ತುಮಕೂರು: ಹಾಲಪ್ಪ ಪ್ರತಿಷ್ಠಾನ ತುಮಕೂರು ಇವರು, ಐಎಂಎ,ಬೀದಿ ಬದಿ ವ್ಯಾಪಾರಿಗಳ ಸಂಘ, ಔಷಧ ವ್ಯಾಪಾರಿಗಳ ಸಂಘ ತುಮಕೂರು ಹಾಗು ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಕಲಿ, ಕಲಬೆರಕೆ ಆಹಾರ, ಔಷಧಗಳ ಬಗ್ಗೆ ಜನಜಾಗೃತಿಅಭಿಯಾನವನ್ನು ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಜಾಗೃತಿ ಅಭಿಯಾನ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ,ಔಷಧ, ಅಹಾರ ಇವರೆಡಕ್ಕೂ ನೇರವಾದ ಸಂಬAಧವಿದೆ. ಕಲಬೆರಕ ರಹಿತ, ರುಚಿಯ ಜೊತೆಗೆ ಶುಚಿಯಿಂದ ಕೂಡಿದ ಆಹಾರ ಸೇವೆಯಿಂದ ಮನುಷ್ಯ ಔಷಧಗಳಿಂದ ದೂರವಿರಲು ಸಾಧ್ಯ.ಒಂದು ವೇಳೆ ಕಲಬೆರಕೆ, ಅಶುಚಿತ್ವ ಆಹಾರದಿಂದ ತೊಂದರೆಯಾಗಿ ಆಸ್ಪತ್ರೆಗೆ ಸೇರಿದಂತಹ ಸಂದರ್ಭದಲ್ಲಿ ಅಲ್ಲಿಯೂ ನಕಲಿ ಇಲ್ಲವೇ ಕಲಬೆರಕ ಔಷಧಗಳನ್ನು ಕೊಟ್ಟು ಮತ್ತಷ್ಟು ಹಾನಿಗೊಳಗಾಗುವ ಸಾಧ್ಯ ಹೆಚ್ಚಿದೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿದೆ.ಔಷಧ ನಿಯಂತ್ರಣ,ಆಹಾರ ಸುರಕ್ಷತೆ ಅಧಿಕಾರಿಗಳ ಜೊತೆಗೆ,ಬಿಸಿಯೂಟ(ಅಕ್ಷರದಾಸೋಹ) ಅಧಿಕಾರಿಗಳ ಸಹ ನಮ್ಮೊಂದಿಗೆ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಇದನ್ನು ತಾಲೂಕು, ಹೋಬಳಿ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಗುರಿಯಿದೆ.ಜನರಿಗೆ ಶುಚಿಯಿಂದ ಗುಣಮಟ್ಟದ, ಕಲಬೆರಕೆರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆರಹಿತ ಔಷಧಗಳು ದೊರೆಯುಬೇಕೆಂಬುದು ನಮ್ಮ ಗುರಿಯಾಗಿದೆ. ಇದು ಯಾರ ವಿರುದ್ಧವೂ ನಡೆಸುತ್ತಿರುವ ಹೋರಾಟವಲ್ಲ. ಬದಲಿಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವಾಗಿದೆ ಎಂದರು.

ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸುಧಾಕರ್ ಮಾತನಾಡಿ, ಪ್ರಸ್ತುತಜಿಲ್ಲೆಯಲ್ಲಿ 10 ರಿಂದ 1500 ಮಕ್ಕಳು ಇರುವ ಶಾಲೆಗಳಲ್ಲಿ ಬೆಳಗಿನ ಕ್ಷೀರಭಾಗ್ಯ,ಮಧ್ಯಾಹ್ನದ ಬಿಸಿಯೂಟ ಹಾಗೂ ಸಂಜೆ ಗಣಿಭಾದಿತ ಪ್ರದೇಶಗಳಲ್ಲಿ ದ್ವಿದಳ ಧಾನ್ಯಗಳ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ.ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಉಳಿದಂತೆ ಅತ್ಯಂತ ಸುರಕ್ಷಿತವಾಗಿ ಬಿಸಿಯೂಟ ವಿತರಣೆ ನಡೆಯುತ್ತಿದೆ.ನಮ್ಮಲ್ಲಿರುವ ಬಿಸಿಯೂಟ ತಯಾರಕರಲ್ಲಿ ಶೇ70ರಷ್ಟು ಸಿಬ್ಬಂದಿ ವಿದ್ಯಾವಂತರಿದ್ದರೆ, ಶೇ30 ರಷ್ಟು ಸಿಬ್ಬಂದಿ ಅವಿದ್ಯಾವಂತರು. ಆದರೂ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಿ, ಮಕ್ಕಳಿಗೆ ಗುಣಮಟ್ಟದ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಕಾಲಕಾಲಕ್ಕೆ ಅವರಿಗೆತರಬೇತಿ ನೀಡಲಾಗುತ್ತಿದೆ. ಇದರಜೊತೆಗೆ, ಕೇಂದ್ರೀಕೃತಅಡುಗೆ ಮನೆ ವ್ಯವಸ್ಥೆಯ ಬಗ್ಗೆಯೂ ಆಲೋಚನೆ ಇದೆ ಎಂದರು.


