ಮನಸು ಮೃದಂಗ
(ಲೇಖನಗಳ ಸಂಕಲನ)
ದೇವರ ಕಣ
ಅಗಣಿತ ಬಿಲಿಯನ್ ವರ್ಷಗಳ ಹಿಂದೆ ಆದಂತಹ ಮಹಾ ಸ್ಪೋಟದಿಂದ ನಮ್ಮ ಭೂಮಿ ಒಂದು ಅಣು ತುಣುಕಾಗಿ ಎಸೆಯಲ್ಪಟ್ಟಿದೆ. ಇಂದಿಗೂ ಸಹ ನಮ್ಮ ಈ ಭೂಮಿ ಬಹು ವೇಗದಲ್ಲಿ ಸ್ಪೋಟದ ವಿರುದ್ದ ದಿಕ್ಕಿನಲ್ಲಿ ಸಂಚರಿಸುತ್ತಿದೆ. ಈಗ ಹೇಳಿದ ಸ್ಪೋಟವಾದರು ಹೇಗೆ ಆಯಿತು? ಎಲ್ಲಿ ಆಯಿತು? ಮತ್ತೆ ಭೂಮಿಯ ಮೇಲೆ ಜೀವಿಸಿತ್ತಿರುವ ನಾವು ಎತ್ತ ಸಾಗುತ್ತಿದ್ದೇವೆ? ಈ ಪ್ರಶ್ನೆಗಳಿಗೆ ವಿಶ್ವದ ಅಗ್ರ ಖಗೋಳ ಶಾಸ್ತçಙ್ಞರೇ ಉತ್ತರಿಸಲು ಆಗುತ್ತಿಲ್ಲ.
ಈ ವಿಷಯಾಗಿ Stephen Hawking ರಿಗೂ ಸಹ ಉತ್ತರಿಸಲು ಸಾದ್ಯವಾಗಿಲ್ಲ. ಇವರ ಪ್ರಕಾರ “ಹಿಂದೆ ಚಿಟಿಕಿ ಹೊಡೆಯೋದರಲ್ಲಿ ವಿಶ್ವ ಸೃಷ್ಟಿ ಆಗಿದೆ, ನಾವುಗಳು ಇದ್ದೀವಿ, ಈಗಲೂ ಇದ್ದೀವಿ ಹಾಗೆಯೇ ಮುಂದೆಯೂ ನಾವು ಇರುತ್ತೀವಿ” ಎಂದು ಹೇಳಿ ತಮ್ಮ ಅಸಹಾಯಕತೆಯನ್ನು ತೆರದಿಟ್ಟಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಗಳ ಹುಡುಕಾಟ ಮೊನ್ನೆಯಷ್ಠೆ ನೆಡದ (ಪ್ರಾಯೋಗಿಕ) ಪ್ರಯೋಗಾಲಯದಲ್ಲಿನ “ದೇವರ ಕಣ (GOD’S PARTICAL)”ವನ್ನ ಹುಡಕಲು ಹೊರಟಾಗ ಮತ್ತು ಈ ಕಣ ಕಾಣದಿದ್ದಾಗ ಮತ್ತೆ ಮತ್ತೆ ಇದೆ ಕಣದ ಬಗ್ಗೆ ಅತೀವ ಕುತುಹಲ ಇಮ್ಮಡಿಸಿತೆನ್ನಬಹುದು. ಹಾಗದಾರೆ “ದೇವರ ಕಣ”ವಾದರು ಏನು?
ಭೌತ ಶಾಸ್ತ್ರದ ಪ್ರಕಾರ ‘ಘನಾವಸ್ಥೆಯು ಅಣುವಿನ ಜಿಗಿಟಿನಿಂದ’ ಎಂದು ಹೇಳಲಾಗಿದೆ. ಇದನ್ನು ವಿಭಜಿಸ (ವಿಕರಿಣಸ) ಬೇಕಾದರೆ ಒತ್ತಡ ಹಾಗು ಉಷ್ಣತೆಯು ಅತ್ಯವಶ್ಯಕ. ಯಾವುದೆ ಘನ ವಸ್ತು ಹೆಚ್ಚು ಉಷ್ಣತೆಗೆ ಅಳವಡಿಸಿದಾಗ ಆ ವಸ್ತು ಆವಿಗೊಂಡು ಉಷ್ಣತೆಯು ಕಮ್ಮಿಯಾದಂತೆ ತನ್ನ ಘನಾವಸ್ತೆಗೆ ಹಿಂದಿರುಗುತ್ತದೆ.
