ಕೊರಟಗೆರೆ. ತಾಲ್ಲೂಕು ಕೋಳಾಲ ಹೋಬಳಿಯ ಶ್ರೀ ಕ್ಷೇತ್ರ ನರಸಿಂಹಗಿರಿ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಯವರ 44ನೇ ಜನುಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ,
ರಕ್ತದಾನ ಶಿಬಿರ ಹಾಗೂ ನೇತ್ರತಪಾಷಣೆ ಶಿಬಿರವನ್ನು ಮಾಡಲಾಯಿತು.
ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಅವರ 44ನೇ ಹುಟ್ಟು ಹಬ್ಬವನ್ನು ಅವರ ಭಕ್ತರು ಬಹಳ ವೈಭವದಿಂದ ನೆರೆವೇರಿಸಿದರು.

ಸಿದ್ದರಬೆಟ್ಟ ಬಾಳೆ ಹೊನ್ನೂರು ಶಾಖಾ ಖಾಸ ಮಠದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಚಾರ್ಯ ಸ್ವಾಮಿಜಿ ಮಾತನಾಡಿ ನಾವಿಬ್ಬರು ಎರಡು ಕಣ್ಣುಗಳು ಇದ್ದಹಾಗೆ ಯಾವುದೇ ಕಾರ್ಯಕ್ರಮಗಳಿಗೆ ಹೋದರು ಜೊತೆಯಲ್ಲಿ ಹೋಗುತ್ತೇವೆ ನಮ್ಮಿಬ್ಬರಲ್ಲಿ ಯಾವುದೇ ಭೇದಭಾವವಿಲ್ಲದೆ ನಿಷ್ಕಲ್ಮಶ ಮನಸ್ಸಿನಿಂದ ಜೊತೆಯಲ್ಲಿ ಹೋಗುತ್ತೇವೆ ಎಂದರು.ಈ ವಿಶೇಷ ದಿನವು ಹೇರಳವಾದ ಸಂತೋಷ, ಶಾಂತಿ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ತರಲಿ. ಅವರ ದೈವಿಕ ಆಶೀರ್ವಾದಗಳು ಅವರ ಸುತ್ತಲಿನ ಎಲ್ಲರಿಗೂ ಮಾರ್ಗದರ್ಶನ ಮತ್ತು ಸ್ಫೂರ್ತಿ ನೀಡುತ್ತಲೇ ಇರಲಿ.
ಶ್ರೀ ಕ್ಷೇತ್ರದ ಅನ್ನ ದಾಸೋಹದ ಕಾರ್ಯ ಕರ್ತರು ಸಹ ಹೃದಯಿ ಶ್ರೀ ಶ್ರೀಪರಮ ಪೂಜ್ಯರಿಗೆ ಆಯುರಾರೋಗ್ಯ ಭಾಗ್ಯ ಕೊಟ್ಟು ನಮ್ಮ ಸಂಸ್ಕೃತಿ ಧರ್ಮವನ್ನು ರಕ್ಷಿಸಲು ಮತ್ತಷ್ಟು ಶಕ್ತಿಯನ್ನು ಕೊಡಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಶುಭಾಶಯ ಕೋರಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿಎನ್ ಕೃಷ್ಣಮೂರ್ತಿಯವರು ಶ್ರೀ ಶ್ರೀ ಪರಮ ಪೂಜ್ಯರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದರು. ನಮ್ಮ ಕ್ಷೇತ್ರದಲ್ಲಿ ಎರಡು ಧಾರ್ಮಿಕ ಕ್ಷೇತ್ರಗಳಾಗಿ ಎರಡು ಮಠಗಳಿದ್ದು ಇಂದಿಗೂ ಜಾತಿ ಧರ್ಮ ಮೇಲು-ಕೀಳು ಯಾವುದನ್ನು ಲೆಕ್ಕಿಸದೆ ಎಲ್ಲಾ ಸಮುದಾಯಗಳಿಗೂ ಸದ್ಮಾರ್ಗ ಶಿಕ್ಷಣ ದಾಸಗಳನ್ನು ನೀಡುತ್ತಾ ನಮ್ಮ ಕ್ಷೇತ್ರಕ್ಕೆ ಹೆಸರನ್ನು ಮಾಡಿರುವುದು ಶ್ರೀಗಳ ಶಕ್ತಿ ಅವರ ಆಧ್ಯಾತ್ಮಿಕ ಮಾರ್ಗದರ್ಶನವೂ ಎಲ್ಲರಿಗೂ ದಾರಿ ಎಂದರು.

ಇನ್ನು ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿಎನ್ ಕೃಷ್ಣಮೂರ್ತಿ.ಹಾಗೂ ಮಾನ್ಯ ಉಪಮುಖ್ಯಮಂತ್ರಿ ಪರಮೇಶ್ವರ್ ಆಪ್ತರಾದ ಸಲಹೆಗಾರ ನಾಗಣ್ಣನವರು ಪ್ರೇಮ ಮಹಾಲಿಂಗಪ್ಪ ಗ್ಯಾರೆಂಟಿ ಯೋಜನೆ.ತಾಲ್ಲೂಕು ಅಧ್ಯಕ್ಷರದ ವೆಂಕಟೇಶ್,ಮತ್ತು ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವರಾಮಯ್ಯ ಎ.ಡಿ. ಬಲರಾಮಯ್ಯ ಮಾಜಿ ಅಧ್ಯಕ್ಷರು ಆರ್ ಎಸ್ ರಾಜಣ್ಣ. ಬೋರಣ್ಣ. ಚಿಕ್ಕ ದೊಡ್ಡ ವಾಡಿ ರಾಮಕೃಷ್ಣಪ್ಪ ಮಾಜಿ ಅಧ್ಯಕ್ಷರು ಶ್ರೀನಿವಾಸ್ ಮೂರ್ತಿ. ಉಮೇಶ್. ಗಿರೀಶ್ ವಜ್ಜಿನ ಕುರಿಕೆ ರಂಗಣ್ಣ ಕರ್ನಾಟಕ ರಕ್ಷಣಾ ವೇದಿಕೆ ಕೊರಟಗೆರೆ ತಾಲ್ಲೂಕು ನರಸಿಂಹರಾಜು ಹಾಗೂ ಪಿ.ಎನ್.ಅಭಿಮಾನಿಗಳು ಶ್ರೀಮಠದಲ್ಲಿ ಉಪಸ್ಥಿತರಿದ್ದರು
ವರದಿ ನರಸಿಂಹಯ್ಯ ಹೊಸಕೋಟೆ
