ಮನಸು ಮೃದಂಗ
(ಲೇಖನಗಳ ಸಂಕಲನ)
ಮನಸ್ಸು,ಧರ್ಮ ಹಾಗೂ ಸಾಹಿತ್ಯ
ಇಂದಿನ ಪೀಳಿಗೆ ಸಮಾನತೆಯನ್ನು ಹೊಂದಿ ಬುದ್ದಿವಂತರಾಗಿಯೇ ಇರುವರು. ಯಾರೂ ಸಹ ಅವರವರ ಮನೋ ನ್ಯೂನತೆಗಳನ್ನ (ತಪ್ಪುಗಳನ್ನ) ಸಾರಾಸಗಟಾಗಿ ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಸಾಮಾನ್ಯವಾಗಿ ಜನರು ಅವರವರ ಮಾನಸಿಕ ಅನ್ಯೂನತೆಗಳ ವಿರುದ್ದವಾಗಿಯೇ ನಡೆದುಕೊಳ್ಳುತ್ತಿರುತ್ತಾರೆ.
ನ್ಯೂನತೆಗಳನ್ನ ತೋರಿಸಿಕೊಟ್ಟವನಿಗೆ ಸಾವಿರ ಶಾಪ ಹಾಕಿ ಬೆವರನ್ನೇ ಹರಿಸಿ ಬಿಡುತ್ತಾರೆ. ಜ್ವರ, ಕೆಮ್ಮಿನವನು ಸೀದಾ ವೈಧ್ಯರ ಹತ್ತಿರ ಹೋಗಿ ಔಷದೋಪಚಾರ ಮಾಡಿಕೊಳ್ಳುವರು. ಆದರೆ ಮನೋ ರೋಗಿಯ ವಿಚಾರವೆ ವಿಭಿನ್ನ, ಅಂತವರು ನೇರವಾಗಿ ಮನೋ ವೈದ್ಯರಲ್ಲಿ ಹೋಗುವುದಕ್ಕೆ ಹಿಂಜರಿಯುವರು. ಅದಕ್ಕೆ ಕಾರಣಗಳು ಅನೇಕವಿದ್ದರೂ ಮೌಢತ್ವ, ತಾತ್ಸಾರ, ಅಜ್ಞಾನ, ಅವಿವೇಕ, ನಾಟಿ ಚಿಕಿತ್ಸಾ ಪದ್ದತಿ, ಭೂತಾರಾಧನೇ, ದೇವಾರಾದನೇ, ಅಪನಂಬಿಕೆಗಳು. ಇಂತಹ ಪರಿಸ್ಥಿತಿಗಳಲ್ಲಿ ಮುಗ್ದರು ತಮ್ಮ ಹಣವನ್ನು ವಿನಾಕಾರಣ ಚಿಕಿತ್ಸೆ ಅಲ್ಲದ ಚಿಕಿತ್ಸೆಗೆ ವ್ಯಯಮಾಡುವ ಉದಾಹರೆಣೆಗಳು ಅನೇಕರಲ್ಲಿ ಕಾಣಬಹುದಾಗಿದೆ.
