Stephen hawking ರಂತಯೇAbdul kalam ರು ಸಹ ‘ನಾವುಗಳೆಲ್ಲ ಪ್ರಕೃತಿಯ ಕುಡಿಗಳಾದರೂ ನಮ್ಮ ಈ ಪ್ರಕೃತಿಗೆ ನಮ್ಮ ಕೊಡುಗೆಯಾದರು ಏನು?’ ಎಂದಿದ್ದರು. ದಿನ ನಿತ್ಯ ಹೊಗೆ ಉಗುಳಿ ನಮ್ಮ ಪರಿಸರದ ತಾಪಮಾನವನ್ನು ಹೆಚ್ಚಿಸುತ್ತಿದ್ದೇವೆ. ಇದರಿಂದ ಅಂಟಾರ್ಟಿಕಾದ ಮಂಜುಗೆಡ್ಡೆಗಳು ಕರಗುತ್ತಿವೆ. ಭೂಮಿ ತಾಯಿ ತನ್ನ ಹೃದಯದಲ್ಲಿ ಬಚ್ಚಿಟ್ಟ ನೀರನ್ನು ಹೀರಿ ಬರಿದು ಮಾಡುತ್ತಿದ್ದೇವೆ. ಇರುವ ಖನಿಜ ಸಂಪತ್ತನ್ನು ಕೊಳ್ಳೆ ಹೊಡೆದು ಅವಳ ಉಬ್ಬು ತಗ್ಗುಗಳನ್ನು ಟೆನ್ನಿಸ್ ಮೈದಾನದಂತೆ ಪರಿವರ್ಥಿಸಿದ್ದೇವೆ. ತಾಯಿಯ ಅಂದವಾದ ಹಸಿರು ವಸ್ತçವನ್ನು ನಮ್ಮ ಸ್ವಾರ್ಥಕ್ಕಾಗಿ ವಿವಿಸ್ತçಗೊಳಿಸಿ ಪ್ಲಾಸ್ಟಿಕ್ ಹೊದಿಕೆಯನ್ನು ಹೊದಿಸಿದ್ದೇವೆ. ಇಷ್ಠೆಲ್ಲಾ ಆಕೆಗೆ ತೊಂದರೆ ಕೊಟ್ಟರೂ ಅವಳು ನಮ್ಮನ್ನು ಮಕ್ಕಳಂತೆಯೆ ನೋಡಿ ಕೊಳ್ಳುತ್ತಿದ್ದಾಳೆ. ಇವುಗಳನ್ನು ತಿಳಿಯದ ನಾವು ಅಕ್ಷರಸಹ ಪಾಪಿಗಳಲ್ಲವೆ…….?
ಮೊದಲೆ ಹೇಳಿದಂತೆ ಬ್ರಹ್ಮನ ಹುಟ್ಟು ತಿಳಿದಿಲ್ಲ, ಆದರೆ ನನ್ನ ಅಲ್ಪ ಬುದ್ದಿಗೆ ನಮ್ಮ ಈ ಅಗೋ ಬ್ರಹ್ಮನ ಹುಟ್ಟು ಕೆಲವು ಬಿಲಿಯನ್ ವರ್ಷಗಳ ಹಿಂದೆ ನೆಡದಂತಾ ಅಖಂಡ ಅಸ್ವೀಕಾರ್ಥಕ ((negatively charged) ) ಮೋಡಗಳ ಶಕ್ತಿಕೃತ ಕಣಗಳ ಹಾಗು ಅಖಂಡ ಮೂಲಕಾರ್ಥಕ (positively charged) ಮೋಡಗಳ ಶಕ್ತಿಕೃತ ಕಣಗಳ ಘರ್ಷಣೆ ಹಾಗು ಅದರಿಂದ ಉಂಟಾದ ಬೃಹತ್ ಉಷ್ಣಾಂಶದಿಂದ ಈ ಭೂಮಿ ಮತ್ತು ಜೀವಿಗಳು ಉಗಮಿಸಿತು ಎಂಬುದು ವೈಜ್ಞಾನಿಕ ವಿಷ್ಲೇಶಣೆ. ಇಂದು ‘ದೇವರ ಕಣ’ ಪ್ರಯೋಗಾಲಯದಲ್ಲಿ ಕಾಣದೆ ಇರುವುದರಿಂದ ಮತ್ತು ನನಗೆ ಉಪನಿಷತ್ತನಲ್ಲಿ ಆಸಕ್ತಿ ಇರುವದರಿಂದ ಈಶಾವಾಸ್ಯ ಉಪನಿಷತ್ತನ ಒಂದು ಸೂತ್ರ ಆಶ್ಚರ್ಯವಾಗಿ ಕಂಡಿತು.
“ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮದಾತ್ ಪೂರ್ಣಂ ಎವಾ ವಶಿಷ್ಯತೇ” ಎಂದು.
ಇದರ ಅರ್ಥ
‘ನೀನೆ ಎಲ್ಲಾ. ಇವೆಲ್ಲಾ ನೀನೆ. ಜಗಿತ್ತಿನ ಹುಟ್ಟು ಅಲ್ಲಿಂದಲೆ. ಹೋಗುತ್ತಿರುವದು ಅಲ್ಲಿಗೆ. ಉಳಿಯೋದು ಒಂದೆ. ಅದು ಅದೆ.’
ವೇದ ಪುರಾಣ ಹಾಗು ಎಲ್ಲಾ ಧರ್ಮ ಗ್ರಂಥಗಳಲ್ಲು ಹಿಂದೆ ನಡೆದಿರುವ ಕ್ರಿಯೆಗಳನ್ನು ಭಗವಂತನ ಲೀಲೆ ಎಂದಿದ್ದಾರೆ. ಆದರೆ ನನ್ನ ಭಗವಂತನ ಲೀಲೆಯೇ ಬೇರೆ……
GOD (Generator Operator Destroyer) ಅಂದರೆ ಭಗವಂತನೆಂಬುದು ತಿಳಿದಿರುವ ವಿಷಯ,
ನನ್ನ ಪ್ರಕಾರ ಈ ಪದವನ್ನು ಮತ್ತೊಮ್ಮೆ ಬಿಡಿಸಿ ನೋಡಿದಾಗ
G – Geological ( ಭೂ ರಚನೆಯಿಂದ )
O – Organised ( ಕ್ರಮ ಬಧ್ಧವಾಗಿ )
D – Developed ( ಹೊರ ಹೊಮ್ಮಿದ ) ಎಂದಾಗುತ್ತದೆ.
ಅಂದರೆ ಅಂದಿನ ಮಹಾ ಸ್ಪೋಟದಿಂದ ಹೊರ ಚಿಮ್ಮಿದ ತುಣುಕಿನಿಂದ ಈ ಭೂಮಿ ರಚನೆಯಾದ ಮೇಲೆ ಜೀವಿಗಳು ಕ್ರಮ ಬಧ್ಧವಾಗಿ ರೂಪುಗೊಂಡಿರುವುದೆAದು ಈ ಪದದ ಅರ್ಥ.
‘‘We are all geologically, orderly organised and developed organisms’
ದೇವರ ವಿಷಯದಲ್ಲಿ ನಂಬಿಕೆ ಹಾಗು ವಿಶ್ವಾಸವನ್ನು ತೋರುವ ಆಸ್ತಿಕರು ವೈಜ್ಞಾನಿಕ ವಿಶ್ಲೇಷಣೆೆಯನ್ನು ನಂಬುವುದಿಲ್ಲ. ಈ ಕಾರಣಕ್ಕಾಗಿ ತರ್ಕ, ಕುತರ್ಕ ಹಾಗು ವಿತರ್ಕಗಳು ಬೇಡ. ಭಗವಂತನು ಯಾರೆನ್ನುವ ಪ್ರಶ್ನೆಗೆ ನನ್ನ ವೈಯುಕ್ತಿಕ ಉತ್ತರ ‘ಯಾವ ವ್ಯಕ್ತಿ ಭಾಗವತ್ ತತ್ವಗಳನ್ನು ಅಳವಡಿಸುತ್ತಾನೋ ಅವನೇ ಭಗವಂತ.’
