1. ಷೆಲ್ಲಿ ಹೇಳಿದ
ಕವಿಗಳು ಈ ಜಗತ್ತಿನ
ಅನಧಿಕೃತ ಶಾಸಕರು
ಆದರೆ ಏಕೋ ನಮ್ಮ ಶಾಸಕರು
ಇದನ್ನು ಒಪ್ಪುವುದಿಲ್ಲ
ನಾವೆಷ್ಟೇ ಮೇಯ್ದರೂ
ನಾವೇ ಅಧಿಕೃತ ಶಾಸಕರು
ಕವಿಗಳಿಗೆ ಪಟ್ಟ ಬಿಡುವುದಿಲ್ಲ
2. ಕವಿಗಳು ಶ್ರೀಮಂತರು
ಹಾಗೆಂದು ಲೋಕಾಯುಕ್ತರು
ದಾಳಿ ಮಾಡಿದರೆ ಸಿಗಬಹುದು
ಶಾಲು ಕೃತಿಗಳು ನಿಘಂಟು
ಸಿಗಲಾರದು ಗಂಟು
ಏಕೆಂದರೆ ಇವರು ಬರೇ
ಭಾವನೆಗಳ ಹ್ಮದಯ ಶ್ರೀಮಂತರು
3. ಅವರು ಬಂಡಾಯ ಕವಿಗಳು
ಯಾರಿಗೂ ತಲೆಬಾಗುವುದಿಲ್ಲ
ಎನ್ನುತ್ತಿದ್ದರು
ಕಡೆಗೂ ಬಾಗಿದರು
ಹೊದಿಸಿದ ಸನ್ಮಾನ ಶಾಲಿಗೆ
4. ನನ್ನ ಕವನಗಳು
ಹೊದಿಸಿವೆ ಶಾಲು
ಗಳಿಸಿವೆ ಪ್ರಶಸ್ತಿ ಹಾರ ಫಲಕಗಳು
ಜೊತೆಗೆ ಹೊರಿಸಿವೆ
ಒಂದಿಷ್ಟು ಸಾಲ ಅಡಮಾನಗಳು.
—

ಗೊರೂರು ಅನಂತರಾಜು,
ಹಾಸನ
ಮೊ: 9449462879
ವಿಳಾಸ : ಹುಣಸಿನಕೆರೆ ಬಡಾವಣೆ,
29ನೇ ವಾಡ್೯, 3ನೇ ಕ್ರಾಸ್,
ಹಾಸನ – 573201