ಈ ಸ್ಥಿತಿಯಲ್ಲಿ ಅಂತವರಿಗೆ ತಿಳುವಳಿಕೆ ಅತ್ಯಗತ್ಯ. ನಮ್ಮಲ್ಲಿ ಎಲ್ಲರೂ ಬುದ್ದಿವಂತರಾಗಿರುವದರಿಂದ ಯಾರು ಯಾರ ಮಾತನ್ನು ಕೇಳದವರಾಗಿದ್ದಾರೆ. ಈ ಕಾರಣದಿಂದಾಗಿ ಮಾಧ್ಯಮಗಳ ಮಾರ್ಗದರ್ಶನ ಅಗತ್ಯವಾಗಿದೆ. ಅವುಗಳಲ್ಲಿ ದೂರದರ್ಶನ, ದಿನ ಪತ್ರಿಕೆಗಳು ಹಾಗು ಪುಸ್ತಕಗಳು. ಅಂದರೆ ಜನಸಾಮನ್ಯನಿಗೆ ತಿಳುವಳಿಕೆ ಕೊಂಡೊಯ್ಯುವ ಕೆಲಸವನ್ನ ವೈದ್ಯರು ಮಾಡಬೇಕಾಗುವುದು. ಅನೇಕ ವೇಳೆ ವೈದ್ಯ ಬರಹಗಳು ಪಾಶ್ಚೀಮಾತ್ಯ ಪುಸ್ತಕಗಳ ಆಯಾ ಬಾಷೆಗಳಿಗೆ ತರ್ಜಮೆಗೆ ಒಳಗೊಂಡಿರುತ್ತದೆಯೇ ಹೊರತು ನಮ್ಮ ಧರ್ಮ ಹಾಗು ಸಂಸ್ಕೃತಿಗೆ ಒಳಗೊಂಡಿರುವುದಿಲ್ಲ. ಈ ಕಾರಣಕ್ಕಾಗಿಯೇ ವೈದ್ಯಕೀಯ ವೃತ್ತಿಯುಳ್ಳವರು ಸಾಹಿತ್ಯವನ್ನ ಪ್ರವೃತ್ತಿಯನ್ನಾಗಿಸಿಕೊಂಡರೆ ಒಳಿತೆಂಬ ಭಾವನೆ ನನ್ನದು. ಈ ತರಹದ ಕೃತಿಗಳನ್ನ ಓದಿದ ಜನರಿಗೆ ಸಹಾಯಕವಾಗವುದೆನ್ನೂ ಆಶಾವಾದ ನನ್ನದು. ಇದರಿಂದಾಗಿ ಸರಿಯಾದ ಚಿಕಿತ್ಸೆ ಫಲಿಸಿ ಅಂತವರ ಆರ್ಥಿಕ ಮುಗ್ಗಟ್ಟು ಸುಧಾರಿಸಬಹುದೆಂಬ ನಂಬಿಕೆ ನನಗಿದೆ.
ಗ್ರೀಕೂನಿಯನ್ನ ಉಲ್ಲೇಕಗಳು ನಮ್ಮ ಧರ್ಮ ಹಾಗು ಗ್ರಂಥಗಳಿಗೆ ಹೋಲಿಸದರೆ ಅಕ್ಷರಷಃ ಚೇತೊದಾಯಕ ಹಾಗು ಜ್ಞಾನಮಯಿ. ಬಹುಪಾಲು ನಮ್ಮ ಹಾಗೂ ಈರೋಪಿಯನ್ ತರ್ಕ ವಿನಿಮಯಗಳು ಒಂದೇ ತರಹವಿರುವುದು ಗಮನಾರ್ಹ. ಸಂಕ್ಷಿಪ್ತವಾಗಿ ಬುದ್ದಿ ಜೀವಿಗಳು, ತತ್ವ ಜ್ಞಾನಿಗಳು, ಅರ್ಥಶಾಸ್ತ್ರಜ್ಞರು, ತತ್ವ ಸಿಧ್ಧಾಂತಿಗಳು, ಸಾಮಾಜ, ಮನಸ್ಸು, ಕಾನೂನು ಹಾಗೂ ಪರಿಸರ ವಾದಿಗಳ ಕಡೆ ಗಮನವನ್ನು ಹರಿಸಿದಾಗ ಈ ತತ್ವವಾದಿಗಳನ್ನು ಮೂರು ವಿಭಾಗವಾಗಿ ವಿಂಗಡಿಸಬಹುದು.
