ಮನಸು ಮೃದಂಗ
(ಲೇಖನಗಳ ಸಂಕಲನ)
ಸತ್ಯ-ಮಿಥ್ಯ
ಎಂ.ಬಿ.ಎ. ಎರಡನೇ ಸಮಿಸ್ಟರಿನಲ್ಲಿ ಓದುತ್ತಿದ್ದ ಸುಮಾರು ಇಪ್ಪತ್ತೊಂದು ವಯೋಮಾನದ ಸುಂದರ ವಿಧ್ಯಾರ್ಥಿನಿ ತನ್ನ ಭಾವಿ ಪತಿ ಜೊತೆಯಲ್ಲಿ ತನ್ನ ಮರಗುಳಿಗೆಗೆ ಸೂಕ್ತ ಪರಿಹಾರ ಸಿಗುವ ಭರವಸೆಯೊಂದಿಗೆ ನನ್ನ ಹತ್ತಿರ ಸಲಹೆಗೆ ಬಂದಿದ್ದಳು. ಮರೆಯುವಿಕೆಯ ಜೊತೆಯಲ್ಲೆ ನಿದ್ರಾಹೀನತೆ, ಗಮನ ಹಾಗು ಏಕಾಗ್ರತೆಗಳ ಕೊರತೆ, ಕೋಪ ಅಥವ ಸಿಟ್ಟು ಮತ್ತು ಮುನಿಸು, ಊಟ ಬಿಡುವುದು ಹಾಗು ಮಂಕು ಕವಿದ ವಾತವರಣಗಳ ಲಕ್ಷಣಗಳು ಕಾಣುತ್ತಿದ್ದವು.
ತನ್ನ ಭಾವಿ ಪತಿ ಆಗರ್ಭ ಶ್ರೀಮಂತ, ಈಕೆ ಕಡು ಬಡವರ ಮನೆಯಂದ ಬಂದಿರುವಂತವಳು. ಈಕೆ ಬುದ್ದಿವಂತೆಯಾದ್ದರಿಂದ ಅವಳ ಆರ್ಥಿಕ ಅವಲಂಬನೆ ಆತನ ಮೇಲೆ ಆದ್ದರಿಂದ ಈಕೆಗೆ ಅಂಗಲಾಚುವಿಕೆಯ ಗೀಳು ಅವಳ ಮನವನ್ನು ಕಾಡುತಿತ್ತು. ಮತ್ತು ಈ ಭಾವ ಯೋಚನೆಯ ಸಂಧಿಗ್ದ ಪರಸ್ಥಿತಿಯಿಂದ ಆಕೆಯನ್ನು ಖಿನ್ನತೆಗೆ ದೂಡಿತ್ತು. ಸ್ವಾಭಿಮಾನವೇ ಈ ಮನೋ ನ್ಯೂನತೆಗೆ ಕಾರಣವಾಗಿತ್ತೆನ್ನಬಹುದು. ಇದರಿಂದ ಉಂಟಾದ ಗೀಳಿನಿಂದ ತನ್ನ ಓದಿನ ಸಾಮರ್ಥ್ಯವನ್ನು ಕುಗ್ಗುವಂತೆ ಮಾಡಿತ್ತು.
ಅವಳ ನಕಾರಾತ್ಮಕ ನೆನಪುಗಳು ಹಾಗು ವ್ಯಕ್ತವಾಗದ ಭವಿಷ್ಯ ಅಥವ ಮುಂದಿನ ದೃಶ್ಯಾವಳಿಗಳ ಗೀಳುಗಳಿಗೆ ಆಕೆಯು ನನ್ನಲ್ಲಿಗೆ ಬರಲು ಕಾರಣವಾಗಿತ್ತು. ಆಕೆಗೆ ಸೂಕ್ತ ಔಷದೋಪಚಾರವನ್ನು ನೀಡಿ, ಆತ್ಮಸಮಾಲೋಚನೆ ಹಾಗು ಸಲಹೆಗಳಿಂದ ಕೆಲವು ತಿಂಗಳ ನಚಿತರ ಈಕೆ ಸರಿಯಾದಳು.