ರಸಾಯಿನಕ ಶಾಸ್ತ್ರ ದಲ್ಲಿ ಕಂಡುಬರುವ ಒಂದೊಂದು ದ್ರವ್ಯವು ತನ್ನದೆ ಆದ ಉಷ್ಣತೆಯ ಪ್ರಮಾಣವನ್ನು ಕಂಡುಕೊಂಡಿರುತ್ತೆ. ಆದರೆ ಭೌತಶಾಸ್ತç ವಿಜ್ಞಾನಿ ಬೊಸ್ (BOSE) ರ ತತ್ವದ ಪ್ರಕಾರ ‘ಯಾವುದೆ ಘನ ವಸ್ತುವನ್ನು ಮೈನಸ್ ಮುನ್ನೂರ ಎಪ್ಪತ್ತ ಐದು ಉಷ್ಣತೆಗೆ ತಂದರೆ ಎಲ್ಲಾ ದ್ರವ್ಯ ರಾಶಿಗಳು ತಮ್ಮ ತಮ್ಮ ಘನತೆ ಹಾಗು ಲಕ್ಷಣಗಳನ್ನು ಕಳೆದುಕೊಂಡು ಒಂದೆ ಆಗಿಹೊಗುತೆ’್ತ. ಇದರಿಂದ ತಿಳಿಯುವುದೇನೆಂದರೆ ದ್ರವ್ಯಗಳ ಘನಾವಸ್ತೆಯು ತನ್ನ ತೂಕ, ಗಟ್ಟಿ ಹಾಗು ಮೇಲ್ಮೈ ಲಕ್ಷಣಗಳಿಂದ ಕೂಡಿದ್ದು, ಅಣುವಿನ ಭಾರ ಮತ್ತು ಅಣುವಿನ ಒಳಗೆ ಅಣುವಿಗಿಂತ ಚಿಕ್ಕದಾದ ಕಣಗಳ ಸಂಕ್ಯೆಗಳಿಂದ ((Hydrogen has one valency and for the oxygen valency is two) ಕೂಡಿದ್ದಾಗಿರುತ್ತೆ. ಇಂತಹ ಅತಿ ಸೂಕ್ಷ್ಮತೆಯುಳ್ಳ ಆಣುವಿನ ಹೊಂದಾಣಿಕೆಗಳಿಂದ ನಮಗೆ ಕಾಣುವ ವಿಶ್ವದ ದ್ರವ್ಯ ರಾಶಿ ನಿಜವಾಗಿಯೂ ಸೋಜಿಗ. ಈ ಶಕ್ತಿಯನ್ನೇ ದೇವರ ಶಕ್ತಿ ಎಂದು ಕರಯುವುದು. ಅಣುವಿನ ಒಳಗಿರುವ ““Nucleus” ಸುತ್ತ ಸುತ್ತುವ ““proton, neutron and electron (ಪ್ರೋಟಾನ್, ನ್ಯೂಟ್ರಾನ್ ಮತ್ತು ಎಲೆಕ್ರ್ಟಾನ್)” ಗಳ ವೇಗ ಚಲನೆ ಹಾಗು ಈಗ ಹೇಳಿದ ಕಣಗಳನ್ನು ಹಿಡಿದಿಟ್ಟು ಕೊಳ್ಳುವ ಶಕ್ತಿಯಿಂದ ಭೂಮಿಯ ಮೇಲಿರುವ ದ್ರವ್ಯ ರಾಶಿಗಳನ್ನು ವಿಂಗಡಿಸಬಹುದು.
