ಹಾಸನ : ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ನೌಕರರುಗಳಾದ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಪ್ರಾಧ್ಯಪಕರಾಗಿದ್ದ ಎನ್.ಎ. ರಂಜನ್, ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾದ ವಿಜಯರಾಘವ, ಮತ್ತು ಕಾಲೇಜು ನೌಕರರುಗಳಾದ ದೇವರಾಜ್, ಹಾಗೂ ಕಾಳಯ್ಯ ರವರು ರಂದು ನಿವೃತ್ತರಾದರು ಇವರಿಗೆ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ವತಿಯಿಂದ ಹಾಗೂ ಮಲೆನಾಡು ಇಂಜಿನಿರಿಂಗ್ ಕಾಲೇಜು ನೌಕರರ ಕಲ್ಯಾಣ ಸಂಘದ ವತಿಯಿಂದ ಮತ್ತು ಕಾಲೇಜಿನ ಸ್ಟಾಪ್ ಕ್ಲಬ್, ವತಿಯಿಂದ ಸನ್ಮಾನ ಮಾಡಲಾಯಿತು.

ಮಲೆನಾಡು ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ. ಹೆಚ್. ಜೆ.ಅಮರೇಂದ್ರ್ ರವರು ನಿವೃತ್ತ ನೌಕರರಿಗೆ ಕಾಲೇಜಿನಿಂದ ರೀಲಿವ್ ಪತ್ರ ನಿಡಿ. ಹಾಗೂ ಸನ್ಮಾನ ಮಾಡಿ ಮಾತಾನಾಡಿದ ಅವರು ನಿಮ್ಮ ನಿವೃತ್ತಿ ಜೀವನ ಸುಖವಾಗಿರಲೆಂದು ತಿಳಿಸಿದವರು, ನಮ್ಮ ಕಾಲೇಜಿನಲ್ಲಿ ಸುಮಾರು 30 ರಿಂದ ಮೂವತ್ತೈದು ವರ್ಷ ಕೆಲವರು ಕೆಲಸ ನಿರ್ವಹಿಸಿದ್ದಾರೆ ಇವರೆಲ್ಲರ ಸಹಕಾರದಿಂದ ಕಾಲೇಜ್ ಅಭಿವೃದ್ಧಿಗೆ ಸಹಕಾರಿಯಾಗಿದೆ ಸರ್ಕಾರದ ನಿಯಮಾನುಸಾರ ಅರವತ್ತು ವರ್ಷ ತುಂಬಿದವರು ನಿವೃತ್ತ ಗೊಳ್ಳುವುದು ಸಹಜ ಪ್ರಕ್ರಿಯೆ, ಕೆಲಸದ ಅವಧಿಯಲ್ಲಿ ಇದ್ದ ಜವಾಬ್ದಾರಿ ಆತಂಕಗಳು ಕಡಿಮೆಯಾಗಲಿದೆ, ತಮ್ಮದೇಅದ ರೀತಿಯಲ್ಲಿ ಸುಖ ಜೀವನ ನಡೆಸಲಿ ಇವರೆಲ್ಲರಿಗೂ ಹಾಗೂ ಇವರ ಕುಟುಂಬಸ್ಥರಿಗೆ ದೇವರು ಒಳ್ಳೇಯದು ಮಾಡಲಿ ಎಂದರು.

ಈ ಸಂಧರ್ಭದಲ್ಲಿ ಕಾಲೇಜು ನೌಕರರ ಕಲ್ಯಾಣ ಸಂಘದ ಕಾರ್ಯದರ್ಶಿ ಜಿ. ಪಾಂಡು ಕುಮಾರ್, ಸ್ಟಾಪ್ ಕಲ್ಬ್ ಕಾರ್ಯದರ್ಶಿ ಡಾ. ಕೀರ್ತಿಕುಮಾರ್, ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ರಾಜಣ್ಣ,
ಡಾ. ಪದ್ಮಜಲದೇವಿ,
ಡಿ ಸೋಮಶೇಖರ್, ವಿದ್ಯಾರ್ಥಿ ಕ್ಷೇಮಭಿವೃದ್ದಿ ಅಧಿಕಾರಿಗಳಾದ ಡಾ.ಇಂದ್ರ ಬಹೂದ್ದೂರು,
ಡಾ. ಶಿವಶಂಕರ, ಪರಿಕ್ಷಾ ವಿಭಾಗದ ಮುಖ್ಯಸ್ಥರಾದ
ಡಾ ಪ್ರಸನ್ನ,ಪ್ರಾದ್ಯಾಪಕರಾದ ಡಾ.ಎಲ್. ಕುಮಾರ ಸ್ವಾಮಿ. ಡಾ. ರವಿಕುಮಾರ್,
ಡಾ. ರಮೇಶ್,
ರಿಜಿಸ್ಟರ್ ಕುಮುದ,
ಅಧಿಕ್ಷಕರಾದ ಅರ್. ರಘು ಪ್ರಸಾದ್, ಬಿ.ಅರ್. ರವಿ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕರಾದ ಕಟ್ಪಾಯ ಶಿವಕುಮಾರ್, ನೌಕರ ಸಂಘದ ಪದಾಧಿಕಾರಿಗಳಾದ ಶಿವಪ್ಪ ನಾಯಕ, ಆಶೋಕ್ ಕುಮಾರ್, ಹೆಚ್.ಡಿ ತುಳಸಿಕುಮಾರ್, ವೆಂಕಟೇಶ್ , ಶಂಕರ್, ಮತ್ತಿತರರು ಉಪಸ್ಥಿತರಿದ್ದರು.
