ಹಾಸನ : ಕ್ರೀಡಾಪಟುಗಳಿಗೆ ಶಿಸ್ತು ಸಹನೆ ಮತ್ತು ಸಂಯಮ ಇರಬೇಕಾಗುತ್ತದೆ. ನಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ಕ್ರೀಡಾ ಚಟುವಟಿಕೆಗಳು ನೀಡುತ್ತವೆ ಎಂದು ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಮರೇಂದ್ರ ಅವರು ದಿನಾಂಕ 30 -4 -2026 ರಂದು ಮಲೆನಾಡು ಆಟದ ಮೈದಾನದಲ್ಲಿ ನಡೆದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಕನಿಷ್ಠ ಒಂದು ಕ್ರೀಡಾಕೂಟದಲ್ಲಾದರೂ ಭಾಗವಹಿಸಬೇಕು. ಕ್ರೀಡಾಕೂಟಗಳಲ್ಲಿ ಸೋಲು, ಗೆಲುವು ಮುಖ್ಯವಲ್ಲ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇಂತಹ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕೆಂದರು. ಇತ್ತೀಚೆಗೆ ಕ್ರಿಕೆಟ್,ಪುಟ್ಬಾಲ್, ಹಾಕಿ, ಕಬ್ಬಡಿ,ಕೊಕ್ಕೋ, ಆಟಗಳು ಜನಪ್ರಿಯ ಕ್ರೀಡೆಗಳಾಗಿವೆ. ನಾವುಗಳು ಕ್ರಿಯಾಶೀಲರಾಗಬೇಕಾದರೆ ಆರೋಗ್ಯದಿಂದಿರಬೇಕಾದರೆ ಆಟೋಟ ಸ್ಪರ್ಧೆಗಳಲ್ಲಿ, ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಅತಿ ಮುಖ್ಯವಾಗಿದೆ ಎಂದರು. ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಕ್ಲಬ್ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಸಂತೋಷಕರವಾಗಿದೆ ಎಂದರು.

ಪ್ರತಿ ವರ್ಷವು ನಮ್ಮ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಿ ಗೆದ್ದಂತಹ ವಿದ್ಯಾರ್ಥಿಗಳಿಗೆ ಸೂಕ್ತ ಬಹುಮಾನವನ್ನು ಹಾಗೂ ಪದಕಗಳನ್ನು ನೀಡಲಾಗುತ್ತಿದೆ ಎಂದರು.ನಮ್ಮ ಕಾಲೇಜಿನಲ್ಲಿ ವಿಶಾಲವಾದ ಮೈದಾನವಿದ್ದು ಎಲ್ಲಾ ರೀತಿಯ ಆಟೋಟ ಸ್ಪರ್ಧೆಗಳಿಗೆ ಹಾಗೂ ದಿನನಿತ್ಯ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಕ್ರೀಡಾ ವಿಭಾಗದ ದೈಹಿಕ ನಿರ್ದೇಶಕರಾದ ಡಿ. ಸೋಮಶೇಖರ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ ,ಇಂದ್ರ ಬಹದ್ದೂರ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಶಿವಶಂಕರ್, ಬಿ. ಬಿ. ನೀಲಕಂಠಪ್ಪ, ಗೀತಾ ಕಿರಣ್, ಡಾ.ಶರತ್, ತಾಂತ್ರಿಕ ಶಿಕ್ಷಣ ಸಮಿತಿಯ ಮಾಧ್ಯಮ ಸಂಯೋಜಕರಾದ ಕಟ್ಟಾಯ ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕ್ರೀಡಾ ಕೂಟದಲ್ಲಿ ಕಾಲೇಜಿನ ಸಿವಿಲ್ ವಿಭಾಗ, ಮೆಕಾನಿಕಲ್ ವಿಭಾಗ,ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗ, ಇನ್ಸ್ಟ್ರುಮೇಶನ್ ಟೆಕ್ನಾಲಜಿ ವಿಭಾಗ, ಸಿ.ಎಸ್.,ಬಿ.ಎಸ್., ವಿಭಾಗ, ಎ.ಐ.ಎಮ್. ಎಲ್., ವಿಭಾಗ, ಇನ್ಫರ್ಮೇಷನ್ ಸೈನ್ಸ್ ವಿಭಾಗ, ಕಂಪ್ಯೂಟರ್ ಸೈನ್ಸ್ ವಿಭಾಗ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಕಮ್ಯೂನಿಕೇಶನ್ ವಿಭಾಗ, ಎಲೆಕ್ಟ್ರಾನಿಕ್ಸ್ ಅಂಡ್ ಎಲೆಕ್ಟ್ರಿಕಲ್ಸ್ ವಿದ್ಯಾರ್ಥಿಗಳು ಹಾಗೂ ಲಿಯೋ ಕ್ಲಬ್, ಲಿಟರರಿ ಕ್ಲಬ್, ರೊಟ್ರಾಕ್ಟ್ ಕ್ಲಬ್,ಇಕೋ ಕ್ಲಬ್, ಮಿ ರೈಸ್, ಟೆಕ್ನಿಕಲ್ ಕ್ಲಬ್, ಸೈನ್ಸ್ ಅಸೋಸಿಯೇಷನ್, ಡೆವಲಪ್ಸ್ ಟೀಮ್, ಸೋಲ್ ಕಲ್ಚರಲ್ ಟೀಮ್ ಗಳು ಭಾಗವಹಿಸಿದ್ದವು.
– ಶಿವಕುಮಾರ್ ಕಟ್ಟಾಯ