ಅವಳನ್ನು ನೆನಪಸಿಕೊಂಡಾಗಲೆಲ್ಲಾ “ಮಾನವನಿಗೆ ಚಿಂತನೆಗಳೆಷ್ಟು? ಎಂಬ ಪ್ರಶ್ನೆಯು ಗೀಳಾಗಿ ನನ್ನನ್ನು ಕಾಡತೊಡಗುತಿತ್ತು. ನನ್ನ ಪ್ರಕಾರ ಚಿಂತೆ ಎರೆಡು ವಿಧ.
“Man broods from the past, man worries about the future”
“ಮನುಷ್ಯ ಹಿಂದಿನದನ್ನು ನೆನಪಿಸಿ ತನ್ನ ಮನಸ್ಸನ್ನು ಘಾಸಿಗಳಿಸಿಕೊಳ್ಳುವುದು ಹಾಗು ಮುಂದಾಲೋಚಿಸಿ ಚಿಂತಿಸುವುದು”.
ಮಾನವ ತನ್ನ ವಿಶ್ವಮಾನ ಕಾಲದಲ್ಲಿ ನೆನಪಿನ ಅಸ್ಥಿತ್ವವನ್ನು ಕಂಡುಕೊಂಡರೂ ಆ ನೆನಪುಗಳಿಗೆ ಒದಗಿಸೊ ಸಾಕ್ಷ್ಯಗಳು ಪ್ರಾಮಾಣಿಕರಿಸಲು ಅಸಾಧ್ಯವಾದ್ದರಿಂದ ಸಾಪೇಕ್ಷವೇ ಹೊರತು ಸತ್ಯವಲ್ಲ. ಹೇಳಿದ ತರ್ಕ ಸಾಭೀತುಪಡಿಸುವುದರಲ್ಲಿ ನಾವು ಯಶಸ್ವಿಯಾಗದ ಪಕ್ಷದಲ್ಲಿ ನಮ್ಮ ನೆನಪುಗಳು ನಿರಾಧಾರ. ನಮ್ಮ ಮನಸ್ಸನ್ನು ಹಿಂಸಿಸುವ ಮತ್ತು ಆತಂಕ ಸೃಷ್ಠಿಸುವ ನೆನಪುಗಳು ಆಧಾರ ಹೀನವಾದ್ದರಿಂದ ವಿಶ್ಲೇಸಿಸುವ ವಾದ ಬರೀ ಔಪಚಾರಿಕವಷ್ಠೆ. ಅಂದರೆ ಮಾನವನಿಗೆ ಜೀವಿತ ನೆನಪುಗಳನ್ನು ಬಿಟ್ಟು ಆಧಾರವಿಲ್ಲದ ಯಾರೋ ತಿಳಿಸಿದ ಹಿಂದಿನ ವಿಷಯಗಳು ಆಥವ ನೆನಪುಗಳು (ಶಬ್ಧಾರ್ಥದಲ್ಲಿ ಅಲ್ಲಾ) ಇತಿಹಾಸವೆಂದಾಯಿತು. ಈ ಕಾರಣದಿಂದಾಗಿ ನೆನಪು ವ್ಯಕ್ತಿಯ ಜೀವಿತ ಸಮಯದಲ್ಲಿ ಮಾತ್ರ.

