ಚನ್ನರಾಯಪಟ್ಟಣ: ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಮಂಡಳಿ (ಟಿಎಪಿಸಿಎಂಎಸ್) ನೂತನ ಅಧ್ಯಕ್ಷರಾಗಿ ತೋಟಿ ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಡಳಿಯ ಅಧ್ಯಕ್ಷರಾಗಿದ್ದ ಮೆಡಿಕಲ್ ವೆಂಕಟೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ತೋಟಿ ನಾಗರಾಜು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಕರ್ನಾಟಕ ಸಹಕಾರ ಮಾರಾಟ ಮಂಡಳಿ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಉಪಾಧ್ಯಕ್ಷೆ ತಾರಾಮಣಿ, ನಿರ್ದೇಶಕರಾದ ಕುಂಭಾರಹಳ್ಳಿ ರಮೇಶ್, ಮೆಡಿಕಲ್ ವೆಂಕಟೇಶ್, ಮಾರ್ಗೋರ್ ಅನಿಲ್, ಸಿ.ಜಿ. ಜಗದೀಶ್, ನೆಟ್ಟೆಕೆರೆ ನಾಗರಾಜು, ನಂಜುಂಡೇಗೌಡ, ಮಮತಾ, ಕೆ.ಆರ್. ರವಿಕುಮಾರ್, ಉಮೇಶ್ ಹಾಗೂ ಕಾರ್ಯದರ್ಶಿ ಸಂಧ್ಯಾ ಉಪಸ್ಥಿತರಿದ್ದರು.
ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಸುರೇಶ್, ವೀರಶೈವ ಸಮಾಜದ ಮುಖಂಡ ನುಗ್ಗೆಹಳ್ಳಿ ಕೃಪಾಶಂಕರ್, ತಾಲೂಕು ಭೋವಿ ಸಮಾಜದ ಮುಖಂಡ ಎಂ.ಎಂ. ದಿಲೀಪ್, ಜೆಡಿಎಸ್ ಯುವ ಮುಖಂಡ ಅರುವನಹಳ್ಳಿ ಜೀವನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಉದ್ಯಮಿಗಳು, ಮಂಡಳಿಯ ಸಿಬ್ಬಂದಿ ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
- ಮಂಜುನಾಥ್ ಐ.ಕೆ
