ಆಲೂರು : ಕಳೆದ ಆರೇಳು ವರ್ಷಗಳಿಂದ ಆಲೂರು ತಾಲ್ಲೂಕಿನಲ್ಲಿ ಸರಕಾರಿ ಶಾಲೆಗಳ ಸಬಲೀಕರಣದಲ್ಲಿ ಹಂಜಳಿಗೆ ಮಂಜುನಾಥರ ಕೊಡುಗೆ ಅಪಾರವಾಗಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ. ಎಂ. ವರದರಾಜು ಅಭಿಪ್ರಾಯಪಟ್ಟರು.
ಅವರು ಆಲೂರು ತಾಲ್ಲೂಕು ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಂಜಳಿಗೆ ಕಾಳಿಂಗಪ್ಪ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಹಂಜಳಿಗೆ ಮಂಜುನಾಥ್ರವರು ಕಳೆದ ಆರೇಳು ವರ್ಷಗಳಿಂದ ಆಲೂರು ತಾಲ್ಲೂಕಿನ ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ತಾಲ್ಲೂಕಿನ ಉಚಿತ ನೋಟ್ ಪುಸ್ತಕಗಳ ಕೊಡುಗೆ, ಉಚಿತ ಬ್ಯಾಗ್ ವಿತರಣೆ, ಗ್ರೀನ್ ಬೋರ್ಡ್ಗಳ ವಿತರಣೆ ಹಾಗೂ ಕಂಪ್ಯೂಟರ್ ಆಧಾರಿತ ಸ್ಮಾರ್ಟ್ ಕ್ಲಾಸ್ಗಳ ನಿರ್ಮಾಣ ಹೀಗೆ ಹಲವು ರೀತಿಯ ಕೊಡುಗೆಗಳನ್ನು ನೀಡಿದ್ದಾರೆ. ಸರಕಾರ ಉಚಿತವಾಗಿ ನೀಡುವ ಪಠ್ಯಪುಸ್ತಕ, ಸಮವಸ್ತç, ಶೂ-ಸಾಕ್ಸ್, ಅಕ್ಷರ ದಾಸೋಹ, ಕ್ಷೀರಭಾಗ್ಯ, ವಿದ್ಯಾರ್ಥಿವೇತನ ಹೀಗೆ ಹಲವಾರು ಯೋಜನೆಗಳಿಗೆ ಪೂರಕಾದ ಕೆಲಸಗಳನ್ನು ಹಂಜಳಿಗೆ ಮಂಜುನಾಥ್ರವರು ಮಾಡುತ್ತಾ ಬಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್, ವಾಟೆಹೊಳೆ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ರಾವ್, ಹಂಜಳಿಗೆ ಕಾಳಿಂಗಪ್ಪ ವೆಲ್ಫೇರ್ ಅಸೋಷಿಯೇಶನ್ ಸದಸ್ಯರುಗಳಾದ ರವಿಕುಮಾರ್, ರಿಚರ್ಡ್ ಹಾಗೂ ತಾಳೂರು ಶಾಲೆಯ ಶಿಕ್ಷಕಿ ವಿ. ರವಿತ, ಎ.ಎಸ್.ರೇಖಾ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.