ಇದು ನಿಜವಾದರೆ ಇವನ ನೆನಪಿಗೆ ಅವನ ಆತ್ಮವೇ ಸಾಕ್ಷಿ, ಗೀಳಾದರೆ (ಮನಿಸ್ಸಿನ ಆತಂಕದೊಂದಿಗೆ) ಆ ನೆನಪು ಚಂಚಲತೆ ಹೊಂದಿ ಖಿನ್ನತೆಗೆ ತಿರಗುತ್ತದೆ. ಆದರೆ ಇಂದಿನ ನಿಕೃಷ್ಠ, ಬದಲಾದ ರಾಜಕೀಯ ಆಯಾಮಗಳಲ್ಲಿ ಅಸ್ಥಂಗತ ಕಾಲದ ನೆನಪುಗಳನ್ನು ಸ್ಮರಿಸಿ ಇಲ್ಲದ ಕ್ಷುಲ್ಲಕ ಕಾರಣಗಳನ್ನು ಹುಡುಕಿ ಅಂಧಃ ಧರ್ಮಗಳ ನಡುವೆ ಸಂಘರ್ಷ ಹುಟ್ಟುಹಾಕಿ ಹಿಂಸಾಪ್ರವೃತ್ತಿಗೆ ತಿರುಗಿಸಿ ಅಮಾಯಕರ ಜೀವ ತೆಗೆಯುತ್ತಿರುವುದು ತೀರ ಶೋಚನೀಯ.
ರಾಮ, ಕೃಷ್ಣ, ಏಸು, ಅಲ್ಲಾ, ಮೋಸಸ್ ಇದ್ದಾರೊ ಇಲ್ಲವೊ ನನಗಂತು ಗೊತ್ತಿಲ್ಲ, ನನಗೆ ಮಾತ್ರ ಮುತ್ತಾತನ ಮುತ್ತಾತರಿದ್ದರೆನ್ನುವುದು ಮಾತ್ರ ಗೊತ್ತು. ಗೊತ್ತಿಲ್ಲದ ಪಕ್ಷದಲ್ಲಿ ನನ್ನ ಜನ್ಮವಾದರು ಹೇಗಾದೀತು? ರಸಾಯನಿಕ ಶಾಸ್ತ್ರ ವಿಭಾಗದಲ್ಲಿ ಎರೆಡು ದ್ರವ್ಯಗಳನ್ನು ಬೆರಿಸಿದಾಗ ಉಂಟಾದ ಬಿಸಿ, ಹಬೆ ಮತ್ತು ಹೊಸ ಬಣ್ಣದ ದ್ರವ್ಯ ತಯಾರಾದ್ದರಿಂದ ಎರೆಡು ದ್ರವ್ಯಗಳು ಪರಸ್ಪರ ಬೆರೆತವೆಂಬದು ಎಷ್ಟು ಅನುಮಾನವೋ ಅಷ್ಠೇ ಸತ್ಯ.
ಹೀಗಾಗಿ ನಮ್ಮ ಇಂದಿನ ಪೀಳಿಗೆಯ ಜನ್ಮ ನಮ್ಮ ಹಿರಿಕರಿಂದೆನ್ನುವುದು ಸಹ ನೂರಕ್ಕೆ ನೂರರಷ್ಟು ಸತ್ಯ. ಈ ಸತ್ಯ ನಿಜವಾದರೆ ರಾಮ, ಕ್ರಿಷ್ಣ, ಏಸು, ಅಲ್ಲಾ, ಮೋಸಸ್ ಎಲ್ಲರೂ ಇದ್ದರೆಂಬುದು ಅಷ್ಠೇ ಸತ್ಯ. ಆದರೆ ಇವು ಇತಿಹಾಸ ಮತ್ತು ಅಸ್ಥಂಗತ. ಈ ಸಮಯದಲ್ಲಿ ನನ್ನ ಮುತ್ತಜ್ಜನ ಮುತ್ತಜ್ಜ ಹೇಗೆ ಇದ್ದ? ಹೇಗೆ ಬದುಕಿದ್ದ? ಹೇಗೆ ಹಣ ಸಂಪಾದನೆ ಮಾಡಿದ? ಎಷ್ಠು