ಜಿಲ್ಲಾ ಔಷಧ ನಿಯಂತ್ರಣಾಧಿಕಾರಿಗಳಾದ ಚಂದ್ರಕಲಾಶಿಲ್ಪ ಮಾತನಾಡಿ,ಔಷಧಗಳ ಕಲಬೆರಕೆ ಮತ್ತು ಕಡಿಮೆ ಗುಣಮಟ್ಟದಿಂದ ಮನುಷ್ಯನ ಮೇಲೆ ಸಾಕಷ್ಟು ದುಷ್ಪರಿಣಾಮ ಎದುರಿಸಬೇಕಾಗುತ್ತಿದೆ. ಕಡಿಮೆ ಗುಣಮಟ್ಟದಿಂದ ಖಾಯಿಲೆ ವಾಸಿಯಾಗುವುದು ತಡವಾದರೆ, ಕಲಬೆರಕೆಯಿಂದ ಅಡ್ಡಪರಿಣಾಮಕ್ಕೆ ತುತ್ತಾಗಬೇಕಾಗುತ್ತೆದೆ.ಹಾಗಾಗಿ ಜನರುಜಾಗೃತರಾಗಬೇಕು.ಅಧಿಕೃತ ಎಜೆನ್ಸಿಗಳಿಂದ ಸರಬರಾಜರಾಗಿರುವ ಔಷಧಗಳನ್ನು ಅಂಗಡಿಗಳಲ್ಲಿ ವೈದ್ಯರ ಸಲಹೆಯಂತೆ ಖರೀದಿಸಿ ಬಳಸಬೇಕು.ಡಿಸ್ಕೌಂಟ್ಗೆ ಮಾರು ಹೋಗಬೇಡಿ,ಸಾಧ್ಯವಾದಷ್ಟುಅನ್ಲೈನ್ನಲ್ಲಿಔಷಧಿಖರೀದಿಯನ್ನು ನಿಲ್ಲಿಸಿ ಎಂದು ಸಲಹೆ ನೀಡಿದರು.
ಆಹಾರ ಸುರಕ್ಷತಾ ಅಧಿಕಾರಿ ಹರೀಶ್ ಮಾತನಾಡಿ, ಹೋಟೆಲ್ ಮತ್ತು ಉಪಹಾರ ಮಂದಿರಗಳಲ್ಲಿ ದೊರೆಯುವ ಆಹಾರದ ಬಗ್ಗೆ ಜನರು ಸ್ವಯಂಜಾಗೃತರಾಗಬೇಕು. ಕಡಿಮೆ ಹಣಕ್ಕೆ ಸಿಗುತ್ತದೆ ಎಂದು ರಸ್ತೆ ಬದಿಯಲ್ಲಿ, ಸುರಕ್ಷತೆ ಇಲ್ಲದ ಆಹಾರಗಳನ್ನು ಸೇವಿಸುವುದು ಒಳ್ಳೆಯದಲ್ಲ.ಆರ್ಟಿಪಿಸಿಯಲ್ ಬಣ್ಣ,ಕಚ್ಚಾವಸ್ತುಗಳನ್ನು ಬಳಸುವುದರಿಂದ ಕ್ಯಾನ್ಸರ್ನಂತಹ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಒಂದು ಸಮಿಕ್ಷೆಯ ಪ್ರಕಾರ 2067ರ ವೇಳೆ ಭಾರತದ ಪ್ರತಿ ಮನೆಯಲ್ಲಿಯೂ ಓರ್ವ ಕ್ಯಾನ್ಸರ್ರೋಗಿ ಇರುತ್ತಾನೆ ಎನ್ನಲಾಗುತ್ತಿದೆ. ಇದರಿಂದ ಹೊರಬರಲು ಜನರು ಮನೆಯಲ್ಲಿ ಮತ್ತು ಹೊಟೇಲ್ಗಳಲ್ಲಿ ಮೊದಲು ಆಹಾರದ ಗುಣಮಟ್ಟ ಮತ್ತು ಶುಚಿತ್ವಕ್ಕೆ ಒತ್ತು ನೀಡಬೇಕು.ಸಾಧ್ಯವಾದಷ್ಟು ಜಂಕ್ ಪುಡ್ಗಳಿಂದ ದೂರ ಇರಿ ಎಂದು ಸಲಹೆ ನೀಡಿದರು.
ಔಷಧ ವ್ಯಾಪಾರಿಗಳ ಪರವಾಗಿ ಪಂಡಿತಜವಹರ್, ಐಎಂಎ ಅಧ್ಯಕ್ಷಡಾ.ಲೋಕೇಶ್ ಬಾಬು, ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ವೇದಮೂರ್ತಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಚಿ.ನಾ.ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸೇವಾದಳದ ಕೃಷ್ಣೇಗೌಡ, ಗೋವಿಂದರಾಜು, ಪ್ರಸನ್ನಕುಮಾರ್, ನಟರಾಜಶೆಟ್ಟಿ, ಕೊಂಡಜ್ಜಿಕುಮಾರ್, ಹೊಟೇಲ್ ಅಸೋಸಿಯೇಷನ್, ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
– ಚಂದ್ರಚೂಡ ಕೆ.ಬಿ.
