ಚನ್ನರಾಯಪಟ್ಟಣ: ಶ್ರವಣಬೆಳಗೊಳ ಮಂಡಲ ಭಾರತೀಯ ಜನತಾ ಪಾರ್ಟಿ ಮಹಿಳಾ ಘಟಕದ ವತಿಯಿಂದ ಶೇ.33ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ವಿರೋಧಿಸಿದ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಮಹಿಳಾ ವಿರೋಧಿ ಧೋರಣೆಯನ್ನು ಖಂಡಿಸಿ ನಗರದಲ್ಲಿನ ಕೆ.ಆರ್. ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಮಹಿಳೆಯರಿಗೆ ರಾಜಕೀಯದಲ್ಲಿ ಸಮರ್ಪಕ ಪ್ರತಿನಿಧಿತ್ವ ಒದಗಿಸುವ ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿರುವುದು ದುಃಖಕರ ಸಂಗತಿ ಎಂದು ಆರೋಪಿಸಿದರು. ಮಹಿಳಾ ಸಬಲೀಕರಣದ ಮಾತುಗಳನ್ನು ಮಾಡುವ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ನಡೆ ದ್ವಂದ್ವವ್ಯವಸ್ಥೆಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಈ ಪ್ರತಿಭಟನೆಯಲ್ಲಿ ಬಿಜೆಪಿ ಶ್ರವಣಬೆಳಗೊಳ ಮಂಡಳದ ಅಧ್ಯಕ್ಷ ಪರಮ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಗನ್ನಿ ವಿಶ್ವನಾಥ್ ಜಿ.ಆರ್., ಮಹಿಳಾ ಘಟಕದ ಪದಾಧಿಕಾರಿಗಳಾದ ಶ್ರುತಿಗಿರೀಶ್, ಅರ್ಪಿತಾ ಪಟೇಲ್, ಕಲಾವತಿ, ಭವಾನಿ, ಶೋಭ, ತಾಲೂಕು ಬಿಜೆಪಿ ಉಪಾಧ್ಯಕ್ಷರಾದ ಅಶೋಕ್ ಶೆಟ್ಟಿಹಳ್ಳಿ, ಸತೀಶ್ ಗೌಡಗೆರೆ, ವೆಂಕಟೇಶಚಾರ್, ಶ್ರೀಹರಿಗೌಡ, ಮಂಜುನಾಥ್ ನಿಂಬೆಹಳ್ಳಿ, ಹಿರಿಯ ಮುಖಂಡರಾದ ನಂಜುಂಡ ಮೈಮ್, ಎ.ಆರ್. ನಾಗರಾಜ್, ಯುವ ಮುಖಂಡ ವೈ.ಇ. ಶರತ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
