ಆಲೂರು: ಗುಡುಗು-ಮಿಂಚಿನ ನಡುವೆ ಬಿದ್ದ ಭೀಕರ ಸಿಡಿಲ ಬಡಿತಕ್ಕೆ ಎರಡು ಹಸುಗಳನ್ನು ಬಲಿ ಪಡೆದಿರುವ ಘಟನೆ ತಾಲೂಕಿನ ಕುಂದೂರು ಹೋಬಳಿ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ .
ಹೊನ್ನೇನಹಳ್ಳಿ ಗ್ರಾಮದ ನಿವಾಸಿಯಾದ ಕೇಶವ ಬಿನ್ ಚೆನ್ನಯ್ಯನವರಿಗೆ ಸೇರಿದ ಹಸುಗಳು ಈ ದುರ್ಘಟನೆಯಲ್ಲಿ ಸಾವಿಗೀಡಾಗಿವೆ.
ಮನೆಯ ಸಮೀಪದ ಮರದ ಕೆಳಗೆ ಕಟ್ಟಲಾಗಿದ್ದ ಹಸುಗಳ ಮೇಲೆ ಏಕಾಏಕಿ ಸಿಡಿಲು ಬಡಿದ ಪರಿಣಾಮವಾಗಿ, ಎರಡೂ ಹಸುಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.ಮೃತ ಹಸುಗಳ ಒಟ್ಟುಅಂದಾಜು ಮೌಲ್ಯ ಸುಮಾರು ಒಂದು ಲಕ್ಷ ರೂಪಾಯಿಗೂ ಹೆಚ್ಚು ಎನ್ನಲಾಗಿದೆ.

ಘಟನೆ ಬಳಿಕ ರೈತ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ. ಮಳೆಗಾಲದ ಆರಂಭದಲ್ಲೇ ಇಂತಹ ಅವಘಡ ಸಂಭವಿಸಿರುವುದು ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದ್ದು ಇಂತಹ ಅವಘಡಗಳು ಮತ್ತೆ ಸಂಭವಿಸದಂತೆ ಧನ ಕರುಗಳ ಮೇಲೆ ಹಾಗೂ ತಮ್ಮ ಜೀವದ ಮೇಲೆ ರೈತರು ಮುನ್ನೇಚ್ಚರಿಕೆ ಕ್ರಮ ವಹಿಸಬೇಕಾಗಿದೆ..
ಕೊಡಲೇ ವಿಷಯ ತಿಳಿದ ಈ ರಾಜಸ್ವ ನಿರೀಕ್ಷಕರಾದ ಸಂತೋಷ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