ಹೆಂಡತಿಯರಿದ್ದರು? ಯಾರನ್ನು ಸಾಯಿಸಿದ? ಯಾರನ್ನ ಬದುಕಿಸಿದ? ಇವುಗಳೆಲ್ಲವುದಕ್ಕೂ ಪುರಾವೆಗಳಾದರೂ ಏನು? ನನ್ನ ಈ ಸಿದ್ದಾಂತದ ಪ್ರಕಾರ ಬದುಕಿದ್ದಾಗಲೆ ನಮ್ಮ ನೆನಪುಗಳಿಗೆ ಸಾಕ್ಷಿಗಳನ್ನು ಒದಗಿಸದೇ ಇರುವ ನಾವು ಇನ್ನು ಇತಿಹಾಸಕ್ಕೆ ಯಾವ ಪುರಾವೆಗಳನ್ನು ಒದಗಿಸಲು ಸಾದ್ಯ? ಆದುದರಿಂದ ಅನುಮಾನವೇ ಆಥವ ಸಾಪೇಕ್ಷವೇ ಹೊರತು ಸತ್ಯವಲ್ಲ. ಸತ್ಯವಲ್ಲದ ನೆನಪುಗಳನ್ನು ನೆನೆದು ನಾವು ಜೀವ ಕೊಡುವುದರಲ್ಲಿ ಅರ್ಥವಿದೆಯೇ? ಇಂದಿನ ಸಾಮಾನ್ಯ ರೈತನಿಗೆ ಇದು ಬೇಕೇ? ಓದುಗರೆ, ಒಂದು ಮಾತ್ರ ಸತ್ಯ, ಅದು ಈ ಭೂಮಿ ತಾಯಿ. ಭೂಮಿ ತಾಯಿಯ ನೆರಳಿನಲ್ಲಿ ಬದುಕಿರುವ ನಾವು ಅದೇಷ್ಟು ಪುಣ್ಯ ಮಾಡಿದ್ದೇವೆ. ಈ ಸತ್ಯ ಅರಿತವನಿಗೆ ರಾಮ ಆಥವ ಅಲ್ಲಾಃದರೇನು. ನೆನಪುಗಳನ್ನು ಬದಿಗಿಟ್ಟು, ಇರುವುದನ್ನು ಯೋಚನೆ ಮಾಡಿದರೆ ಒಳಿತಲ್ಲವೇ?.
ಅಸ್ಥಂಗತವಾದ ಆಥವ ಕಳೆದು ಹೋದ ಸಾಕ್ಷ್ಯಗಳು ನೇಪತ್ಯವೇ ಹೊರತು ಸತ್ಯವಲ್ಲಾ. ಸಾಕ್ಷಿಗಳ ಕುರುಹುಗಳು ಇದ್ದರೂ ಅವು ಸಾಂದರ್ಭಿಕ ಚಿಹ್ನೆ ಅಥವ ಲಕ್ಷಣಗಳು ಅಷ್ಠೆ. ಆದುದರಿಂದ ಇವುಗಳು ಸತ್ಯವೆನಿಸಿಕೊಳ್ಳುವುದಿಲ್ಲ. ಕೃತಿ, ಗ್ರಂಥ, ಸಂಶೋದನೆಗಳು ಆಗಿ ಹೋಗಿರುವ ವಿಚಾರಗಳಿಗೆ ಸಾಕಷ್ಟು ಮಾಹಿತಿಗಳನ್ನು ಒದಿಗಿಸಿದರೂ ಪ್ರಮಾಣಿಕರಿಸಲು ಸಾದ್ಯವಾಗುವುದಿಲ್ಲ. ಆದುದರಿಂದಲೆ ಹಿಂದೆ ನಡೆದ ಅನಾಹುತಗಳನ್ನ ಸತ್ಯವೆನಿಸಿದರು ಅವುಗಳು ನನ್ನ ಪ್ರಕಾರ ಸಾಪೇಕ್ಷವೇ ( ( Law of Relativity).
