ಚನ್ನರಾಯಪಟ್ಟಣ: ಪಟ್ಟಣದ ಕೃಷ್ಣರಾಜೇಂದ್ರ ಒಡೆಯರ್ ಸರ್ಕಲ್ ಹತ್ತಿರದಿಂದ ಮೆರವಣಿಗೆಯು ಹೊರಟು 40 ಅಡಿ ಆಂಜನೇಯ ದೇವಸ್ಥಾನದ ಮಾರ್ಗವಾಗಿ ತಾಲೂಕು ಕಚೇರಿ ಹತ್ತಿರ ತಲುಪಿದರು. ಬಿಜೆಪಿ ಮುಖಂಡ ಚಿದಾನಂದ ಮಾತನಾಡಿ ಪ್ರಧಾನಮಂತ್ರಿ ಮೋದಿ ಅವರು ಬಡವರ ಹಾಗೂ ಮಧ್ಯಮ ವರ್ಗದರವರಿಗೆ ದಸರಾ ಹಾಗೂ ದೀಪಾವಳಿ ಹಬ್ಬದ ಉಡುಗೊರೆಯಾಗಿ ಇಡೀ ದೇಶದಾದ್ಯಂತ ಸಾರ್ವಜನಿಕರು ಪ್ರತಿನಿತ್ಯ ಬಳಸುವ ದಿನ ನಿತ್ಯೋಪಯೋಗಿ ವಸ್ತುಗಳ ಮೇಲೆ ಜಿಎಸ್ಟಿ ಟ್ಯಾಕ್ಸ್ ಕಡಿಮೆ ಮಾಡಿರುವುದು ತುಂಬಾ ಸಂತೋಷ ಉಂಟು ಮಾಡಿದೆ ಎಂದರು. ಕೇಂದ್ರ ಸರ್ಕಾರ ಜಿಎಸ್ಟಿ ಕಡಿಮೆ ಮಾಡಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಗಂಗಾಧರ್,
ಬಿಜೆಪಿ ಮುಖಂಡರಾದ ಚಿದಾನಂದ್ , ತಾಲೂಕು ಪ್ರಧಾನ ಕಾರ್ಯದರ್ಶಿ ಧರಣೇಶ್,ಬಿಜೆಪಿ ಮುಖಂಡರುಗಳಾದ ನಂಜುಂಡಮೈಮ್, ಕೆರೆ ಬೀದಿ ಜಗದೀಶ್, ರಂಗೇಗೌಡ,ವಿಶ್ವನಾಥ್, ಶೆಟ್ಟಿಹಳ್ಳಿಅಶೋಕ್,ಮಂಜುನಾಥ್ ಗುಂಡಶೆಟ್ಟಿಹಳ್ಳಿ,ರೂಪೇಶ್, ಶಾಂತರಾಜ್,ಆನಂದ್,ಚೇತನ್,ಸಂಜಯ್,ಸಾಗರ್, ಭರತ್, ಮಂಜು ಗೂರನಹಳ್ಳಿ, ಸೇರಿದಂತೆ ಇತರರು ಹಾಜರಿದ್ದರು.


[…] […]