ಕೆ.ಆರ್.ಪೇಟೆ,ಜೂ.22: ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ನಿಗಮಗಳನ್ನು ಹಾಗೂ ಕೆಪಿಟಿಸಿಎಲ್ ಇಲಾಖೆಯನ್ನು ಖಾಸಗೀಕರಣ ಮಾಡಬಾರದು. ಸರ್ಕಾರಿ ಸ್ವಾಮ್ಯದಲ್ಲಿಯೇ ಮುಂದುವರೆಸಬೇಕು. ವಿದ್ಯುತ್ ಇಲಾಖೆಯು ಸೇವಾ ಕ್ಷೇತ್ರವಾಗಿದ್ದು ಸಾರ್ವಜನಿಕರಿಗೆ ಪ್ರತಿನಿತ್ಯ ಉಪಯುಕ್ತ ಸಂಸ್ಥೆಯಾಗಿದ್ದು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ತಾಲ್ಲೂಕು ಕೆಪಿಟಿಸಿಎಲ್ ನೌಕರರ ಯೂನಿಯನ್ ಹಾಗೂ ಚೆಸ್ಕಾಂ ಸಂಸ್ಥೆಯ ನೂರಾರು ನೌಕರರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿ ತಹಸೀಲ್ದಾರ್ ಅವರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೆ.ಪಿ.ಟಿ.ಸಿ.ಎಲ್. ಕೆ.ಆರ್.ಪೇಟೆ ಉಪವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸನ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ.ಪುಟ್ಟಸ್ವಾಮಿಗೌಡ, ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಕೆಪಿಟಿಸಿಎಲ್ ಎಇಇ ಶಂಕರ್, ಪ್ರವೀಣ್ಕುಮಾರ್, ಪವನ್ಕುಮಾರ್, ಟಿ.ಜಿ.ತಿಮ್ಮಪ್ಪ, ಲೆಕ್ಕಾಧಿಕಾರಿ ಮಹೇಶ್ಚಂದ್ರು, ಶಿವಕುಮಾರ್, ಸುನಿಲ್ಕುಮಾರ್, ನೌಕರರ ಯೂನಿಯನ್ ಕೇಂದ್ರ ಸಮಿತಿ ಸದಸ್ಯ ಕೆ.ಮಧಸೂಧನ್, ಕೆಪಿಟಿಸಿಎಲ್ ನೌಕರರ ಯೂನಿಯನ್-659 ತಾಲ್ಲೂಕು ಸಮಿತಿ ಅಧ್ಯಕ್ಷ ಹೆಚ್.ಸಿ.ಶಿವಶಂಕರಮೂರ್ತಿ, ಉಪಾಧ್ಯಕ್ಷ ಆರ್.ಹರ್ಷಿತ್, ಕಾರ್ಯದರ್ಶಿ ಅನಿಲ್, ಸಹ ಕಾರ್ಯದರ್ಶಿ ಹೆಚ್.ಎಲ್.ಅರುಣ್, ಖಜಾಂಚಿ ಟಿ.ಡಿ.ಪರಮೇಶ್, ನಿರ್ದೇಶಕರುಗಳಾದ ಡಿ.ಎಮ್.ಹರೀಶ್, ಕಿರಣ್.ಎಂ.ಡಿ, ಕೆ.ಕೆ.ಮಹೇಶ್, ಟಿ.ಸ್ವಾಮೀಗೌಡ, ಎನ್.ರಮ್ಯಾ, ಹೆಚ್.ಬಿ.ಲಕ್ಷಿö್ಮ ಮತ್ತಿತರರ ನೇತೃತ್ವದಲ್ಲಿ ಪಟ್ಟಣದ ಚೆಸ್ಕಾಂ ವಿಭಾಗೀಯ ಕಚೇರಿಯ ಆವರಣದಿಂದ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿದ ನೂರಾರು ವಿದ್ಯುತ್ ನೌಕರರು, ಇಂಜಿನಿರ್ಸ್, ಯೂನಿಯನ್ ಪದಾಧಿಕಾರಿಗಳು ಕೇಂದ್ರ ಸರ್ಕಾರವು ಯಾವುದೇ ಕಾರಣಕ್ಕೂ ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸಬಾರದು.