ನಮ್ಮ ದೇಶ ಸಾಂಸ್ಕೃತಿಕ ಹಾಗು ಸುಸಂಸ್ಕೃತ ದೇಶ. ಈ ಕಾರಣದಿಂದಾಗಿ ನಮ್ಮ ಭಾವನೆಗಳೇ ಸತ್ಯ. ಈ ನಿಟ್ಟಿನಲ್ಲಿ ಇತ್ತೀಚೆಗಷ್ಠೇ ನಮ್ಮ ಸರ್ವೋಚ್ಚ ನ್ಯಾಯಲಯವು ತೀರ್ಪನ್ನು ನೀಡಿದೆ. ನಮ್ಮೊಳಗಿರುವ ಈ ಭಾವನೆಗಳನ್ನು ತೊರೆಯಲು ಕೆಲವು ಶತಕ ವರ್ಷಗಳೇ ಬೇಕಾಗುವುದೇನೊ? ನಮಗೆ ನಮ್ಮ ಜ್ಞಾನಾರ್ಜನೆಯೇ ಇದನ್ನು ಮರೆಸಲು ಸಾದ್ಯ. ನಮ್ಮ ದೇಶದ ಸಹಮನೋಭಾವನೆಗಳಿಗೆ ತದ್ವಿರುದ್ದವಾಗಿ ಎಡ ಮತ್ತು ಬಲ ಪಂಕ್ತಿಗಳ ಹೇಳಿಕೆಗಳು ಸತ್ಯಾಸತ್ಯತೆಗಳನ್ನು ಒಳಗೊಂಡಿದ್ದರೂ ಸಾಕ್ಷಿ ಆಧಾರಗಳು ಇಲ್ಲದೆ ಇರುವುದರಿಂದ ಅಸಂಖ್ಯಾತ ಜನರಲ್ಲಿ ಮಾನಸಿಕ ಭಾವನೆಗಳಿಗೆ ಅರಾಜಕತೆಯನ್ನು ಉಂಟುಮಾಡಿ ವಿಭಜಿಸಿವೆ. ಮತ್ತೆ ಎಲ್ಲರನ್ನು ಒಂದುಗೂಡಿಸಲು ನಮ್ಮ ಶೈಕ್ಷಣಿಕ ಪದ್ದತಿಗಳಲ್ಲಿ ನೀತಿ ಸಂಹಿತೆ ಒಳಗೊಂಡ ಪಠ್ಯಗಳು ಇದ್ದರೆ ಸಾಕು. ರಾಮನನ್ನು ತೆಗದು ಅಕ್ಬರ್ನನ್ನು ಹಾಕುವುದು, ಧ್ಯಾನ್ ಚಂದರನ್ನು ಬಿಟ್ಟು ಅನ್ಯ ರೀತಿ ಸಂಪಾದನೆಮಾಡಿ ಯುವ ಕ್ರಿಕೆಟ್ ಆಟಗಾರರನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸುವುದು ಅಸಮಂಜಸ ಅಲ್ಲವೇ?
ನಮ್ಮ ಈ ದೇಶದ ಸಂಸ್ಕೃತಿ ಅಚ್ಚಳಿಯದೇ ಇದ್ದರೆ ಒಳ್ಳೆಯದು. ಇದರ ಬೇರಿಗೆ ಕನ್ನ ಹಾಕ ತೊಡಗಿದರೆ ರೂಪು ರೇಖೆಗಳಿಲ್ಲದ ರಕ್ತ ಭೀಜಾಸುರರು ಹುಟ್ಟಿ ಕೊನೆಗೆ ಭಯೋತ್ಪಾದಕ ಸಂಘಟನೆಗಳು ಬೆಳದು ದೇಶದ ಹಿತಾಸಕ್ತಿ ಹಾಗು ದೇಶದ ಆಭಿವೃದ್ದಿಗಳು ಕುಂಠಿತಗೊಳ್ಳುವುದರಲ್ಲಿ ಅನುಮಾನವಿಲ್ಲ. ದೇಶದ ಯಾವುದೇ ಪ್ರಜಾಪ್ರಭುತ್ವವಾದಿಗಳಿಗೆ ಅಂಡಳೆಯವವರಗಳು ((followers) ಕಮ್ಮಿಯೇನಿಲ್ಲ.
