ಕೆ.ಆರ್.ಪೇಟೆ: ಭಾರತದ ಪ್ರತಿಯೊಬ್ಬ ಪ್ರಜೆಯ ಸಮಾನ ಹಕ್ಕುಗಳಿಗೆ ಹೋರಾಟ ಮಾಡಿದ ಅಂಬೇಡ್ಕರ್ ಅವರು ಒಂದೇ ಸಮುದಾಯಕ್ಕೆ ಸೀಮಿತರಾದವರಲ್ಲ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದಲ್ಲಿ ಕರ್ನಾಟಕ ಸಂವಿಧಾನ ಸೇನೆ ಮತ್ತು ಡಾ: ಬಿ.ಆರ್ ಅಂಬೇಡ್ಕರ್ ಸ್ತ್ರೀ ಸಂಘ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 135 ನೇ ಜನ್ಮ ಜಯಂತೋತ್ಸವ ಹಾಗೂ ಅಂಬೇಡ್ಕರ್ ಸ್ತ್ರೀ ಶಕ್ತಿ ಸಂಘ ನಾಮ ಫಲಕ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಇಡೀ ರಾಷ್ಟ್ರದ ಆಸ್ತಿ.ಅವರ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳನ್ನು ದೊರಕಿಸಿಕೊಟ್ಟ ಮಹಾನ್ ಮಾನವತಾವಾದಿ. ಮಾಕವಳ್ಳಿ ಯುವಜನತೆ ಮೈಗೂಡಿಸಿಕೊಂಡು ಮಹಾನ್ ನಾಯಕರ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಂಘಟಿತರಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುತ್ತಿರುವುದು ನಿಜಕ್ಕೂ ಶ್ಲಾಘನಿಯ ಎಂದರು.

ಪುರಸಭಾ ಸದಸ್ಯ ಡಿ.ಪ್ರೇಮ್ ಕುಮಾರ್ ಮಾತನಾಡಿ ಜಾತ್ಯತೀತ ಚಿಂತನೆಯ ಈ ದೇಶದಲ್ಲಿ ದಲಿತರ ಸ್ಥಿತಿ ಇಂದಿಗೂ ಉತ್ತಮವಾಗಿಲ್ಲ. ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಸಂವಿಧಾನದಲ್ಲಿ ಅವಕಾಶ ಸಿಕ್ಕಿದೆ. ಆಡಳಿತದ ಸಾಕಷ್ಟು ಲೋಪಗಳಿಂದ ದಲಿತರ ಏಳಿಗೆ ಸಾಧ್ಯವಾಗದಂತಹ ಸ್ಥಿತಿ ಇದೆ. ದಲಿತರು ಶಿಕ್ಷಣ ಕಲಿಕೆಯತ್ತ ಹೆಚ್ಚು ಆಸಕ್ತರಾಗಬೇಕಿದೆ ಎಂದ ಅವರು ದಲಿತರು ಹಕ್ಕಿನ ಕುರಿತು ಪ್ರಜ್ಞೆ ಬೆಳೆಸಿಕೊಳ್ಳಬೇಕು.ದಲಿತರ ಶೋಷಣೆ ಇಂದಿಗೂ ನಿಂತಿಲ್ಲ. ಅನೇಕ ಕಾನೂನುಗಳು ದಲಿತರ ರಕ್ಷಣೆಗೆ ಇದ್ದರೂ ಆಡಳಿತದ ನಿರ್ಲಕ್ಷ್ಯದಿಂದಾಗಿ ಜಾರಿಯಲ್ಲಿ ತೊಡಕು ಉಂಟಾಗಿದೆ. ಹೋರಾಟ, ಶಿಕ್ಷಣದಿಂದ ದಲಿತರು ರಕ್ಷಣೆ ಪಡೆದುಕೊಳ್ಳಬೇಕು ಎಂದರು.

