ಕೆ.ಆರ್.ಪೇಟೆ ಕರವೇ ಬಳಗದಿಂದ ವೃದ್ಧರಿಗೆ ಅನ್ನಸಂತರ್ಪಣೆ ಸಸಿ ನೆಟ್ಟು ಆಚರಣೆ
ಕೆ.ಆರ್.ಪೇಟೆ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ 60ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕರವೇ ಮಂಡ್ಯ ಜಿಲ್ಲಾಧ್ಯಕ್ಷ ಹೊನ್ನೇನಹಳ್ಳಿ ವೇಣು ಹಾಗೂ ಕೆ.ಆರ್.ಪೇಟೆ ಕರವೇ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ನೇತೃತ್ವದಲ್ಲಿ ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಶ್ರೀ ಮಾತೃಭೂಮಿ ವೃದ್ಧಾಶ್ರಮದ ವೃದ್ಧರಿಗೆ ಅನ್ನ ಸಂತರ್ಪಣೆ ಹಾಗೂ ವೃದ್ಧಾಶ್ರಮದ ಆವರಣದಲ್ಲಿ ಸಸಿ ನೆಡುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಂಡ್ಯ ಜಿಲ್ಲಾ ಅಧ್ಯಕ್ಷ ವೇಣು ಮಾತನಾಡಿ ನಮ್ಮ ರಾಜ್ಯ ಅಧ್ಯಕ್ಷರಾದ ಕೆಚ್ಚೆದೆಯ ಟಿ.ಎ.ನಾರಾಯಣಗೌಡ ಅವರು ಕನ್ನಡ ಮತ್ತು ಕನ್ನಡಿಗರ ಹೋರಾಟದ ಸಂಕೇತ. ನೆಲ,ಜಲ, ಭಾಷೆಗಾಗಿ ಜೀವನವನ್ನೇ ಸುದೀರ್ಘ 40 ವರ್ಷಗಳಿಂದ ಯಾವುದೇ ಪ್ರಚಾರದ ಆಸೆ ಇಲ್ಲದೆ ಕನ್ನಡದ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ಅವರ 60ನೇ ವರ್ಷವನ್ನು ಸೇವೆಯಿಂದ ಆಚರಿಸುವುದು ಕರವೇ ಕಾರ್ಯಕರ್ತರಿಗೆ ಹೆಮ್ಮೆ,ಕನ್ನಡವೇ ಜಾತಿ, ಕನ್ನಡವೇ ಧರ್ಮ,ಕನ್ನಡವೇ ದೇವರು ಎಂಬ ಧ್ಯೇಯವಾಕ್ಯದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯನ್ನು ಮುನ್ನಡೆಸುತ್ತ ರಾಜ್ಯದ ಜೀವನಾಡಿ ಕಾವೇರಿ ನದಿ ನೀರಿನ ವಿವಾದ,ಬೆಳಗಾವಿ ಗಡಿ ವಿವಾದ, ಮತ್ತು ಕನ್ನಡ ನಾಮಫಲಕಗಳ ಕಡ್ಡಾಯ ಅಳವಡಿಕೆ ಸೇರಿದಂತೆ ಅನೇಕ ಮಹತ್ವದ ಹೋರಾಟಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ ಎಂದು ನುಡಿದರು.
ಬಳಿಕ ಮಾತನಾಡಿದ ಕರವೇ ತಾಲ್ಲೂಕು ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ಟಿ.ಎ.ನಾರಾಯಣಗೌಡ ಅವರು 60 ವರ್ಷ ತುಂಬಿದ ಹುಟ್ಟುಹಬ್ಬವನ್ನು ದುಂದು ವೆಚ್ಚ ಮಾಡದೆ, ಅಗತ್ಯವಿರುವವರಿಗೆ ಸೇವೆ ಮಾಡುವುದೇ ನಿಜವಾದ ಆಚರಣೆ. ಹಿರಿಯರ ಆಶೀರ್ವಾದವೇ ನನ್ನ ಶಕ್ತಿ ಎಂಬ ಚಿಂತನೆಯನ್ನ ಮೈಗೂಡಿಸಿಕೊಂಡಿರುವ ನಮ್ಮ ಸರ್ವೋಚ್ಚ ನುಡಿ ನಾಯಕ ಟಿ.ಎ ನಾರಾಯಣಗೌಡ ರವರ ಹುಟ್ಟು ಹಬ್ಬವನ್ನು ಅವರ ಆದರ್ಶದಂತೆ ಆಚರಿಸುತ್ತಿದ್ದೇವೆ ನಮ್ಮ ಜಿಲ್ಲಾ ಅಧ್ಯಕ್ಷ ವೇಣು ಹಾಗೂ ಕೆ.ಆರ್.ಪೇಟೆ ಕರವೇ ಬಳಗದಿಂದ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಹುಟ್ಟುಹಬ್ಬದ ಪ್ರಯುಕ್ತ ವೃದ್ಧರಿಗೆ ಹಣ್ಣು ಹಾಗೂ ಸಿಹಿ ತಿಂಡಿಗಳನ್ನು ಸಹ ವಿತರಿಸಲಾಯಿತು. ಕಾರ್ಯಕ್ರಮದುದ್ದಕ್ಕೂ ವೃದ್ಧರ ಮುಖದಲ್ಲಿ ಮಂದಹಾಸ ಜೊತೆಗೆ ವೃದ್ಧರು ಶುಭಕೋರಿದರು.
ಈ ಸಂದರ್ಭದಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಅಧ್ಯಕ್ಷ ಅಗ್ರಹಾರ ಬಾಚಹಳ್ಳಿ ಶ್ರೀನಿವಾಸ್,ಕರವೇ ಹಿರಿಯ ಮುಖಂಡ ಸಾಸಲು ಗುರುಮೂರ್ತಿ,ವಿದ್ಯಾರ್ಥಿ ಘಟಕದ ಅಧ್ಯಕ್ಷ ಚಿಕ್ಕೋನಹಳ್ಳಿ ಚೇತನ್,ಜಿಲ್ಲಾ ಉಪಾಧ್ಯಕ್ಷ ಶಿವಪ್ರಸಾದ್,ಯುವ ಘಟಕ ಅಧ್ಯಕ್ಷ ಆನಂದ್,ಕಾರ್ಯದರ್ಶಿ ಮನು,ಸಂಘಟನಾ ಕಾರ್ಯದರ್ಶಿ ಸ್ವಾಮಿ,ವೃದ್ಧಾಶ್ರಮದ ನಿರ್ವಾಹಕ ನಾಗಣ್ಣ, ಕರವೇ ಸದಸ್ಯರಾದ ಝೆಹಿದ್ ಅಹಮದ್,ಹೊಸಹೊಳಲು ಗೋಪಿ,ಕೊಮ್ಮೆನಹಳ್ಳಿ ಅನಿಲ್, ಸುನಿಲ್, ಕೈಗೊನಹಳ್ಳಿ ಪಾಂಡು, ಅಭಿಷೇಕ, ಪುನೀತ್,ಹರಿನಹಳ್ಳಿ ಲೋಕೇಶ್, ನಾಝಿರ್, ಬೋರೇಗೌಡ,ಶಿವಲಿಂಗ ಶಿವಕುಮಾರ್, ರವೀಂದ್ರಗೌಡ,ಶ್ರೀನಿವಾಸ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
