ತುಮಕೂರು:ನಗರದ ಎಸ್.ಐ.ಟಿ ಕಾಲೇಜಿನ ಕ್ಯಾಂಪಸ್ ನಲ್ಲಿ ವಾರ್ಷಿಕ ಸಂಯುಕ್ತ ತರಬೇತಿ ಶಿಬಿರದಲ್ಲಿ ಒಟ್ಟು 372 ಎನ್ಸಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲದೆ, 128 ವಿದ್ಯಾರ್ಥಿಗಳು ಥಲ್ ಸೈನಿಕ್ ಶಿಬಿರದ ಆಯ್ಕೆ ಪರೀಕ್ಷೆಯಲ್ಲಿ ಭಾಗವಹಿಸಿದರು.ಆಯ್ಕೆ ಪ್ರಕ್ರಿಯೆಯಲ್ಲಿ ಫೀಲ್ಡ್ ಸಿಗ್ನಲ್, ಜಡ್ಜಿಂಗ್ ಡಿಸ್ಟನ್ಸ್, ನಕ್ಷೆ ಓದುವುದು , ಆರೋಗ್ಯ ಮತ್ತು ಸ್ವಚ್ಛತೆ ಹಾಗೂ ಫೈರಿಂಗ್ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಸಲಾಯಿತು.
ಈ ಪೈಕಿ 57 ವಿದ್ಯಾರ್ಥಿಗಳು ವಿಜಯಪುರ (ಬಿಜಾಪುರ)ದಲ್ಲಿ ಜುಲೈ 17ರಿಂದ ನಡೆಯಲಿರುವ ರಾಜ್ಯ ಮಟ್ಟದ ಥಲ್ ಸೈನಿಕ್ ಆಯ್ಕೆ ಶಿಬಿರದಲ್ಲಿ ಬೆಂಗಳೂರು ‘ಎ’ ತಂಡವನ್ನು ಪ್ರತಿನಿಧಿಸಲಿದ್ದಾರೆ.ಶಿಬಿರದ ಸಿದ್ಧತೆ ಹಾಗೂ ಆಯ್ಕೆ ಪ್ರಕ್ರಿಯೆಗೆ ಕಮಾಂಡಿಂಗ್ ಆಫೀಸರ್ ಕರ್ನಲ್ ನರೇಂದ್ರ ಭಂಡಾರಿ, ಲೆಫ್ಟಿನೆಂಟ್ ಕರ್ನಲ್ ಅಭಿಲಾಷ್ ಬಿ, ಕ್ಯಾಪ್ಟನ್ ಹರಿಪ್ರಸಾದ್ ಬಿ.ಎಂ., ಕ್ಯಾಪ್ಟನ್ ಪ್ರದೀಪ್ ಕುಮಾರ್, ಲೆಫ್ಟಿನೆಂಟ್ ಸುಮುಖ, ವಿರೂಪಾಕ್ಷ, ಸುಬೇದಾರ್ ಮೇಜರ್ ದಿನೇಶ್ ಸಿಂಗ್ ಹಾಗೂ ಸುಬೇದಾರ್ ಯೋಗೀಶ್ ಮಾರ್ಗದರ್ಶನ ನೀಡಿದರು.ಕಳೆದ ವರ್ಷ ಕರ್ನಾಟಕ ತಂಡವು ಥಲ್ ಸೈನಿಕ್ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಗೆದ್ದಿದ್ದು, ಈ ಬಾರಿಯೂ ಅದೇ ಸಾಧನೆಯನ್ನು ಪುನರಾವರ್ತಿಸುವ ವಿಶ್ವಾಸ ವ್ಯಕ್ತವಾಗಿದೆ.
ವರದಿ : ಕೆ ಬಿ ಚಂದ್ರಚೂಡ್
