ಕೆ.ಆರ್.ಪೇಟೆ: ತಾಲ್ಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಹಿನ್ನಲೆ. ಮಾಕವಳ್ಳಿ ಡಾ ಬಿ.ಆರ್ ಅಂಬೇಡ್ಕರ್ ಯುವಕರ ಬಳಗದಿಂದ ಅರ್ಥಪೂರ್ಣವಾಗಿ ಜಯಂತಿ ಆಚರಣೆ ಮಾಡಲಾಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಗ್ರಾಮದ ಯುವ ಮುಖಂಡ ಸುನಿಲ್ ಸಣ್ಣಯ್ಯ ಅಂಬೇಡ್ಕರ್ ಒಂದು ಸಮುದಾಯಕ್ಕೆ ಮೀಸಲಾದವರಲ್ಲ. ಅವರು ಭಾರತದ ಸರ್ವ ಜನಾಂಗದ ಮಾಹನಾಯಕ.ದೇಶದ ಮಹಾನ ಶಕ್ತಿ ಅಂಬೇಡ್ಕರ್ ಆಗಿದ್ದರು. ವಿಶ್ವದ ಅತಿ ದೊಡ್ಡ ಸಂವಿಧಾನ ರಚಿಸುವ ಮೂಲಕ ಭಾರತೀಯರ ಬದುಕು ರೂಪಿಸಿದ ಮಹಾನ್ ನಾಯಕ ಅವರಾಗಿದ್ದಾರೆ.ಅಂಬೇಡ್ಕರ್ರ ಜೀವನ, ಆದರ್ಶ ನಮಗೆಲ್ಲರಿಗೂ ಮಾರ್ಗದರ್ಶನವಾಗಿದೆ. ಅದರಂತೆ ಅವರ ಹೋರಾಟವೇ ನಮಗೆ ಸ್ಫೂರ್ತಿ. ಭಾರತ ಇದೀಗ ಮುಂದುವರೆಯುತ್ತಿರುವುದು ಅವರ ಚಿಂತನೆಯ ಫಲವಾಗಿದ್ದು, ನಮ್ಮ ದೇಶವು ಸದಾ ಕಾಲ ಅವರಿಗೆ ಸ್ಮರಿಸಲಿದೆ. ಭಾರತದ ಪ್ರತಿಯೊಬ್ಬ ನಾಗರಿಕರ ಜೀವನ ರೂಪಿಸುವಲ್ಲಿ ಅವರ ಕೊಡುಗೆ ಸ್ಮರಣೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಎಂ.ಆರ್ ಮಂಜೇಗೌಡ,ಲಲಿತಮ್ಮ ಸಣ್ಣಯ್ಯ, ಮುಖಂಡರಾದ ಸುಬ್ಬಯ್ಯ, ಸಚಿನ್, ರಘು, ಚಲುವರಾಜು, ಚಂದನ್, ನಟೇಶ್, ಶ್ರೀನಿವಾಸ, ಉದಯ, ರೋಹಿತ್,ಗೀತಾ,ಸರಳ, ರಾಜಮ್ಮ, ಗಾಯಿತ್ರಿ, ಪ್ರೇಮಮ್ಮ, ಭಾಗ್ಯಮ್ಮ,ಸೇರಿದಂತೆ ಉಪಸ್ಥಿತರಿದ್ದರು.
– ಮನು ಮಾಕವಳ್ಳಿ ಕೆ ಆರ್ ಪೇಟೆ