ಖಾಸಗೀಕರಣ ಮಾಡಿದರೆ ನೇರವಾಗಿ ರೈತರಿಗೆ ತೀವ್ರ ತೊಂದರೆಯಾಗಲಿದೆ. ರೈತರ ಕೃಷಿ ಪಂಪ್ಸೆಟ್ಗಳಿಗೆ ಸಿಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯ ಬಂದ್ ಆಗಲಿದೆ. ವಿದ್ಯುತ್ ಸಂಪರ್ಕಕ್ಕೆ ಮೊಬೈಲ್ ಗಳಿಗೆ ಪ್ರೀಪೇಯ್ಡ್ ಮಾದರಿ ಹಣ ಪಾವತಿ ಮಾಡಿಸಿಕೊಂಡು ಸ್ಮಾರ್ಟ್ ಮೀಟರ್ಗಳನ್ನು ಪಡೆದುಕೊಳ್ಳಬೇಕಾಗುತ್ತದೆ ಆಗ ಮೊಬೈಲ್ ಕರೆನ್ಸಿ ಮಾದರಿಯಲ್ಲಿ ಸ್ಮಾರ್ಟ್ ಮೀಟರ್ನಲ್ಲಿ ಹಣ ಖಾಲಿಯಾದರೆ ರಾತ್ರಿಯಾದರೂ ಸಹ ವಿದ್ಯುತ್ ಸಂಪರ್ಕ ತಾನಾಗಿಯೇ ಬಂದ್ ಆಗಲಿದೆ. ಆಗ ಜನ ಸಾಮಾನ್ಯರು ತೀವ್ರ ತೊಂದರೆಗೆ ಸಿಲುಕಬೇಕಾಗುತ್ತದೆ.

ಕಾರ್ಪೋರೇಟ್ ಸಂಸ್ಥೆಗಳಿಗೆ ವಿದ್ಯುತ್ ಸಂಸ್ಥೆಯನ್ನು ವಹಿಸಿದರೆ ರೈತರು ಪ್ರತಿಭಟನೆ ಮಾಡುವಂತಿಲ್ಲ. ನೌಕರರು ಯೂನಿಯನ್ ಮಾಡಿಕೊಂಡು ಪ್ರತಿಭಟನೆ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಸರ್ಕಾರವು ಎಲ್ಲಾ ಬಗೆಯ ಸಾರ್ವಜನಿಕರಿಗೆ ಅತೀ ಅಗತ್ಯ ಸೇವಾ ಸಂಸ್ಥೆಯಾಗಿರುವ ವಿದ್ಯುತ್ ಇಲಾಖೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಸರ್ಕಾರಿ ಸ್ವಾಮ್ಯದಲ್ಲಿಯೇ ಮುಂದುವರೆಸಬೇಕು ಎಂದು ಪ್ರತಿಭಟನಾನಿರತ ನೌಕರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದರು.

ಈಗಾಗಲೇ ಖಾಸಗಿ ಸಂಸ್ಥೆಯಾದ ಟಾಟಾ ಪವರ್ ಕಂಪನಿ ಲಿಮಿಟೆಡ್ (ಖಿಅPಐ) ನಮ್ಮ ರಾಜ್ಯದ 5 ಎಸ್ಕಾಂಗಳ ವ್ಯಾಪ್ತಿಯ ಪ್ರಮುಖ 19 ಜಿಲ್ಲೆಗಳ ವಿದ್ಯುತ್ ವಿತರಣೆ ಮಾಡಲು ಸಮಾಂತರ ಪರವಾನಗಿ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ (ಕೆ.ಇ.ಆರ್.ಸಿ) ಅರ್ಜಿ ಸಲ್ಲಿಸಿರುತ್ತದೆ.
ಈ ಅರ್ಜಿಯು ಸಾರ್ವಜನಿಕರು, ರೈತರು ಹಾಗೂ ವಿದ್ಯುತ್ ನೌಕರರ ಹಿತಾಸಕ್ತಿಗೆ ಸಂಪೂರ್ಣವಾಗಿ ವಿರುದ್ದವಾದ ಅರ್ಜಿಯಾಗಿರುತ್ತದೆ ಎಂದ ಅಸಮಧಾನ ವ್ಯಕ್ತಪಡಿಸಿ ಕೂಡಲೇ ಟಾಟಾ ಪವರ್ ಕಂಪನಿಯು ತಮ್ಮ ಅರ್ಜಿಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯ ಮಾಡಿದರು.