ಉದಾಹರಣೆಗೆ ನಾವು ನಮ್ಮ ಮೈ ಮೇಲೆ ಹಾಕಿ ಕೊಳ್ಳುವ ಚಿನ್ನದ ಅಣು ಹೆಚ್ಚು ಕೂಡುಕೊಳ್ಳುವ ಶಕ್ತಿಯಿಂದ ಕೂಡಿರುತ್ತದೆ. ಆದೇ ಯುರೆನಿಯಮ್ ((uranium) ) ಹಾಗು ಪ್ಲುಟೊನಿಯಮ್ಗಳ ((plutonium)) ಅಣುವಿನ ಕೂಡಿಕೊಳ್ಳುವ ಶಕ್ತಿ ಅತಿ ಕಡಿಮೆ ಇರುವದರಿಂದ ಅದನ್ನು ಬೇರ್ಪಡಿಸಿ ಸುಲಭವಾಗಿ ವಿಭಜನೆಗೆ ಓಳಪಡಿಸಿಬಹುದಾದ್ದಿರಿಂದ ಈ ಅಣುವನ್ನು “ಆಟಮ್ ಬಾಂಬ್” ಆಗಿ ಉಪಯೋಗಿಸುತ್ತಾರೆ. ಕಾರಣ ಇವುಗಳ ಅಣುವು ಬಹು ಚಂಚಲತೆಯಿಂದ ಕೂಡಿದ್ದು ಕಡಿಮೆ ಉಷ್ಣತೆಯಲ್ಲೆ ಬೇರ್ಪಡಿಸಿ ಮತ್ತು ಅದನ್ನು ವಿಭಜಿಸಿ ಅಘಾದವಾದ ಶಕ್ತಿಯನ್ನು ತಯಾರು ಮಾಡಿ, ಸಿಡಿಸಿ ಮನು ಕುಲವನ್ನೆ ಸರ್ವನಾಶ ಮಾಡಬಹುದು. ಈಗ ತಿಳಿಸಿದ್ದು ಎಲಾಕ್ಟ್ರಾನ್ ((electron) ಹಾಗು ಪ್ರೊಟಾನ್ (proton) ) ಕಣಗಳು, ಆದರೆ ಇವುಗಳಿಗಿಂತ ಚಿಕ್ಕದಾದ ಕಣಗಳು ಇಡಿ ಸಮಸ್ತ ಬ್ರಹ್ಮಾಂಡವನ್ನೆ ವ್ಯಾಪಿಸಿರುವದನ್ನ ಸಾಮನ್ಯವಾಗಿ “ದೇವರ ಕಣ”ಗಳೆನ್ನಬಹುದು. ಅವುಗಳನ್ನು ಭೌತ ವಿಜ್ಞಾನದಲ್ಲಿ quartz, techno quartz, nutrenos, neons ಕಣಗಳೆಂದು ಕರಯುತ್ತಾರೆ.

ವಾಸ್ತವದಲ್ಲಿ ದೇವರ ಕಣ ಇಲ್ಲ, ನಮಗೆ ದೇವರ ಕಣ ಒಂದು ಊಹೆ ಅಷ್ಟೆ. ದೇವರು ಇದ್ದಾನೂ ಇಲ್ಲವೊ ತಿಳಿಯದು ಹಾಗೆಯೆ ಈ ದೇವರ ಕಣವು ಕೂಡ. ಈರೋಪಿಯನ್ ಮದ್ಯ ಭಾಗದಲ್ಲಿ ಅತಿ ಕೆಳ ನೆಲ ಮಾಳಿಗೆಯಲ್ಲಿ ಕೆಲವು ಕಿಲೊಮೀಟರ್ ಉದ್ದದ ಕೊಳುವೆಯ ಒಳಗೆ ಈ ಮೊದಲೆ ಉತ್ಪಾದಸಿದ ಸಹಸ್ರಾರು electron and positron ಅಣು ಕಣಗಳನ್ನು ಬಹು ವೇಗದಲ್ಲಿ LHC (large hardon collider)ಯ ವಿರುದ್ದ ದಿಕ್ಕಿನ ಎರಡು ಕೊಳವೆಗಳ ಮೂಲಕ ಮೇಲೆ ಹೇಳಿದ ಕಣಗಳನ್ನು ಡಿಕ್ಕಿ ಹೊಡಿಸಿ, ಈ ಹಿಂದೆ ನೆಡದ BIG BANG ನಷ್ಟೆ ಉಷ್ಣತೆಯನ್ನು ಸೃಷ್ಟಿಸಿ, ಡಿಕ್ಕಿಗೆ ಒಳಗಾದ ಕಣಗಳಿಂದ ವಿಶ್ವ ಘನ ದ್ರವ್ಯಗಳಿಗೆ ಕಾರಣವಾದ “ದೇವರ ಕಣ”ದ ಹುಡುಕಾಟ ಈ ಹಿಂದೆಯೆ ನಿಯೋಜಿಸಲ್ಪಟ್ಟು ಬಹು ಶಕ್ತಿ ಉಳ್ಳ ಮಾಹಿತಿ ಗಣಕ ಯಂತ್ರಗಳ ಸಹಾಯದಿಂದ ಅದನ್ನು ತಿಳಿಯುವ ಪ್ರಯತ್ನಗಳು ನಡೆಯಿತು.

