ಬೆಂಗಳೂರು, ಮೇ 05: ಕರ್ನಾಟಕ ಒಳಮೀಸಲಾತಿ ಜಾತಿ ಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಒಳಮೀಸಲಾತಿ ಬಗ್ಗೆ ನಿಖರವಾದ ವರದಿ ಕೊಡಲು ಆಯೋಗ ರಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಮಾಜಕಲ್ಯಾಣ ಸಚಿವ ಹೆಚ್ಸಿ ಮಹದೇವಪ್ಪ (), ಕಾಂತರಾಜು ವರದಿಗೂ ಈ ಸಮೀಕ್ಷೆಗೂ ಸಂಬಂಧ ಇಲ್ಲ. ಇದು ಪರಿಶಿಷ್ಟಜಾತಿ ಸಮುದಾಯಕ್ಕೆ ಮಾಡುತ್ತಿರುವ ಸಮೀಕ್ಷೆ ಎಂದು ಅವರು ಹೇಳಿದ್ದಾರೆ.
ಎಸ್ಸಿ ಒಳ ಮೀಸಲಾತಿ ಸಂಬಂಧ ಇಂದಿನಿಂದ ಸಮೀಕ್ಷೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಚಿವ ಹೆಚ್ಸಿ ಮಹದೇವಪ್ಪ, ಇದು ಎಸ್ಸಿ ಅವರಿಗೆ ಮಾತ್ರ ಈ ಸಮೀಕ್ಷೆ. ಇದು ಎಂಪರಿಕಲ್ ಡಾಟಾ ಕಲೆಕ್ಟ್ ಮಾಡುವುದು ಅಷ್ಟೇ. ಈ ಸಮೀಕ್ಷೆಗೆ ಎಡಗೈ ಮತ್ತು ಬಲಗೈನವರ ಒಮ್ಮತ ಇದೆ. ಯಾರು ಕೂಡ ಸುಳ್ಳು ಹೇಳೋಕೆ ಆಗಲ್ಲ ಎಂದಿದ್ದಾರೆ.

[…] […]