ಭಾಗವತ್ ಪಠಣಾಮ್ರುತಾ
ಪುರಷ ಪ್ರಾಪ್ತಿ ನಾಭಿಸುತೇ
ತದ್ ಆತ್ಮ ಪಂಚಭೂತಃ ಸುಪ್ರಿತೇ
ಸರ್ವ ಮಂಗಳ ಪ್ರಕೃತಿ ತನೆಯೇ
ಜಲ ಗಂಗಾ, ಯಮುನಾ, ನರ್ಮದೇ
ಪ್ರಾಣಃ ರ್ವಾಂತ್ರಯಾಮಿ ಸುತೇ
ಕಾಮಃ ಅಗ್ನಿಃ ಮೂಲೇ,
ಭೂಮಂಡಲಃ ಬ್ರಹ್ಮಾಂಡಸುತೇ
ತತ್ ಆಕಾಶಃ ಸರ್ವಙ್ಞ ಬೀಜಮತೇ
ದುಖಃ ಕ್ಲೆಷಃ ಮೂಲಮತೇ
ದೌರ್ಮನೆಸ್ಯಾಃ ವಿಕಲ್ಪ ತ್ವರಿತೇ
ವಿಕ್ಷೇಪಃ ಅಶುಚಿಯತೇ
ಧ್ಯಾನಃ ನಿತ್ಯಮಯತೇ
ಕರ್ಮಃ ಸಂಸ್ಕಾರ ಪೂರ್ವಯತೇ
ಅವಿದ್ಯಾಃ ವಿಚ್ಚಾನುಮತೇ
ವಿಧ್ಯಾಃ ಆತ್ಮಾನುತೇ
ಅಜ್ಞಾನಃ ಭೋಗಮತೇ
ಜ್ಞಾನಃ ಸಮಾಧಿಯತೇ
ತತ್ ಯೋಗಃ ಪ್ರಭಂದಮತೇ
ಶ್ರೀ ಪತಂಜಲೀ ಸುತೇ
ಓಂ ಸತ್, ಓಂ ಚಿತ್, ಓಂ ಆನಂದಃ
ಇತೀ ಭಾಗವತ್ ಪಠಾಣಮೃತಾಃ……..
ಮೂರು ಸಾವಿರ ವರ್ಷಗಳ ಹಿಂದೆ ‘ಬುದ್ದನು’ ನಮ್ಮ ಈ ಬ್ರಹ್ಮಾಂಡವು ಒಂದೆ ಎಂದಿದ್ದರು. ಬ್ರಹ್ಮನ ಹುಟ್ಟಿನಿಂದ ಹಿಡಿದು ಇಲ್ಲಿಯವರೆಗು ಎಲ್ಲವು ಹಾಗು ಎಲ್ಲಾ ಸಮಸ್ತ ಜೀವಿಗಳು ಕಾಯಕ ನಿರತವಾಗಿದ್ದು, ಸಂಚಲನಾ ಶೀಲತೆಯನ್ನು ಹೊಂದಿ, ಸಮನ್ವಯತೆ ಹಾಗು ಸ್ವಾಯತ್ತತೆಯನ್ನ ಕಂಡುಕೊಳ್ಳುತ್ತಾ ಬಂದಿರುವದನ್ನು ಶ್ರೀ ಶ್ರೀ ಆದಿ ಶಂಕರಾಚಾರ್ಯರು “ಅಹಂ ಬ್ರಹ್ಮಾಸ್ಮಿ” ಎಂಬುದಾಗಿ ಹೇಳಿದ್ದರು. ಸಮಾಕಾಲಿನ ಗ್ರೀಕ್ ತತ್ವ ಜ್ಞಾನಿಗಳು ಅಂದೇ ಪ್ರಸ್ತಾಪಿಸಿದ್ದ ದ್ರವ್ಯ ರಚನಾತ್ಮಕತೆಯು (atomic knowledge) ಇಂದಿಗು ಪ್ರಸ್ಥುತ.
