ಹಾಸನ, ಸೆ.29: ಹಾಸನ ಜಿಲ್ಲಾ ಜೆಡಿಎಸ್ ನೂತನ ಅಧ್ಯಕ್ಷರಾಗಿ ನಟರಾಜ್ ಐಸಾಮೀಗೌಡ ಅವರನ್ನು ನೇಮಕ ಮಾಡಿರುವುದಕ್ಕೆ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.
ವೀರಶೈವ ಲಿಂಗಾಯತ ಸಮಾಜದ ಮುಖಂಡರಾಗಿರುವ ನಟರಾಜ್ ಐಸಾಮೀಗೌಡ ಅವರು ಹಾಸನ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಸೆ.28ರಂದು ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ವಿ. ಹೇಮಂತ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಭಾರಿ ಅಧ್ಯಕ್ಷ ಪುನೀತ್ ಪಟೇಲ್, ನಿರ್ದೇಶಕರಾದ ಶೋಬನ್ ಬಾಬು, ಮದನ್, ಮಯೂರಿ ಲೋಕೇಶ್, ರಾಜಶೇಖರ್ ಮೂರ್ತಿ, ಉಪಾಧ್ಯಕ್ಷರಾದ ಹೆಚ್.ಬಿ. ಮಧು, ಕುಮಾರ್ ದೊಡ್ಡಗದ್ದವಳ್ಳಿ, ಪ್ರಸಾದ್ ಮೂಳೆನಳ್ಳಿ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ನಟರಾಜ್ ಐಸಾಮೀಗೌಡ ಅವರ ನೇಮಕಕ್ಕೆ ಸಮಾಜದ ಮುಖಂಡರು ಶುಭ ಹಾರೈಸಿ, ಪಕ್ಷದ ಸಂಘಟನೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ಯಶಸ್ಸು ದೊರೆಯಲಿ ಎಂದು ಅಭಿನಂದಿಸಿದರು.
– ಶಿವಕುಮಾರ್ ಕಟ್ಟಾಯ
