ಕೆ.ಆರ್.ಪೇಟೆ: ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘದ ಕೆ.ಆರ್.ಪೇಟೆ ತಾಲ್ಲೂಕು ನೂತನ ಅಧ್ಯಕ್ಷರಾಗಿ ಯುವ ಪತ್ರಕರ್ತ ಗಂಜಿಗೆರೆ ಮಹೇಶ್ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ.ಗಂಜಿಗೆರೆ ಗ್ರಾಮದ ಸ್ನೇಹ ಗೆಳೆಯರ ಬಳಗದ ವತಿಯಿಂದ ಕೆ.ಆರ್.ಪೇಟೆ ಪಟ್ಟಣದ ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ನೂತನ ಅಧ್ಯಕ್ಷ ಗಂಜಿಗೆರೆ ಮಹೇಶ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಗಂಜಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸಂತೋಷ್ ನಮ್ಮ ಗ್ರಾಮದ ಹೆಮ್ಮೆಯ ಯುವಕ ಮಹೇಶ್ ಅವರು ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗದಲ್ಲಿ ಇದ್ದು,ಆ ರಂಗದ ಸದಸ್ಯರಾಗಿ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ನಮ್ಮ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಮುಂದಿನ ದಿನಗಳಲ್ಲಿ ಅವರು ಜಿಲ್ಲಾ, ರಾಜ್ಯ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಗಂಜಿಗೆರೆ ಪ್ರಸನ್ನ,ಗಂಜಿಗೆರೆ ಮಹೇಶ್,ಡೈರಿ ನಿರ್ದೇಶಕ ಸಂತೋಷ್, ದೊಡ್ಡಸ್ವಾಮಿಗೌಡ,ವಿಜಯಣ್ಣ, ಹಿರಿಕಳಲೆ ಮಧು, ಲಿಂಗಾಪುರ ಯಶವಂತ್ ಸೇರಿದಂತೆ ಸ್ನೇಹ ಬಳಗದ ಅನೇಕ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ : ಮನು ಮಾಕವಳ್ಳಿ ಕೆ.ಆರ್.ಪೇಟೆ
