ಇತ್ತೀಚೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ವಾಟ್ಸಾಪ್ಗಳಲ್ಲಿ 1980ರ ದಶಕದ ಶೈಲಿಯ ಫೋಟೋಗಳು ವೈರಲ್ ಆಗುತ್ತಿವೆ. ಜನರು ತಮ್ಮ ಪ್ರಸ್ತುತ ಫೋಟೋಗಳನ್ನು 80ರ ದಶಕದ ಬಾಲಿವುಡ್ ಅಥವಾ ಹಾಲಿವುಡ್ ಶೈಲಿಯ, ಕ್ಲಾಸಿಕ್ ಹೇರ್ಸ್ಟೈಲ್, ವರ್ಣರಂಜಿತ ಬಟ್ಟೆಗಳು, ಮತ್ತು ಹಳೆಯ ಕಾಲದ ಯರ್ಬುಕ್ (Yearbook) ಅಥವಾ ಸಿನಿಮಾ ಪೋಸ್ಟರ್ ಶೈಲಿಗೆ ಬದಲಾಯಿಸಿಕೊಂಡು ಪೋಸ್ಟ್ ಮಾಡುತ್ತಿದ್ದಾರೆ.
ಈ ವೈರಲ್ ಟ್ರೆಂಡ್ ಎಂದರೇನು ಮತ್ತು ನಿಮ್ಮ ಫೋಟೋವನ್ನು ಸಹ 80ರ ದಶಕದ ವೈಬ್ಗೆ ಹೇಗೆ ಬದಲಾಯಿಸಿಕೊಳ್ಳುವುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು 80’s ಟ್ರೆಂಡ್ ಫೋಟೋ?
ಇದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ರಚಿಸಲಾಗುವ ಫೋಟೋ ಆಗಿದೆ. 1980ರ ದಶಕದಲ್ಲಿ ಜನಪ್ರಿಯವಾಗಿದ್ದ:
ಪಫ್ ಮತ್ತು ಕರ್ಲ್ಡ್ ಹೇರ್ಸ್ಟೈಲ್ಗಳು
ಬ್ರೈಟ್ ಡೆನಿಮ್ ಜಾಕೆಟ್ಗಳು, ಕಲರ್ಫುಲ್ ಸ್ವೆಟರ್ಗಳು ಮತ್ತು ಚರ್ಮದ ಜಾಕೆಟ್ಗಳು
ಸಾಫ್ಟ್ ರೆಟ್ರೋ ಫಿಲ್ಟರ್ಗಳು
ಹಳೆಯ ಶಾಲಾ ಯರ್ಬುಕ್ ಅಥವಾ ಸಿನಿಮಾ ಪೋಸ್ಟರ್ ಹಿನ್ನೆಲೆಗಳನ್ನು ಈ ಎಐ ತಂತ್ರಜ್ಞಾನವು ನಿಮ್ಮ ಮುಖಕ್ಕೆ ಕಷ್ಟವಿಲ್ಲದೆ ಹೊಂದಿಸುತ್ತದೆ.
80’s AI ಫೋಟೋ ಮಾಡುವುದು ಹೇಗೆ?
ಈ ರೀತಿಯ ಫೋಟೋಗಳನ್ನು ಮಾಡಲು EPIK, Remini, Photoleap, ಅಥವಾ ChatGPT / Midjourney ನಂತಹ ಎಐ ಆಯಪ್ಗಳನ್ನು ಬಳಸಬಹುದು.
EPIK ಅಥವಾ Remini ಆಯಪ್ ಡೌನ್ಲೋಡ್ ಮಾಡಿ:
ನಿಮ್ಮ ಮೊಬೈಲ್ನ ಪ್ಲೇ ಸ್ಟೋರ್ (Play Store) ಅಥವಾ ಆಯಪ್ ಸ್ಟೋರ್ನಿಂದ EPIK ಅಥವಾ Remini ಆಯಪ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಿ.
AI Yearbook / 80s Retro ಆಯ್ಕೆಮಾಡಿ:
ಆಯಪ್ ಓಪನ್ ಮಾಡಿದ ತಕ್ಷಣ ಹೋಮ್ ಸ್ಕ್ರೀನ್ನಲ್ಲಿ ‘AI Yearbook’ ಅಥವಾ ’80s Retro Vintage’ ಎಂಬ ಆಪ್ಷನ್ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿ:
