯಾರೆಂದರೆ-
1. ಹೊಂಚು ಹಾಕಿ ಅಮಾಯಕರನ್ನು ಕ್ಷುಲ್ಲಕ ಬಿಡಿಗಾಸಿನ ಆಸೆಯಿಂದ ಹಿಂಸಿಸಿ ಹತ್ಯೆಯನ್ನು ಮಾಡುವಂತವರು.
2. ಮುಗ್ದೆಯಾದ ಬಾಲಿಕಿಯನ್ನು ಯಾಮಾರಿಸಿ ಬಲತ್ಕರಿಸಿ ಸಾಯಿಸುವ ಗಂಡು ರಣಹದ್ದುಗಳು.
3. ಧರ್ಮದ ಹೆಸರಿನಲ್ಲಿ ಭಯೋತ್ಪಾಧನೆಯಿಂದ ಏನೂ ಅರಿವಿಲ್ಲದ ಜನರ ರುಂಡವನ್ನು ಕತ್ತ ರಿಸುವಂತವರು.
4. ಕಾನೂನನ್ನು ತಮ್ಮ ತೋಳಿನೊಳಗೆ ಬಳಿಸಿ ಮುಗ್ದರನ್ನ ಕೊಲ್ಲುವ ಪ್ರವೃತ್ತಿಉಳ್ಳವರು.
5. ಹೆದ್ದಾರಿ ರಸ್ತೆಗಳ ನಿಯಮ ಮತ್ತು ಸುವ್ಯವಸ್ಥೆಯನ್ನು ಗಾಳಿಗೆ ತೂರಿ ವಾಹನ ಸವಾರರನ್ನು ನರಕಕ್ಕೆ, ಸ್ಥಳಾಂತರಿಸುವ ವಾಹನ ಚಾಲಕರು, ಅವರಲ್ಲಿ ಅಡ್ಡಾದಿಡ್ಡಿ ಲೈಸನ್ಸ್ ಇಲ್ಲದೆ ಓಡಿಸುವ ಟ್ರಾಕ್ಟರ್ ಚಾಲಕರು, ಎತ್ತಿನ ಗಾಡಿ ಹಿಂಬಾಗದಲ್ಲಿ ಪ್ರತಿ ಫಲಿಸುವ ಕೆಂಪು ಬಿಲ್ಲೆ ಅಥವ ಬಣ್ಣ ಇಲ್ಲದೆ ಹೆದ್ದಾರಿಗೆ ತರುವದು, ಹೆದ್ದಾರಿಗಳಲ್ಲಿ ಎಚ್ಚರಿಕೆ ಫಲಕಗಿಳಿಲ್ಲದೆ ಉಬ್ಬುಗಳನ್ನು ನರ್ಮಿಸುವುದು, ಹೆದ್ದಾರಿಯ ಡಿವೈಡರ್ ನಲ್ಲಿ ಜನರು ತಮ್ಮ ಇಚ್ಚೆಯಂತೆ ಹೊಡೆದು ವಾಹನ ಸವಾರರನ್ನು ಆಹ್ವಾನಿಸಿ ನರಕಕ್ಕೆ ಕಳಿಸುವಂತವರು, ಹೈವೇ ಪಕ್ಕದಲ್ಲಿ ರಿಪೇರಿಗೆಂದು ವಾಹನಗಳನ್ನು ನಿಲ್ಲಿಸಿ ರಿಪೇರಿ ಆದ ನಂತರ ಅಲ್ಲೆ ಕಲ್ಲುಗಳನ್ನು ಬಿಟ್ಟು ಹೋಗುವವರು, ವಾಹನವನ್ನ ಅಜಾರುಕತೆಯಿಂದ ಓಡಿಸಿ ಅಮಾಯಕರನ್ನು ಬಲಿ ತೆಗೆದುಕೊಳ್ಳುವುದು, ಅಂದರೆ ವಾಹನವನ್ನು ಓಡಿಸುವಾಗ ಮೊಬೈಲ್ನಲ್ಲಿ ಮಾತನಾಡುವುದು.
ಹೀಗೆ ಅನೇಕ ಕಾರಣಗಳಿಂದ ಅಮಾಯಕರ ಸಾವಿಗೆ ಕಾರಣಕರ್ತರಾದ ಮಾನವರನ್ನ ಯಮ ಲೋಕಕ್ಕೆ ಕರೆಸಿಕೊಳ್ಳದೆ ಯಮ ಧರ್ಮರಾಜನು ಭೂಮಿಯ ಮೇಲೆಯೆ ಅಂತವರಿಗೆ ಮಾನಸಿಕ ನರಕ ಯಾತನೆಯನ್ನು ನೀಡುವನು. ಇದರಿಂದಲೆ ನಾನು ಇಂತಹವರನ್ನು “ಬದಿಕಿದ್ದು ಸತ್ತಂತೆ” ಎನ್ನುವುದು.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