ಕೆಲ ವಿಜ್ಞಾನಿಗಳು “ದೇವರ ಕಣ” ಸಿಕ್ಕಿತೆಂದು ಕುಣಿದು ಕುಪ್ಪಳಿಸಿದರು ಆದರೆ STEPHEN HAWKING ರು ಮಾತ್ರ ಬೇಜಾರಾಗಿಯೇ ಇದ್ದರು, ಕಾರಣ ಇವರಿಗೆ “ದೇವರು” ಮತ್ತು “ದೇವರ ಕಣ” ಗಳರೆಡು ಕಾಣಿಸಲಿಲ್ಲ. ನಮ್ಮ ಭಾರತ ದೇಶದಲ್ಲಿ ಇಂತಾದ್ದೆ ಮಹತ್ವಾಂಕ್ಷೆಯ ಯೋಜನೆ india nutrenos observatory ದೇವರ ಕಣವನ್ನು ಎರಡು ಸಾವಿರದ ಇಪ್ಪತ್ತರ ವೇಳಗೆ ಕಂಡು ಹಿಡಿಯುವ ಹುಮ್ಮಸ್ಸಿನಲ್ಲಿದೆ. ನಮ್ಮ ವಿಜ್ಞಾನಿಗಳಿಗೆ ಈelusive partical ಕಾಣಲೆಂದು ದೇವರಲ್ಲಿ ಪ್ರಾರ್ಥಿಸೋಣ.
ಇಲ್ಲೇ ಅಡಗಿರುವದು GOD’S PARADOX, ಅಥವ ವೈರುತ್ಯ. ಅಂದರೆ ಅತಿ ಸೂಕ್ಮ್ಷಾಣು ಸೂಕ್ಷ್ಮಣು ಕಣ ಕಂಡರೂ ಅವು ದೇವರ ಕಣಗಳಲ್ಲ, ಈ ಎರಡೂ ಕಣಗಳನ್ನು ಹಿಡದಿಡುವ ಶಕ್ತಿ ಅಥವಾ ಅಗೋಚರವಾದ ಶಕ್ತಿಯೇ ದೇವರಿರಬೇಕು. ಈ ದೇವರ ಕೆಲಸ ಘನಾವಸ್ಥೆಗೆ ಪೂರಕವಾಗಿರಬೇಕು. ಅದೇ ಆ “ಅಂಟು” ಅಥವ “ಜಿಗಟು”. ಈ ವಿಷಯವನ್ನ ಮೂರು ಸಾವಿರ ವರ್ಷಗಳ ಹಿಂದೆಯೇ ಮಹಾನ್ “ಬುದ್ದ”ರು ‘everything in this universe are inter connected, inter related and inter dependent’ ಎಂದು ಹೇಳಿದ್ದರು.
ಮಾಧ್ಯಮಗಳಲ್ಲಿ ಮತ್ತು ಜನರಲ್ಲಿ “ದೇವರ ಕಣ”ದ ಬಗ್ಗೆಯ ವಿಚಾರ ಹಾಗು ಚರ್ಚಾ ವಿಷಯಗಳು ರಾರಾಜಿಸುತ್ತಿತ್ತು. ಅಂದಿನ ದುಡಿಮೆಯಿಂದ ಜೀವನ ಸಾಗಿಸುವವನಿಗೆ ಕಾಯಕವೇ ದೇವರಾಗಿತ್ತು. ವಿಚಾರದಾಹನಿಗೆ ತಿಳಿದುಕೊಳ್ಳುವ ಕುತೂಹಲ ಇತ್ತು. ಹಾಗು ವಿಜ್ಞಾನಿಗೆ “ದೇವರ ಕಣ” ಕಾಣುವ ಬಯಕೆ ಇತ್ತು. ನಾಸ್ತಿಕರು ಮೀಸೆ ತಿರುವಿದರೆ ಆಸ್ತಿಕರು ಒಪ್ಪಿಕೊಳ್ಳದ ಸ್ಥಿತಿಯಲಿಲ್ಲದೆ ಗಲಿಬಿಲಿ ಗೊಂಡಿದ್ದು ಗೋಚರವಾಗುತ್ತಿತ್ತು.
