ತುಮಕೂರು:”ಸಂಪತ್ತಿ ಗಿಂತ ಜ್ಞಾನಕ್ಕೆ ಆದ್ಯತೆ ನೀಡಿ ಏಕೆಂದರೆ ಒಂದು ಕ್ಷಣಿಕ ಇನ್ನೊಂದು ಶಾಶ್ವತ” ಎಂಬ ಗ್ರೀಕ್ ನ ಶ್ರೇಷ್ಠ ದಾರ್ಶನಿಕ ಸಾಕ್ರೆಟಿಸ್ ಮಾತಿನಂತೆ ವಿದ್ಯಾರ್ಥಿಗಳು ವಿದ್ಯಾಬ್ಯಾಸದ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು.
ತುಮಕೂರು ವಿಶ್ವವಿದ್ಯಾನಿಲಯದ 2024-25 ನೇ ಸಾಲಿನಲ್ಲಿ ನಮ್ಮ ಕಾಲೇಜಿಗೆ 5 ರ್ಯಾಂಕುಗಳು ಬಂದಿವೆ. ಸೌಮ್ಯ ಜಿ.ಪಿ.ರವರು .ಬಿ.ಬಿ.ಎ ನಲ್ಲಿ ಎರಡನೇ ರ್ಯಾಂಕು ಪಡೆದಿರುತ್ತಾರೆ, ಧೀರಜ್ ಎಂ ರವರು 4ನೇ ರ್ಯಾಂಕು ಹಾಗೂ ಚಂದನ ಎಸ್ ಎನ್ ರವರು ಐದನೇ ರ್ಯಾಂಕು ಪಡೆದಿರುತ್ತಾರೆ ಬಿ ಎಸ್ ಸಿ ವಿಭಾಗದಲ್ಲಿ ರಿಹಾ ಅಂಜುಮ್ ರವರು ಐದನೇ ರ್ಯಾಂಕುಸಾಯಿ ವಲ್ಲಭ ಪಿ ನಾಯಕ್ 6ನೇ ರ್ಯಾಂಕು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುತ್ತಾರೆ ರ್ಯಾಂಕು ಪಡೆದ ವಿದ್ಯಾರ್ಥಿಗಳನ್ನು ಶ್ರೀಮಠದಲ್ಲಿ ಪರಮಪೂಜ್ಯರಾದ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಸನ್ಮಾನಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ ಆರ್.ರೇವಣಸಿದ್ದಪ್ಪ ರವರು, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪದ್ಮಜ.ವೈ. ಎಂ., ಐ.ಕ್ಯೂ.ಎ.ಸಿ ಸಂಯೋಜಕರಾದ ಪ್ರೊ. ಹೆಚ್.ಜಿ.ಸರ್ವಮಂಗಳ, ಪ್ರೊ.ನಯನ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಪ್ರೊ.ಉದಯ್ ಕುಮಾರ್.ಎಮ್. ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
– ಚಂದ್ರಚೂಡ ಕೆ.ಬಿ.