ಅಂದೇ ಈ ತತ್ವಯರು ಬೆಂಕಿಯ ಉಂಡೆ ಸುತ್ತ ಮೂರು ಬುಗರಿಗಳು ತಿರುಗುತ್ತಿವೆ ಎನ್ನುವ ಪ್ರಬಂಧವನ್ನು ಸೈಧ್ಧಾಂತಿಕರಿಸಿದಾಗ ಅಂದಿನ ಅವಿದ್ಯಾ ಚಕ್ರಾಧಿಪತಿಗಳ ಕೆಂಗಣ್ಣಿಗೆ ಗುರಿ ಯಾಗಿ ಬಲಿ ಪಶುಗಳಾದರೆಂಬುದು ಇತಿಹಾಸ. ಅಂದು ಗುರುತ್ವಾಕರ್ಷಣೆಯನ್ನು ಬೇದಿಸಿದ Newton ಇರಿಲಿಲ್ಲ. ಇದ್ದಿದ್ದರೆ ಆ ಮಾಹಾ ಪುರುಷರು ಬಹುಕಾಲ ಬದುಕುತ್ತಿದ್ದರೊ ಏನೊ ತಿಳಿಯದು.
ಅಗೊ ಬ್ರಹ್ಮನಲ್ಲಿ ಕಣ್ಣಿಗೆ ಕಾಣುವ ದ್ರವ್ಯ ರಾಶಿ ಪ್ರತಿಷತ್ ನಾಲ್ಕು ಮಾತ್ರ. ಕಾಣದೆ ಇರುವದು ಪ್ರತಿಷತ್ ತೊಂಬತ್ತಾರು. ಕಾಣುವ ಒಂದು ಆಣುವಿನಲ್ಲೆ ಮನು ಕುಲವನ್ನು ನಾಶ ಮಾಡುವಂತಹ ಶಕ್ತಿ ಇದೆ ಎನ್ನುವುದಾದರೆ ಅಗೋಚರತೆಗೆ ಇನ್ನೆಷ್ಟು ಶಕ್ತಿ ಇರಬಹದೆನ್ನುವುದನ್ನು ನೀವೆ ಊಹಿಸಿಕೊಳ್ಳಿ.
ಇದನ್ನು ವಿವರಿಸಿದವನು ಹಾಗು E=mc2 ಸೂತ್ರದ ಹರಿಕಾರನಾದ Einstein ಎರಡನೆ ಮಹಾ ಯುದ್ದದಲ್ಲಿAtom bomb ನ್ನು ಸೃಷ್ಠಸಿ ಜಪಾನ್ ದೇಶದ Nagasaki ಮತ್ತು Hiroshima ನಗರಗಳನ್ನು ನಾಶ ಮಾಡಿದ್ದು ಇತಿಹಾಸ. ಈ ಸಿಧ್ಧಾಂತ ದ್ರವ್ಯಗಳಿಗೆ ಸರಿ. ಆದರೆ ಮಾನವನಲ್ಲಿ ಇಂತಹ ಅಘಾದವಾದ ಶಕ್ತಿ ಇಲ್ಲವೆ? ಇದೆ.