ಅಂದರೆ
1 ಬುದ್ಧ ಜನಿಸದ ಮುಂಚೆ
2 ಬುದ್ಧನು ಜೀವಿಸುತ್ತಿದ್ದಾಗ
3 ಬುದ್ಧನು ಕಾಲವಾದನಂತರ
1.ಇಂದಿನ ‘ಉಪನಿಶತ್’ ಗ್ರಂಥಗಳು ಪ್ರಾಯಷಃ ಈ ಸಮಯಕ್ಕೆ ಸೇರಿರಬಹುದೆಂಬ ವಿಚಾರ ಎಲ್ಲರಿಗೂ ತಿಳಿದಿದೆ. ಈ ಅಘಾದವಾದ ಗ್ರಂಥ ಅನೇಕಾನೇಕ ಋಷಿ ಮುನಿಗಳ ಯೋಗ ದೃಷ್ಠಿಗಳಿಂದ ಬರೆದ ಕಾವ್ಯ ವಾಚನ, ಆಚರಣೆ, ಕರ್ಮ ಕಾರ್ಯ ವಿವರಣೆ, ಭಗವಂತನ ನೀತಿ ಆಧಾರಿತ ವಾಖ್ಯಾನಗಳು, ಹೀಗೆ ಹತ್ತಾರು ಬ್ರುಹತ್ ತತ್ವ ಗ್ರಂಥ ಮಾಲೆಯೆ ಈ ಉಪನಿಶತ್. ಈ ಗ್ರಂಥವನ್ನು ತಲತಲಾಂತರದಿಂದ ಸಾಧು ಸಂತರು ಹಾಗು ಗುರುರ್ಯರು ಮತ್ತು ಪಾಶ್ಚಿಮಾತ್ಯರು ಈ ಕೃತಿಗಳನ್ನ ಗೌರವಿಸಿ, ತಮ್ಮ ಭಾಷೆಗೆ ತರ್ಜುಮೆ ಮಾಡಿ ದಾರ್ಶಣೀಕರಸಿರುವರು.

ಈ ಗ್ರಂಥಗಳ ಮೂಲ ರಸ ರಾಗಗೆಳಂದರೆ ಮಾನವ ಧರ್ಮ, ಮನೋ ಧರ್ಮ, ಶರೀರಾ ಧರ್ಮ, ಸಮಾಜ ಧರ್ಮ, ಕೌಟುಂಬಿಕ ಧರ್ಮ, ಕಾನೂನಿನ ಧರ್ಮ ಹಾಗು ಭಗವಂತನ ಅಗೋಚರ ರೂಪ ರೇಷೆಗಳು. ಇವುಗಳೆಲ್ಲವುಗಳಿಗಿಂತಲು ಜ್ಞಾನ, ಧರ್ಮ ಹಾಗು ನಡವಳಿಕೆಗಳ ದಾರಿಗಳಿಗೆ ಒತ್ತು ಕೊಟ್ಟಿದೆ. ಆದ್ದರಿಂದ ಈ ಬ್ರಹುತ್ ಗ್ರಂಥವನ್ನ “ಬ್ರಹ್ಮ ಸೋತ್ರ” ವೆಂದೇ ಕರೆಯುವರು. ಈ ಗ್ರಂಥದ ಭಾಷೆ ಸಂಸ್ಕೃತದಲ್ಲಿ ಇದೆ. ಗ್ರಂಥವನ್ನು ವೇದವೆಂದು ಕರೆಯಲ್ಪಟ್ಟರೆ ಇದನ್ನು ಜ್ಞಾನಿಸುವುದು ವೇದಾಂತವೆಂದು ಹಾಗೂ ಅಧ್ಯಯನವನ್ನ ಮಾಡಿ ಅದರ ಜ್ಞಾನವನ್ನ ಸಂಪಾದಿಸಿದವನಿಗೆ ವೇದಾಂಥಿ ಎಂದು ಕರೆಯುವರು.
ಇಲ್ಲಿಯವರಿಗೂ ಮೌಢ್ಯವೇ ತುಂಬಿದೆ ಎನ್ನುವವರಿಗೇ ಇದರ ಸಾರಂಶವನು ವೈಜ್ಞಾನಿಕ ದೃಷ್ಠಿಯಿಂದ ತಿಳಿಸುವ ಪ್ರಯತ್ನಗಳು ನಡುಯುತ್ತಲೇ ಇವೆ. ಇಡೀ ಗ್ರಂಥ ಮೂಲ ತತ್ವ
ಜಗತ್ತಿನ ಶೃಷ್ಠಿ, ಜೀವ ಶೃಷ್ಠಿ, ಪಿಂಡಾಡ ಮತ್ತು ಬ್ರಹ್ಮಾಂಡಗಳ ನಡುವಿನ ಸಂಭಂದ, ಪುರುಷ ಹಾಗು ಪ್ರಕೃತಿಗಳ ನಡುವಿನ ಅನುಬಂಧಗಳು, ದೇವ ಶಕ್ತಿ, ದೇವರುಗಳ ಆಚರಣೆಯ ವಿವಿಧ ವಿಧಾನಗಳು, ಶರೀರ ಮತ್ತು ಮಾನಸಿಕ ಕಾಯಿಲೆಗಳಿಗೆ ಸಂಭಂದಪಟ್ಟಂತಾ ವಿಷಯಗಳು ಇತ್ಯಾದಿ.