ಈ ಹುಚ್ಚು ಅಭಿಮಾನಿಗಳು ಮತ್ತು ಅಂಧ ಅನುಯಾಯಿಗಳಿಂದ ದೇಶದ ಸುಭದ್ರತೆಗೆ ದಕ್ಕೆಯಾಗಬಹುದೇನೋ?. ಒಂದು ಪಂಕ್ತಿಯವರು ಇನ್ನೊಂದು ಪಂಕ್ತಿಯವರನ್ನು ನಿಂದಿಸಿದರೆ ದ್ವೇಶ, ದಳ್ಳುರಿ, ಕಿಚ್ಚುಗಳು ಬೆಳೆಯುತ್ತಾ ಹೋಗವುದು. ನಮ್ಮ ದುರಾದೃಷ್ಟವೇನೋ ಅರಿಯದು, ಒಂದು ಪಕ್ಷಕ್ಕೆ ಬೇಸತ್ತ ಜನ ಇನ್ನೊಂದು ಪಕ್ಷವನ್ನು ಆರಿಸಿದರೆ ಈ ಪಕ್ಷದವರು ನಾಯಿ ಬಾಲದಂತೆ ನೆಡದುಕೊಳ್ಳುವರು. ಒಂದು ಪಕ್ಷದ ಪ್ರಜಾ ಪ್ರಭುಗಳು ಜನ ಪರ ಕಾರ್ಯಕ್ರಮಗಳನ್ನು ಮತ್ತೆ ಆರಿಸಿ ಬಂದ ಪಕ್ಷದವರು ಆ ಕಾರ್ಯಕ್ರಮವನ್ನ ಕಿತ್ತೊಗೆಯುವರು.
ಇದರಿಂದ ನಾವು ನೀಡಿದ ಕರ (income tax ) ವೋಲೆ (waste) ಹೊರತು ಮತ್ತೇನಿಲ್ಲ. ನಮ್ಮ ಇತಿಹಾಸ ಪರಂಪರೆಗಳಿರಲಿ, ಆದರೆ ಧರ್ಮಾತೀತ ಡೋಂಗಿ ಸೋಗಲಾಡಿತನ ಬೇಡ. ಇಂದಿನ ಯುವಕರು ಬುದ್ದಿವಂತರು, ವಿಮರ್ಶಕರು ಮತ್ತು ವಿವೇಕಸ್ತರು, ಆದುದರಿಂದ ಇಂದಿನ ರಾಜಕಾರಿಣಿಗಳ ನಾಟಕಗಳು ಇನ್ನು ಮುಂದೆ ನಡೆಯುವುದಿಲೆನ್ನುವ ಮನೋಭಾವ ಮುಂದಿನ ರಾಜಕಾರಣಿಗಳಿಗೆ ಬರಲಿ. ಇನ್ನು ಮುಂದೆ ನಮ್ಮ ಜನ ಪ್ರತಿನಿಧಿಗಳು ದೇಶದ ಪ್ರಗತಿಗೆ ಪೂರಕವಾಗುವ ಯುವ ಪ್ರಜಾ ನಾಯಕರಿಗೆ ಬೆಂಬೆಲ ನೀಡಲಿ.
ಓದುಗರೆ ನೆನಪುಗಳು ಸತ್ಯ ಮತ್ತು ಮಿಥ್ಯೆಗಳ ನಡುವೆ ಇರುವುದರಿಂದ ಸತ್ಯವನ್ನೂ ನೆನೆಯದೆ, ಅಸತ್ಯವನ್ನೂ ತಿಳಿಯದೆ, ಬನ್ನಿ ನಾವೆಲ್ಲಾ ನಮ್ಮ ದೇಶವನ್ನು ಮಾದರಿ ಸಾಮ್ರಾಜ್ಯವನ್ನಾಗಿ ಮಾಡೋಣ!
The week that was not
The year that was not
The decade that was not
The YUGA that was not
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

