ಚನ್ನರಾಯಪಟ್ಟಣ: ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಗಡಿ ಭಾಗದಲ್ಲಿರುವ ತೊಳಸಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮವು ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹಾಗೂ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಟಿ. ಮಂಜು ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು.
ಜೆಡಿಎಸ್ ಮುಖಂಡ ಡೈರಿ ಲೋಕೇಶ್ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಹೂವಿನ ಸುರಿಮಳೆ ಸುರಿಸಿ ಗಣ್ಯರನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, “ನಿಮ್ಮ ಕ್ಷೇತ್ರದ ಶಾಸಕರನ್ನು ಗಟ್ಟಿಯಾಗಿ ಬೆಂಬಲಿಸಿ, ಯಾವುದೇ ಕಾರಣಕ್ಕೂ ಹೆಚ್.ಟಿ. ಮಂಜಣ್ಣ ಅವರ ಕೈ ಬಿಡಬೇಡಿ,” ಎಂದು ಕರೆ ನೀಡಿದರು. ಇದೇ ವೇಳೆ 2028ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಟಿ. ಮಂಜು ಅವರೇ ಅಭ್ಯರ್ಥಿಯಾಗುವ ಕುರಿತು ಪರೋಕ್ಷ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವಕ್ಕೆ ಮೆರುಗು ತಂದರು. ಗ್ರಾಮಸ್ಥರಾದ ಅಂಗಡಿ ಸ್ವಾಮಿಣ್ಣ, ಅಂಗಡಿ ನಿಂಗರಾಜೇಗೌಡ, ಟಿ.ಎನ್. ರಮೇಶ್, ನೇತ್ರಾವತಿ ಚಂದ್ರೇಗೌಡ, ಚಿಕ್ಕತರಹಳ್ಳಿ ಮರಿಯಪ್ಪ, ಈರೇಗೌಡ, ನಿಂಗರಾಜ್, ಸುದೀಪ್, ಸತೀಶ್, ರೋಹಿತ್, ಅಶ್ವತ್, ರಮೇಶ್, ಆಕಾಶ್, ಅವಿನಾಶ್, ಅಭಿಲಾಶ್, ಜೀವನ್ ಸೇರಿದಂತೆ ಅನೇಕರು ಹಾಜರಿದ್ದರು.
– ಮಂಜುನಾಥ್ ಐ.ಕೆ