ನನಗೆ ಈ ಸಮಗ್ರ ಗ್ರಂಥವನ್ನು ಪರಿಚಯಿಸಿಕೊಂಡಾಗ ಕಂಡ್ಡಿದ್ದು ಬ್ರಾಹ್ಮಣಶಾಹಿ( “ಶಾಹಿ” ಅಂದಾಕ್ಷಣ ದಭ್ಭಾಳಿಕೆ ಎನ್ನುವ ವಿಚಾರವಲ್ಲ. ಬ್ರಾಹ್ಮಣ ಅಂದರೆ ಕಲಿತಿರುವವನೆಂದು. ಅಂದು ತಿಳುವಳಿಕೆಗೆ ಸಮಯ ಅಭಾವವಿದ್ದು ಸಂಪಾದನೆಯಿಲ್ಲದೇ ತಿಳುವಳಿಕೆಯುಳ್ಳವನಿಗೆ ಹಣ ಹಾಗು ಧಾನ್ಯ, ಧಾನ ನೀಡುವಂತಹ ಪಧ್ಧತಿ ಇತ್ತು. ಕಾಲ ಕ್ರಮೇಣ ಇದೆ ಬ್ರಾಹ್ಮಣರು ವ್ಯವಹಾರ ಹಾಗು ವಾಣಿಜ್ಯ ರೂಪ ರೇಖೆಗಳನ್ನು ಪಡೆದುಕೊಂಡಾಗ ನಾಸ್ಥಿಕರು ಬ್ರಾಹ್ಮಣರನ್ನ ಬ್ರಾಹ್ಮಣಶಾಹಿಗಳೆಂದು ಕರೆದರು.) ಭಯಪ್ರಧಾನ (ಇಂದಿನ ತಾಂತ್ರಿಕ ಜೀವನದಲ್ಲಿ ಯಾರಿಗೂ ಭಯ ಒತ್ತಡಗಳನ್ನು ಕೊಡದೆ, ಒಳಗೆಯೆ ಅದಮಿಟ್ಟು ಅನೇಕ ಮಾನಸಿಕ ಸಮಸ್ಯೆಗಳಿಗೆ ಕಾರಣ ಕರ್ತರಾಗಿದ್ದೇವೆ. ಈ ಗ್ರಂಥ ಮಾಲಿಕೆಗಳಲ್ಲಿ ದೇವರ ಭಯವೊಂದಿದ್ದರೇ ಮನೋ ಚಂಚಲತೆಯನ್ನು ನಿಗ್ರಹಿಸಬಹುದು ಎನ್ನುವ ವಿಚಾರ ಋಷಿಮುನಿಗಳ ಅನಿಸಿಕೆಯೆಂದುಕೊಳ್ಳೊಣ), ಧಾತುವಿಗೆ ಮೆಲಪಂಕ್ತಿ (ಬ್ರಹ್ಮನ ನಿಜ ಸ್ವರೂಪದ ವಾಸ್ಥವ ಸ್ಥಿಥಿಯನ್ನು ಅಳೆಯಬೇಕಾದರೆ ಮಾನವನ ಮನಸ್ಸು ಅತ್ಯಗತ್ಯ.
ಈ ಹೇಳಿದ ಧಾತು ನರ್ವೀರ್ಯವಾದರೆ ಮಾನವನ ವಂಶವೆಲ್ಲಿ? ಇದರಿಂದಲೇ ಈ ಧಾತುವಿಗೆ ಮೊದಲನೆ ಅಧ್ಯತೆ ಇರಬಹುದೇನೊ?), ಮತ್ತು ಹೆಣ್ಣನ್ನು ಬಿಂಬಿಸಿರುವ ರೀತಿ (ಇಡೀ ವೇದ ಗ್ರಂಥಗಳು ಗುಡಾರ್ಥಗಳಿಂದ ಕೂಡಿರುವುದರಿಂದ ಸೋತ್ರಗಳನ್ನು ಓದಿದ ಅನೇಕ ಪ್ರಜ್ಞಾವಂತರಿಗೆ ಹೆಣ್ಣನ್ನು ಬೋಗವಸ್ತುವಿನಂತೆ ಬಿಂಬಿಸಿರುವದು ಇರಿಸು ಮುರುಸು ತಂದಿದೆ. ನನ್ನ ಅನಿಸಿಕೆ ಏನೇಂದರೆ ಹೆಣ್ಣನ್ನು ಭೋಗಿಸದೇ ಪುತ್ರನನ್ನು ಪಡೆಯದೆ ವಂಶೊಧ್ಧಾರವೆಲ್ಲಿ? ಮಾನವನ ವಂಶ ನರ್ವಂಶವಾಗೋಗಿಬಿಡುತ್ತದೆನ್ನುವ ಭಯ ಈ ಋಷಿರ್ಯರದ್ದು).