ಏನೇ ಇದ್ದರು ಪುರುಷ ಹಾಗು ಪ್ರಕೃತಿಗಳ ಅನುಬಂಧ ಹೇಳಾಲಾಗದ, ಕಂಡುಕೊಳ್ಳದ ಮತ್ತು ಗೋಚರವಾಗದ “ಜಿಗಟು” ಅಥವಾ “ಅಂಟಿ”ನಿಂದ ಬೆಸೆದಿರುವುದು ಪರಮ ಆಶ್ಚರ್ಯವಲ್ಲವೆ?. ಈ ಆಶ್ಚರ್ಯವೇ “ದೇವರು” ಇರಬಹುದು. ಹೇಳಿದ ಸಂಭಂದವನ್ನು “ನಿರಂತರವಾದ ಪುರುಷ ಪ್ರಕೃತಿ ಬೆಸುಗೆಯಲ್ಲಿ ರಸ ಉತ್ಕನನ, ಭಾವನಾ ಲಹರಿ ಮತ್ತು ಚಿಂತನ ಮಂಥನಗಳ ರಸದೌತಣ, ವಿಸ್ಮಯ ಕಲರವ ಹಾಗು ವಿಭಿನ್ನ ಚೇತನಗಳೆಲ್ಲವು ಭಗವಂತನ ಲೀಲೆ” ಎಂದು ಹೇಳಬಹುದಲ್ಲವೇ? ಈ ಪದವನ್ನು ನೆನಸಿಕೊಳ್ಳುತ್ತಿದ್ದಾಗ ನನ್ನ ಜ್ಞಾಪಕಕ್ಕೆ ಬಂದಿದ್ದು ಆನಂದ್.

‘ಕವಿ ಆನಂದ್’ ಹೇಗೆ ‘ಕವಿ ತಿಮ್ಮ’ರೆಂದು ಕರೆಸಿಕೊಂಡರು ಎಂಬುದು ಒಂದು ರೋಚಕ ಕತೆ. ಇವರು ಸಾಹಿತ್ಯದಲ್ಲಿ ಬಂಡಾಯ ಸಾಹಿತಿಗಳೆದೇ ಚಿರ ಪರಿಚಿತರು. ಪದವಿ ಪೂರ್ವ ಪರಿಕ್ಷೆಯ ಕಲಾ ವಿಬಾಗದಲ್ಲಿ ಹೆಚ್ಚು ಅಂಕಗಳನ್ನು ಪಡಿದಿದ್ದರೂ ಮೊದಲನೆ ಡಿಗ್ರಿಗೆ ಕಾಲೇಜ್ ಸೇರಿದ ಮೇಲೆ ಬಲು ಮಾತು, ಬರೆಯುವದು, ಒಗ್ಗಟ್ಟಿಸುವದು, ತಪ್ಪು ಕಂಡು ಹಿಡಿಯುವದು, ಜಗಳವಾಡುವುದು, ಗುಂಪುಗಾರಿಕೆಗಳು ಇದ್ದರೂ ಬೇರೆ ತರಹದ ದುಶ್ಚಟಗಳು ಇರಲಿಲ್ಲ. ಆದುದರಿಂದ ಅಧ್ಯಾಪಕರಿಗೆ ಹಾಗು ಸಹ ಪಾಠಿಗಳಿಗೆ ಇವರು ಹಿಡಿಸುತಿರಿಲಿಲ್ಲ. ಇವರ ನುಡಿ ಸತ್ಯದ ನುಡಿಯಾಗಿದ್ದು ಎಲ್ಲರಿಗೂ ಇವರು ಕಹಿಯಾಗಿದ್ದವರು.