ವೇದಾಂತ ದೃಷ್ಟಿಯಲ್ಲಿ ಮಾನವನನ್ನು ದ್ರವ್ಯಕ, ಸೂಕ್ಷ್ಮ ಹಾಗು ಕಾರಣಗಳೆಂದು ವಿಂಗಡಿಸಿದೆ. ಹೇಗೆ ದ್ರವ್ಯದ ಅಣುವನ್ನು ಅತಿ ಶಕ್ತಿ ಹಾಗು ಉಷ್ಣತೆಯಿಂದ ವಿಕರಣಿಸಬಹುದೊ ಹಾಗೆಯೆ ಮಾನವನ ಕಾಣದೆ ಇರುವ ನಕಾರತ್ಮಕ ಯೋಚನೆಯಿಂದ ಮನು ಕುಲವನ್ನೆ ನಾಶ ಮಾಡಬಹುದು. ಆ ಶಕ್ತಿ ಯಾವುದೆಂದರೆ “ಅಹಂ”. ಯುರೇನಿಯಮ್ ಬೀಜಾಣು ಎಷ್ಟು ಚಂಚಲವೊ ಹಾಗೆಯೇ ಮಾನವನ ಲೌಕಿಕ ಯೋಚನೆಗಳು ಕೂಡ. ಮಾನವನ ವ್ಯಕ್ತಿತ್ವವು ಎಂದಿಗೂ ತನ್ನ ಯೋಚನೆಗೆ ಸಹಮತಿಸುವುದಿಲ್ಲ ಎಂಬದು ಮನೊ ವಿಜ್ಞಾನಿಗಳ ವಿಷ್ಲೇಶಣೆ ಹಾಗಯೇ Boerer ಖಗೋಳ ವಿಜ್ಞಾನಿಯು ಸಿಧ್ಧಾಂತಿಸಿದ QUONTUM THEORY ಪ್ರಕಾರ ಅಣುವಿನಲ್ಲಿ ಕಾಣುವ ಎಲ್ಲಾ ಸೂಕ್ಷ್ಮ ಕಣಗಳು ಯಾವುದೇ ಸಂದರ್ಭದಲ್ಲಿ ಹಾಗು ಕ್ಷಣದಲ್ಲಿ ಆ ದ್ರವ್ಯದ ಲಕ್ಷಣಗಳನ್ನು ಹೊಂದಿದ್ದಾದರೂ ತನ್ನ ಸ್ಥಿರತೆಯ ವಿರುದ್ದವಾಗಿಯೆ ಇರುತ್ತದೆ ಮತ್ತು ಯಾವುದೆ ಗುರುತ್ವಾಕರ್ಷಣೆಗೆ ಒಳಗಾಗಿರುವಿದಿಲ್ಲ.
ಇದರಂತಯೆ ನಮ್ಮ ಮನಸ್ಸು ಕೂಡ. ಈ ತತ್ವ ವಿಚಾರವನ್ನು ಗಮನದಲ್ಲಿ ಇಟ್ಟು ಅರ್ಥೈಸಿದಾಗ ನಮಗೆ ತಿಳಿಯುವ ವಿಷಯ ಅಚ್ಚರಿಯನ್ನೆ ತರುತ್ತದೆ, “ಮಾನವನ ಸೂಕ್ಷ್ಮ ಮನಸ್ಸು ಹಾಗು ದ್ರವ್ಯದ ಸೂಕ್ಷ್ಮಾತಿ ಸೂಕ್ಷ್ಮ ಅಣು ಎರೆಡೂ ಒಂದೆ.” ಓದುಗರೆ ಈಗ ತಿಳಿಯತಲ್ಲವೇ “ಬುದ್ದ” ಹೇಳಿದ್ದು “ಎಲ್ಲವು ಒಂದೆ”ನ್ನುವದು ನಿಜವೆಂದು.
ಬೃಹತ್ತಾಂಕ್ಷೆಯ, ಅನೇಕ ರಾಷ್ಟ್ರಗಳು ಒಳಗೊಂಡ, ಬಹು ಕೋಟಿ ರೂಪಾಯಿಗಳ ಸಾಮನ್ಯ ಮಾನವ ಅರಿಯದ ಅತಿ ದೊಡ್ಡ CERN ಪ್ರಯೋಗಾಲಯದಲ್ಲಿ “ದೆವರ ಕಣ”ದ ಹುಡುಕಾಟ ನೆಡಸಿದ್ದರು ಕೃತಕವಾಗಿ ತಯಾರಿಸಲು ಸಾದ್ಯವಾಗಿಲಿಲ್ಲವಲ್ಲ ಎನ್ನುವದು ಅನೇಕ ಖಗೋಳ ಹಾಗು ಭೌತ ವಿಜ್ಞಾನಿಗಳಿಗೆ ನಿದ್ರೆ ಕೆಡಿಸಿದೆ. ಈಶಾವಾಸ್ಯ ಉಪನಿಶತ್ ಸೂತ್ರ ಒಂದರಲ್ಲಿ….