ವಿಷೆಶವೆಂದರೆ ಪಥಂಜಲಿಯ ಯೋಗ ಸೊತ್ರಗಲು ಮನಿಸ್ಸಿನ ಹತೊಟಿ, ಸ್ಥಿರತೆ ಹಾಗು ಪರಿವರ್ತನೆಗಳಿಗೆ ಮಾತ್ರ ಸಿಮಿತವಾಗಿರುವುದು. ಈ ಕಾರಣದಿಂದಾಗಿ ನಾನೊಬ್ಬ ಮನೋ ತಙ್ನನಾಗಿ ಪಥಂಜಲಿ ಋಷಿಯರನ್ನು ಮನೋ ಲೋಕದ ಪಿತಾಮಹವೆನ್ನುವೆನು. ಸಾಮನ್ಯವಾಗಿ ಪಾಶ್ವಾತ್ಯ ಮನೋ ವಿಙ್ನನಿಗಳು “ಸಿಗ್ಮಂಢ ಫ್ರಾಯ್ಡ” ರನ್ನು ಮನಿಸ್ಸಿನ ಪಿತಾಮಹನೆಂದು ಕರೆಯುವರು.

ಈ ವೇದಾಂತ ಬರಹಗಳಲ್ಲಿ ಬಗವಂತನು ಬ್ರಹ್ಮನೆಂದು, ನಾವುಗಳು ಅವನ ಕರುಣೆಯ ಕುಡಿಗೆಲುನ್ನೆನ್ನುವುದರ ಧೀರ್ಘ ಉಲ್ಲೇಕವಿದೆ. ಹಿಂದು ಸಿಧ್ಧಾಂತವಲ್ಲದೆ ಇತರೆ ಧರ್ಮಗಳಲ್ಲು ಸಹ ಬಗವಂತನೇ ಪ್ರಮುಕವೆನ್ನುವದನ್ನ ಅಥವ ಶ್ರೇಷ್ಠವೆಂಬುದಾಗಿ ತಿಳಿಯಬಹುದು. ಅವುಗಳು ಗ್ರೀಕ, ರೋಮನ್, ಹೀಬ್ರೋಸ್, ಕ್ರಿಶ್ಚಾಯಿನಿಟಿ ಮತ್ತು ಇಸ್ಲಾಮ್ ಧರ್ಮಗಳಾಗಿರುತ್ತವೆ. ಈ ಗ್ರಂಥಗಳಲ್ಲೊ ಸಹ ದೇವರು, ಜ್ಯೋತಿಷ್ಯ, ಘನ ಮತ್ತು ಘನತೀತ ಸೈಧ್ಧಾಂತ ಹಾಗು ತತ್ವಗಳನ್ನ ಅಳವಡಿಸಲಾಗಿದೆ.
