ಕೆ.ಆರ್.ಪೇಟೆ: ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಕ್ರೀಡೆಗಳು ಸಾಮರಸ್ಯಕ್ಕೆ ವೇದಿಕೆಯಾಗಿದ್ದು,ಜಾತಿ,ಮತ, ಪಂಥದ ಭೇದವಿಲ್ಲದೇ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಕ್ರೀಡೆಗಿದೆ ಎಂದು ಉದ್ಯಮಿ ಹೊಸಹೊಳಲು ನಂಜುಂಡಸ್ವಾಮಿ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸ್ಟೇಡಿಯಂ ಬಾಯ್ಸ್ ವತಿಯಿಂದ ಏರ್ಪಡಿಸಿದ ಧರ್ಮಧ್ವಜ ಕಪ್ ಕ್ರಿಕೆಟ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಕ್ರೀಡೆಗಳಲ್ಲಿ ಜಾತಿ ಮತವಿಲ್ಲದೆ ಯುವಕರ ಪ್ರತಿಭೆ ಗುರುತಿಸುವ ವೇದಿಕೆಯಾಗಿದೆ. ಕ್ರೀಡೆಯು ಸಕಾರಾತ್ಮಕತೆಯ ಮಾನಸಿಕತೆಯೊಂದಿಗೆ ದೈಹಿಕ ಶಕ್ತಿಯನ್ನು ತುಂಬುತ್ತದೆ ಹುಮ್ಮಸ್ಸಿನಿಂದ ಜೀವನ ನಡೆಸಲು ಕ್ರೀಡೆ ಸಹಕಾರಿಯಾಗಿದೆ. ಕ್ರೀಡಾಪಟುಗಳು ಸೋಲು ಗೆಲುವಿನ ಲೆಕ್ಕಾಚಾರ ಹಾಕುವ ಬದಲು ಕ್ರೀಡಾ ಸ್ಫೂರ್ತಿಯೊಂದಿಗೆ ಭಾಗವಹಿಸಬೇಕು.

ಪಟ್ಟಣದಲ್ಲಿ ಹಲವು ಕ್ರಿಕೆಟ್ ಆಟಗಳನ್ನು ನಿಯೋಜನೆ ಮಾಡುತ್ತಿದ್ದು ಅಪ್ಪಟ ಕ್ರೀಡಾ ಪ್ರತಿಭೆಗಳು ಹೊರಬಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದೆ ಈ ಟೂರ್ನಿಯ ಉದ್ದೇಶ ಎಂದು ನಾವು ಭಾವಿಸಿದೇನೆ ಎಂದ ಅವರು ಕ್ರೀಡಾಪಟುಗಳು ಕ್ರೀಡೆಯನ್ನು ಸವಾಲಾಗಿ ಸ್ವೀಕರಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿ.ಕ್ರೀಡೆಗಳಿಂದ ಸ್ಪರ್ಧಾ ಮನೋಭಾವ ಮೂಡುತ್ತದೆ. ವಿದ್ಯಾರ್ಥಿಗಳು ಓದಿಗಷ್ಟೇ ಸೀಮಿತವಾದರೆ ಮಾನಸಿಕ ಒತ್ತಡ ಹೆಚ್ಚುತ್ತದೆ.ಕ್ರೀಡೆಗಳಲ್ಲಿ ಭಾಗವಹಿಸಿದರೆ ಒತ್ತಡ ನಿವಾರಣೆಯಾಗುತ್ತದೆ. ಆದ್ದರಿಂದ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು ಎಂದು ಉದ್ಯಮಿ ಹೊಸಹೊಳಲು ನಂಜುಂಡ ಸಲಹೆ ನೀಡಿದರು
ಉದ್ಯಮಿ ನಂಜುಂಡಸ್ವಾಮಿ ಅವರನ್ನ ಧರ್ಮದ್ವಜ ಯುವ ಬಳಗದ ಯುವಕರು ಪಟ್ಟಣದ ಟಿ.ಬಿ ವೃತ್ತದಿಂದ ತಾಲ್ಲೂಕು ಕ್ರೀಡಾಂಗಣದ ತನಕ ಬೈಕ್ ರ್ಯಾಲಿ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ವಿಘ್ನೇಶ್ವರ್, ವೆಂಕಟೇಶ್, ಶಶಿ, ರಕ್ಷಿತ್, ಶ್ರೀಧರ್, ಇಮ್ರಾನ್, ಅಣ್ಣಾಮಲೈ, ರವಿ ರಫೀಕ್, ಸೇರಿದಂತೆ ಸ್ಟೇಡಿಯಂ ಬಾಯ್ಸ್ ಯುವಕರ ಬಳಗದ ಯುವಕರು ಇದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