ಋಷಿಯೋರ್ವರು ಮನಸ್ಸು ಮತ್ತು ಆತ್ಮವು ಎರಡು ಪುರಷನಲ್ಲೆ ಇದೆಯೆಂದು ಹೇಳಿ ಇವೆರೆಡರ ಮಹತ್ವಗಳನ್ನು ತಿಳಿಸಿದ್ದಾರೆ. ಆತ್ಮವು ಯಾವತ್ತೂ ದೃಡ, ಅಚಲ ಹಾಗು ಎಂದೆಂದಿಗು ಮೆಟ್ಟಿನಿಲ್ಲುವುದರಿಂದ ಅದು ರ್ವಂತರ್ಯಾಮಿ. ಇದರ ಅರ್ಥ ಬ್ರಹ್ಮಾಂಡವಿರುವ ತನಕ ಜೀವವಂತೂ ಖಾಯಂ. ನಾವಿಲ್ಲದಿದ್ದರು ನಮ್ಮ ಕರ್ಮಾನುಸಾರ ನಮ್ಮ ಜೀವಗಳು ತನ್ನ ಫಲವನ್ನು ಬಿಟ್ಟು ಹೋಗುವುದರಿಂದ ಆತ್ಮವು ರ್ವಂತರ್ಯಾಮಿ. ಅಂದರೆ ಆತ್ಮಕ್ಕೆ ಸಾವಿಲ್ಲ. ಆದರೆ ಮನಸ್ಸು, ತನ್ನ ಅತಿ ವೇಗದಲ್ಲಿ ಮಾಯಾ ಲೊಕದ ಜೊತೆ ತನ್ನ ಷಡ್ಐಶ್ರ್ಯಗಳನ್ನ ಸೇರಿಸಿ ಚಲತೆಯ ಅಚಲತೆ ಇದ್ದು ಹಾಗು ದೃಡತೆ ಇಲ್ಲದೆ ಇರುವದರಿಂದ ಲೋಕಿಕ ಮನಸ್ಸು ಎಂದೂ ಸತ್ಯವಲ್ಲ, ಅದು ಮಿಥ್ಯ. ಇಂತಹ ಮನಸ್ಸನ್ನು ನಿಗ್ರಹವಾಗಿಸಿ, ಮೆಟ್ಟಿ, ಸ್ಥಿರವನ್ನು ಕಂಡು ಸತ್ಯದ ಆತ್ಮದಲ್ಲಿ ಮಿಲನವಾಗಬೇಕಾದರೆ ಅಷ್ಟು ಸುಲಭದ ಮಾತಲ್ಲ. ಪರಿವರ್ತನಗೊಳಿಸಿದ ಇಂತಹ ಮನಸ್ಸನ್ನು ಮೌನ ಪ್ರದಾನ ಆತ್ಮದಲ್ಲಿ ಸೇರಿಸಿದ್ದೆ ಆದರೆ, ಈ ಕ್ರಿಯೆಯನ್ನು “ಯೋಗ”ವೆಂದು ಕರೆಯಬಹುದು.
“Higgs Boson” ಅಥವ “ದೇವರ ಕಣ”ಗಳ ಆವಿಷ್ಕಾರವನ್ನು ವಿಜ್ಞಾನಿಗಳು ಕಂಡುಹಿಡಿಯುವರೇನೊ? ಆದರೆ ಈ ಸೂತ್ರದ ಸಾರ ವಿಜ್ಞಾನಕ್ಕೂ ಮತ್ತು ವೇದಕ್ಕೂ ಇರುವ ನಂಟು ಒಂದು ವಿಷೇಶವೆ ಸರಿ….
[…] 6.https://vicharavisthara.com/manasu-mrudhanga-dr-a-m-nagesh-6-2/ G O D ********************************************************************************************************* […]