2. ಬುಧ್ಧನ ಜೀವಿತ ಕಾಲದ ಸಮಯದಲ್ಲಿ ಇದ್ದ ಗ್ರೀಕ್ ದೇಶದ ಪೈತೊಗರಾಸ್ (570-495) ಅಂದು ಇಟಾಲಿ ದೇಶದಲ್ಲಿ ಜೀವಸುತ್ತಿದ್ದ ಸಮಯದಲ್ಲಿ ಅವನ ಆತ್ಮದ ಮರು ಹುಟ್ಟುವಿನ ವಿಚಾರವನ್ನ ಮಂಡಿಸಲು ಪ್ರಯತ್ನಸಿದಾಗ ಇತನನ್ನು ಇಟಾಲಿ ರಾಜನು ಬಂದಸಿ ವಿಚಾರಣಗೆ ಓಳಪಟ್ಟಿಸದ್ದರೆನ್ನುವದು ಇತಿಹಾಸವೇ ಸರಿ. ಪೈತೊಗರಾಸ್ ಸಿದ್ದಾಂತಕ್ಕೆ ಓಳಪಟ್ಟ ಅನೇಕ ತತ್ವ ವಿಙ್ಙಣಿಗಳು ಅತೀ ಮಾನುಷ ಶಕ್ತಿ, ದೈವ ಪ್ರಭಾವ, ಮನಸ್ಸಿನ ಅರಿವು ಹಾಗು ಆ ವಿಚಾರ ಕುರತಂತೆ ತರ್ಕ ವಿನಮಯಗಳನ್ನ ಉಳ್ಳೆಕಿಸಿದ್ದಾರೆ. ಇವತ್ತಿಗೊ ಇವರ ಗಣಿತ ಮತ್ತು ಸಂಗೀತ ತತ್ವ ಸಿದ್ದಾಂತಗಳು ಪ್ರಚಲಿತ.
ವಿಶ್ವ, ಗ್ರಹ ಹಾಗೂ ಬೋಮಿಯ ಬೆಸುಗೆಗಳನ್ನು ಸಂಗೀತ ನಾದವೇ ಎಂದು ಪ್ರತಿಪಾದಿಸದ್ದರೆನ್ನುವ ಬರಹಗಳು ಇಂದೀಗೊ ಕಗೋಳ ಶಾಸ್ತ್ರದಲ್ಲಿ ಪ್ರಸ್ಥುತ. ಇವರ ತತ್ವಗಳನನ್ನ ಜಢವೆಂದು ಘೋಷಿಸಿ ಮರಿತಿದ್ದವರಿಗೆ ಮರುಜೀವ ಆಥವ ಸಂಜೀವಿನಿಯನ್ನ ನೀಡಿದ್ದು ಇತ್ತೀಚನ ಕೆಪ್ಲರ್ ತತ್ವ ಜ್ಞಾನಿ, ಅದರಲ್ಲೂ ಗಣಿತ ಮತ್ತು ಮಾನವನ ಸಂಬಂಧ ಕುರಿತಾದ ತತ್ವ ಸಿದ್ದಾಂತಗಳು.
ನಾಡ ಹಾಡು
ಜಯ ಕರ್ನಾಟಕ ಜಯ ಕರ್ನಾಟಕ ಜಯ ಜಯ ಕರ್ನಾಟಕ
ನಮ್ಮ ನಾಡ ಮಕ್ಕಳೆ
ರನ್ನ ಗೊಡ ಮಕ್ಕಳೆ
ಏಳಿ ಏಳಿ ಎದ್ದೇಳಿ
ನಮ್ಮ ನಾಡ ಸಂಪತ್ತಿಗೆ
ನಿಮ್ಮ ಮಿಡಿ ಆಪತ್ತೀಗೆ
ಏಳಿ ಏಳಿ ಎದ್ದೇಳಿ
ಬೆಳಿಸೋಣ ಬನ್ನೀರೊ
ನಮ್ಮ ತನದ ಸಿರಿಯನು
ಉಳಿಸೋಣ ಬನ್ನೀರೊ
ಪರರಿಗೋಗುವೆ ಫಲವನು
ಕಾಧ್ಯ ಮಸ್ತಿ ಮಜಾ ತ್ಯಜಿಸಿ
ಬೆಳೆಸ ಬನ್ನಿ ನಾಡ ಹೆಸರು
ಮಧ್ಯ ಮಾಂಸ ಮೋಜು ತೊರೆದು
ಉಳಿಸ ಬನ್ನಿ ನಾಡ ಹಸಿರು
ಕಿನ್ನತೆಯಾ ಬದಿಗಿಟ್ಟು
ವ್ಯಸನಗಳ ದೋರವಿಟ್ಟು
ನಾಡ ಶಕ್ತಿ ಕಟ್ಟಲು…….
ನೀ ಬನ್ನೀ ಎಲ್ಲರು……
ನಮ್ಮ ನಾಡ ಯುವಕರೇ….
ಜಯ ಕರ್ನಾಟಕ ಜಯ ಕರ್ನಾಟಕ ಜಯ ಜಯ ಕರ್ನಾಟಕ……
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