ಬಳಿಕ ಪ್ರಧಾನ ಭಾಷಣಕಾರರಾಗಿ ಮಾತನಾಡಿದ ತಾಲ್ಲೂಕು ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹೆಚ್.ಆರ್ ಯೋಗೇಶ್, ಡಾ.ಬಾಬಾಸಾಹೇಬರು ಅಪ್ರತಿಮ ವಿದ್ವಾಂಸರಾಗಿದ್ದರು. ಅರ್ಥಶಾಸ್ತ್ರ, ಕಾನೂನು ಶಾಸ್ತ್ರ, ಸಮಾಜಶಾಸ್ತ್ರ, ವಿದೇಶಾಂಗ ನೀತಿ ಮುಂತಾದ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದರು. ಮರಾಠಿ, ಇಂಗ್ಲೀಷ, ಫ್ರೆಂಚ, ಜರ್ಮನಿ ಮುಂತಾದ ಭಾಷೆಗಳಲ್ಲಿ ಮಾತನಾಡುತ್ತಿದ್ದರು. ಸಮುದಾಯದವರು ಎಲ್ಲ ಧರ್ಮಿಯರೊಂದಿಗೆ ಬೆರೆತು ಜೀವನ ಸಾಗಿಸಬೇಕು.ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಮಹತ್ವದ ಗಮನ ನೀಡಬೇಕು. ಅಂದಾಗ ಡಾ.ಅಂಬೇಡ್ಕರ ಕನಸು ಸಾರ್ಥಕವಾಗುತ್ತದೆ.ಡಾ.ಅಂಬೇಡ್ಕರವರು ದೇಶ ಪ್ರೇಮಿಗಳಾಗಿದ್ದರು. ಭಾರತೀಯ ಸಂವಿಧಾನ ಅಖಂಡ ಭಾರತಕ್ಕೆ ಸಂಬಂಧಿಸಿದೆ. ಅವರು ಯಾವುದೇ ವರ್ಗವನ್ನು ಪ್ರೇರೆಪಿಸಲಿಲ್ಲ. ಆದರೆ ಸ್ವಾತಂತ್ರ್ಯದ ಜತೆಗೆ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕu ಹಕ್ಕುಗಳು ಎಲ್ಲರಿಗೂ ದೊರಕಬೇಕು ಎಂಬ ಗುರಿ ಉದ್ದೇಶ ಹೊಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಅವರು ಹಿಂದು ಧರ್ಮ ಬಿಟ್ಟು ಸರಳವಾದ ಬೌದ್ದ ಧರ್ಮ ಸ್ವೀಕರಿಸಿ ಸಮಾನತೆ ಚಿಂತನೆಯಲ್ಲಿ ತೊಡಗಿದರು ಎಂದರು.

ಕ.ಸಂ.ಸೇನೆ ರಾಜ್ಯಧ್ಯಕ್ಷ ಹೆಚ್.ಎಸ್ ನರಸಿಂಹಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಮಾಕವಳ್ಳಿ ಡಾ:ಬಿ.ಆರ್. ಅಂಬೇಡ್ಕರ್ ಸ್ತ್ರೀ ಶಕ್ತಿ ಸಂಘ ನಾಮ ಫಲಕ ಉದ್ಘಾಟಿಸಿ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕ.ಸಂ.ಸೇನೆ ರಾಜ್ಯಧ್ಯಕ್ಷ ಹೆಚ್ ಎಸ್ ನರಸಿಂಹ ಮೂರ್ತಿ ,ಉಪನ್ಯಾಸಕ ಕರುಣಾನಿಧಿ, ಪುರಸಭೆ ಸದಸ್ಯ ಡಿ.ಪ್ರೇಮ್ ಕುಮಾರ್,ಗ್ರಾ.ಪಂ ಅಧ್ಯಕ್ಷೆ ಲಲಿತಮ್ಮ ಸಣ್ಣಯ್ಯ,ಸದಸ್ಯ ಎಂ ಆರ್ ಮಂಜುನಾಥ್, ಡೈರಿ ಅಧ್ಯಕ್ಷ ರವಿ,ಮಾಜಿ ಅಧ್ಯಕ್ಷ ಪತ್ರಕರ್ತ ರವಿ, ಗ್ರಾ.ಪಂ ಮಾಜಿ ಅಧ್ಯಕ್ಷ ಬರಾಮೇಗೌಡ, ಮಂಜೇಗೌಡ,ಪಟೇಲ್ ಯೋಗೇಶ್, ರೈತ ಸಂಘ ರವಿ,ಶಿಕ್ಷಕರಾದ ಕುಮಾರ್, ಸುರೇಶ ಚಂದ್ರು,ಲೋಕೇಶ್,ಶ್ರೀಧರ್ ಯೋಧ ಚಲುವಯ್ಯ,ಮಾಕವಳ್ಳಿ ಜವರಯ್ಯ,ಜಾಣಯ್ಯ,ಮಾಕವಳ್ಳಿ, ಜವಾನ್ ಜವರಯ್ಯ,ರಮೇಶ್,ಸುನಿಲ್ ಸಣ್ಣಯ್ಯ,ಸುನಿಲ್ ಸಣ್ಣಯ್ಯ,ಬಿ.ಎಸ್.ಪಿ ತಾಲ್ಲೂಕು ಕಾರ್ಯದರ್ಶಿ ಗಂಗಾಧರ್, ಗುರುರಂಗ, ಗೋಪಾಲ ಕೃಷ್ಣ, ಪ್ರೊ ಲೋಕೇಶ್, ಕುಮಾರ್, ಗ್ರಾಮ ಹಿರಿಯ ಮುಖಂಡ ರಾಮೇಗೌಡ,ದೇವರಸೆಗೌಡ, ಪೂಜಾರಿ ರಾಮಣ್ಣ,ಅರುಣ್, ನಟೇಶ್, ಮೋಹನ್, ರಘು, ಉಮೇಶ್, ಚಂದನ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