ಇವರು ಅನೇಕ ಶ್ರೇಷ್ಟ ಸಾಹಿತಿಗಳ ಕೃತಿಗಳನ್ನೆ ಓದುತ್ತಿರಿಲಿಲ್ಲ ಆದರೆ ಇವರು ಬರೆಯುವ ಕವನಗಳಲ್ಲಿ ಪ್ರಭುದ್ಧತೆಯ ಕೊರತೆ ಎದ್ದು ಕಾಣತ್ತಿತ್ತು. ಇವರು ಬರಿಯುತ್ತಿದ್ದ ಸಾಹಿತ್ಯವು ಅತ್ಯಂತ ಒಳ ಅರ್ಥಗಳಿಂದ ಕೂಡಿದ್ದರಿಂದ ಕೇಳುವವರಿಗೆ ಹಾಗು ಓದುಗರಿಗೆ ಖುಷಿ ಕೊಡುತ್ತಿರಲಿಲ್ಲ. ಅವರ ವಯಸ್ಸಿಗೆ ಕೋಪದ ಮತ್ತು ಹರಿತವಾದ ಸತ್ಯದ ಮಾತುಗಳನ್ನೆ ಆಡುತಿದ್ದರು. ಒಮ್ಮೆ ಇವರಿಗೆ ಆಗದ ಮಿತ್ರರು ಪ್ರಾಧ್ಯಾಪಕರು ಬರೆದುಕೊಟ್ಟಂತಾ ಕವನವನ್ನು ಓದಿ ಕಾಲೇಜಿನಲ್ಲಿ ಹೆಗ್ಗಳಿಕೆ ಗಳಿಸುತ್ತಿದ್ದನ್ನು ಸಹಿಸದ ಕವಿ ಆನಂದ್ ಸಮಯವನ್ನು ಕಾದು ಕಾಲೇಜಿನ ಮೈದಾನದಲ್ಲಿ ಅಲ್ಪ ಕಾರಣಕ್ಕೆ ರಂಪಾಟ ಮಾಡಿ ಕೋತಿಯಂತೆ ವರ್ತಿಸಿದ್ದರಿಂದ ಅವರಿಗೆ ಕವಿ ತಿಮ್ಮರೆಂದು ಮರು ನಾಮಕಾರಣ ಮಾಡಲಾಯಿತು. ಇವರ ಬಗ್ಗೆ ಇತರರ ಅಭಿಪ್ರಾಯವೇನೆ ಇದ್ದರೂ ಕೆಲ ಕವನಗಳು ನನಗೆ ವಿಸ್ಮವಾಗಿಯೇ ಕಂಡವು. ನಾನೊಬ್ಬ ಮನೋ ವೈದ್ಯನಾದ್ದರಿಂದ ಕವಿ ತಿಮ್ಮರು ನನ್ನ ಕುರಿತು ಬರೆದ
ಒಂದು ಕವನ-
ಮನೋ ತಜ್ಞ
ನರ್ಮಲಾ ನಿರುಂಕುಶ ಪಂಚಭೂತಗಳಾ ತಿಕ್ಕಾಟದಿಂದ್ ಸಿಡಿದೆದ್ದ ಬೆಂಕಿಯ ಕಿಡಿ ಈ ಪುರಷನೋರ್ವ,
ಷಡ್ ಐಶ್ರ್ಯಗಳಿಂದ್ ಅಂಕುಶದಿಂದ ಪಂಚೇಂದ್ರಿಯಗಳ್ ತಿವಿದು ಬ್ರಮನಿರಿಸಿ ದಿಕ್ಕೆಟ್ಟಾ ಈ ಮನುಜಾ,
ಅಮವಾಸ್ಯೆಯ ಕತ್ತಲ ಒಳಗೆ ರ್ವಸ್ವವೆಂದು ನರ್ಲಿಪ್ತಾನಾದ ಇವನಿಗೆ,
ಹೊಂಗಿರಣ ಹೂ ಮಳೆಗೆರುವಾ, ಚಿತ್ತಾ ಅರ್ಥ ಉತ್ತಮರೆಲ್ಲರೊ ಈ ಮನೋ ತಜ್ಞರು, ಮನೋ ತಜ್ಞರು…………..
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