ವಿದ್ಯುಚ್ಛಕ್ತಿ ಕಾಯ್ದೆ ನಿಯಮಗಳ (ಸೆಕ್ಷನ್-14) ಪ್ರಕಾರ 20030 ಸಮಾಂತರವಾಗಿ ವಿದ್ಯುತ್ ಸರಬರಾಜು ಮಾಡಲು ಖಾಸಗಿ ಕಂಪನಿಗಳು ತಮ್ಮದೇ ಆದ ಸ್ವಂತ ವಿತರಣಾ ಜಾಲಾ ಮತ್ತು ಮೂಲ ಸೌಕರ್ಯವನ್ನು ಹೊಂದಿರಬೇಕು. ಆದರೆ ಈ ಕಂಪನಿಯು ಸಾರ್ವಜನಿಕ ಹಣದಿಂದ ದಶಕಗಳ ಕಾಲ ನಿರ್ಮಾಣವಾಗಿ ಸದ್ಯ ಚಾಲ್ತಿಯಲ್ಲಿರುವ ಎಸ್ಕಾಂಗಳ ವಿದ್ಯುತ್ ಮೂಲಸೌಕರ್ಯ ಮತ್ತು ಜಾಲವನ್ನೇ ಹಂಚಿಕೊಳ್ಳಲು ಉದ್ದೇಶಿಸಿದೆ.
ಸಾರ್ವಜನಿಕ ಆಸ್ತಿಯನ್ನು ಖಾಸಗೀಯವರ ಲಾಭಕ್ಕೆ ಬಳಸಲು ಬಿಡುವುದು ಕಾನೂನು ಬಾಹಿರ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ ಕ್ರಮವಾಗಿದೆ ಹಾಗೂ ಖಾಸಗೀಕರಣದಿಂದಾಗಿ ನೌಕರರ ಉದ್ಯೋಗ ಭದ್ರತೆಗೂ ದಕ್ಕೆಯುಂಟಾಗಲಿದೆ. ಹಾಗಾಗಿ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ನೌಕರರ ಸಂಘದ ಪದಾಧಿಕಾರಿಗಳು ಮತ್ತು ನೌಕರರು ಎಲ್ಲಾ ಎಸ್ಕಾಂಗಳ ಖಾಸಗೀಕರಣಕ್ಕೆ ಸಂಬಂಧಿಸಿದ ವರದಿಗಳು ಹಾಗೂ ಪ್ರಸ್ತಾವನೆಗಳ ಬಗ್ಗೆ ನಮ್ಮ ಗಂಭೀರ ಕಳವಳವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕೆ.ಪಿ.ಟಿ.ಸಿಎಲ್ ಇಂಜಿನಿಯರ್ ನವೀನ್ಕುಮಾರ್, ಸುನಿಲ್ಕುಮಾರ್, ಶಿವರಾಂ, ಸುಭಾಂಕ್, ಹರೀಶ್ಕುಮಾರ್, ರವೀಂದ್ರಕುಮಾರ್, ಭಾಸ್ಕರ್, ಜಗದೀಶ್, ಶ್ರೀಕಾಂತ್, ಗಜೇಂದ್ರ, ಕೆ.ಎನ್.ಮಂಜುನಾಥ್, ಕಾವ್ಯಶ್ರೀ, ಕೆ.ಎನ್.ಅರುಣ್ ಕುಮಾರ್, ಎ.ಬಿ.ಗಿರೀಶ್, ರವಿಕುಮಾರ್, ರಘುರಾಂ, ಲಕ್ಕಪ್ಪ, ಟಿ.ಸ್ವಾಮಿ, ಚಂದ್ರು, ಜಯಪಾಲ್, ಸಂತೋಷ್, ಆನಂದಕುಮಾರ್, ಬಿ.ಆರ್.ಪುಟ್ಟಪ್ಪ, ಮಹಿಳಾ ಯೂನಿಯನ್ ಪದಾಧಿಕಾರಿಗಳಾದ ರುಕ್ಮಿಣಿ, ಗೀತಾ, ಪವಿತ್ರ, ಸವಿತ, ವರಲಕ್ಷ್ಮಿ, ರಾಜಸುಲೋಚನ, ಕರುಣಾ, ಲಕ್ಷ್ಮೀದೇವಿ, ಮಾಲಾ ಸೇರಿದಂತೆ ನೂರಾರು, ಚೆಸ್ಕಾಂ ಹಾಗೂ ಕೆಪಿಟಿಸಿಎಲ್ ನೌಕರರು ಹಾಗೂ ರೈತ ಸಂಘದ ಮುಖಂಡರು, ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಭಾಗವಹಸಿದ್ದರು.
ಪ್ರತಿಭಟನೆಯ ನಂತರ ತಹಸೀಲ್ದಾರ್ ಡಾ.ಎಸ್.ಯು. ಅಶೋಕ್ ಅವರಿಗೆ ಮನವಿ ಸಲ್ಲಿಸಿದರು.
– ಶ್ರೀನಿವಾಸ್ ಆರ್.
