ಉಡುಪಿ: ಮಧುಮೇಹ ರೋಗಿಗಳಲ್ಲಿ ಪಾದದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಅಂಗಚ್ಛೇದನ ಸೇರಿದಂತೆ ಗಂಭೀರ ತೊಂದರೆಗಳನ್ನು ತಡೆಗಟ್ಟುವ ಉದ್ದೇಶದಿಂದ ಉಚಿತ ಮಧುಮೇಹ ಪಾದ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ಎಸ್ಡಿಎಂ), ಕುತ್ಪಾಡಿ ಉಡುಪಿ ಇದರ ಶಲ್ಯತಂತ್ರ ವಿಭಾಗವು PRIAS (Podiatry Reach Across India for Awareness and Screening) ಸಂಸ್ಥೆಯ ಸಹಯೋಗದಲ್ಲಿ ಈ ಶಿಬಿರವನ್ನು ಹಮ್ಮಿಕೊಂಡಿದೆ.
ಮೇ 20 ಮತ್ತು ಮೇ 23ರಂದು ನಡೆಯಲಿರುವ ಈ ಶಿಬಿರದಲ್ಲಿ ಮಧುಮೇಹದಿಂದ ಉಂಟಾಗುವ ನರ ಸಂವೇದನೆ ಕುಂಠಿತತೆ, ರಕ್ತಪ್ರವಾಹ ಅಡಚಣೆ ಹಾಗೂ ಪಾದದ ಒತ್ತಡ ಸಮಸ್ಯೆಗಳನ್ನು ಆಧುನಿಕ ತಂತ್ರಜ್ಞಾನಗಳ ಮೂಲಕ ಪರೀಕ್ಷಿಸಲಾಗುತ್ತದೆ.
ಶಿಬಿರದಲ್ಲಿ ಪಾದದ ನರ ಸಂವೇದನೆ (Neuropathy) ಪರೀಕ್ಷೆ, ABI ಪರೀಕ್ಷೆ ಹಾಗೂ ಕಾಲೋಸಿಟಿ/ಕಾರ್ನ್ ಉಂಟಾಗುವ ಅಪಾಯಗಳ ಪತ್ತೆ ಸೇರಿದಂತೆ ಪ್ರಮುಖ ತಪಾಸಣೆಗಳನ್ನು ನಡೆಸಲಾಗುತ್ತದೆ.
ಮಧುಮೇಹ ರೋಗಿಗಳಲ್ಲಿ ಪಾದದ ಹುಣ್ಣು ಹಾಗೂ ಅಂಗಚ್ಛೇದನದ ಅಪಾಯವನ್ನು ಕಡಿಮೆ ಮಾಡುವಲ್ಲಿ ಈ ಶಿಬಿರ ಮಹತ್ವದ ಪಾತ್ರ ವಹಿಸಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಶಿಬಿರವು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಎಸ್ಡಿಎಂ ಆಯುರ್ವೇದ ಆಸ್ಪತ್ರೆ, ಕುತ್ಪಾಡಿಯ ಬೋರ್ಡ್ ರೂಮ್ನಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ: 0820-2520623 / 98454 07543 ಸಂಪರ್ಕಿಸಬಹುದು.
